ETV Bharat / international

ಕಣ್ಮರೆಯಾಗಿದ್ದ ರಷ್ಯಾದ ಪ್ರಯಾಣಿಕ ವಿಮಾನ ಪತ್ತೆ : ಎಲ್ಲರೂ ಸೇಫ್​ - ಸೈಬೀರಿಯಾದಲ್ಲಿ ವಿಮಾನ ನಾಪತ್ತೆ

ಸುಮಾರು ಎರಡು ವಾರಗಳ ಹಿಂದೆ ಆ್ಯಂಟೋನೋವ್ ಆ್ಯನ್​​-26 ವಿಮಾನವು ಹವಾಮಾನದಿಂದ ಗೋಚರತೆ ಪ್ರಮಾಣ ಕಡಿಮೆ ಇದ್ದ ಕಾರಣದಿಂದಾಗಿ ರಷ್ಯಾದ ಪೂರ್ವದಲ್ಲಿರುವ ಕಮ್ಚಕ್ತಾ ಪ್ರಸ್ಥಭೂಮಿಯ ಶಿಖರವೊಂದಕ್ಕೆ ಬಡಿದು ಪತನಗೊಂಡಿತ್ತು. ಈ ಘಟನೆಯಲ್ಲಿ 28 ಮಂದಿ ಸಾವನ್ನಪ್ಪಿದ್ದರು..

Russian Plane Goes Missing In Siberia With At Least 13 On Board
17 ಪ್ರಯಾಣಿಕರಿದ್ದ ರಷ್ಯಾದ ವಿಮಾನ ಕಣ್ಮರೆ: ಶೋಧ ಕಾರ್ಯ ಆರಂಭ
author img

By

Published : Jul 16, 2021, 6:58 PM IST

Updated : Jul 16, 2021, 9:12 PM IST

ಮಾಸ್ಕೋ, ರಷ್ಯಾ : ರಾಡಾರ್ ನಿಯಂತ್ರಣದಿಂದ ತಪ್ಪಿಸಿಕೊಂಡಿದ್ದ ವಿಮಾನ ಪತ್ತೆಯಾಗಿದ್ದು, ಎಲ್ಲಾ 19 ಪ್ರಯಾಣಿಕರು ಸೇಫಾಗಿದ್ದಾರೆಂದು ರಷ್ಯಾದ ನ್ಯೂಸ್​ ಏಜೆನ್ಸಿಗಳು ವರದಿ ಮಾಡಿವೆ. ಆ್ಯಂಟೋನೋವ್ ಆ್ಯನ್​​-28 ಎಂಬ ವಿಮಾನ ಸೈಬೀರಿಯಾದ ಟೋಮ್ಸ್ಕ್ ಪ್ರದೇಶ​ ಮೇಲೆ ಹಾರಾಡುವಾಗ ರಾಡಾರ್​​ ನಿಯಂತ್ರಣದಿಂದ ತಪ್ಪಿಸಿಕೊಂಡಿತ್ತು. ವಿಮಾನವನ್ನು ಸಂಪರ್ಕಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ.

ವಿಮಾನದಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡು ಬಂದ ಕಾರಣದಿಂದ ಅನ್ನು ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನದಲ್ಲಿದ್ದ ನಾಲ್ವರು ಮಕ್ಕಳು, ಮೂವರು ಸಿಬ್ಬಂದಿ ಸೇರಿದಂತೆ ಯಾರಿಗೂ ಅಪಾಯವಾಗಿಲ್ಲ ಎಂದು ಎಪಿಟಿಎನ್ ವರದಿ ಮಾಡಿದೆ.

ಟೋಮ್ಸ್ಕ್ ಪ್ರದೇಶದ ಕೆಡ್ರೋವಿ ನಗರದಿಂದ ಹೊರಟ್ಟಿದ್ದ ಈ ವಿಮಾನದಲ್ಲಿ 13ರಿಂದ 17 ಪ್ರಯಾಣಿಕರು ಇದ್ದರೆಂದು ಟಿಎಎಸ್​ಎಸ್ (TASS) ಮತ್ತು ರಿಯಾ (RIA) ನ್ಯೂಸ್ ಏಜೆನ್ಸಿಗಳು ವರದಿ ಮಾಡಿದ್ದು, ನಂತರ ಅಧಿಕಾರಿಗಳು ವಿಮಾನದಲ್ಲಿ 19 ಮಂದಿ ಪ್ರಯಾಣಿಕರಿದ್ದರೆಂದು ಸ್ಪಷ್ಟನೆ ನೀಡಿದ್ದಾರೆ.

ಸುಮಾರು ಎರಡು ವಾರಗಳ ಹಿಂದೆ ಆ್ಯಂಟೋನೋವ್ ಆ್ಯನ್​​-26 ವಿಮಾನವು ಹವಾಮಾನದಿಂದ ಗೋಚರತೆ ಪ್ರಮಾಣ ಕಡಿಮೆ ಇದ್ದ ಕಾರಣದಿಂದಾಗಿ ರಷ್ಯಾದ ಪೂರ್ವದಲ್ಲಿರುವ ಕಮ್ಚಕ್ತಾ ಪ್ರಸ್ಥಭೂಮಿಯ ಶಿಖರವೊಂದಕ್ಕೆ ಬಡಿದು ಪತನಗೊಂಡಿತ್ತು. ಈ ಘಟನೆಯಲ್ಲಿ 28 ಮಂದಿ ಸಾವನ್ನಪ್ಪಿದ್ದರು.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಹೆಲಿಕಾಪ್ಟರ್ ಪತನ: ಪೈಲಟ್​ ಮೃತ, ಮಹಿಳಾ ಪೈಲಟ್​ ಗಂಭೀರ

ರಷ್ಯಾದ ವಿಮಾನಯಾನ ಸಚಿವಾಲಯವು ಅನೇಕ ಮುಂಜಾಗ್ರತಾ ಕ್ರಮಗಳನ್ನು ಇತ್ತೀಚಿನ ವರ್ಷಗಳಲ್ಲಿ ತೆಗೆದುಕೊಂಡಿದೆ. ಹಳೆಯ ವಿಮಾನಗಳನ್ನೇ ಬಳಸುತ್ತಿರುವ ಕಾರಣದಿಂದ ವಿಮಾನಗಳು ಅಪಘಾತಕ್ಕೆ ಸಿಲುಕುತ್ತಿವೆ ಎನ್ನಲಾಗಿದೆ.

Last Updated : Jul 16, 2021, 9:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.