ETV Bharat / international

ಕೊರೊನಾ ಲಸಿಕೆ ಕಂಡುಹಿಡಿಯುವ ನಿಟ್ಟಿನಲ್ಲಿ ರಷ್ಯಾ ಮಹತ್ವದ ಮೈಲುಗಲ್ಲು.. - ರಷ್ಯಾದ ಮಾಸ್ಕೋ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕನಿಷ್ಠ 26 ಕೋವಿಡ್​ -19 ವ್ಯಾಕ್ಸಿನೇಷನ್‌ ಅಭ್ಯರ್ಥಿಗಳು ವಿಶ್ವದಾದ್ಯಂತ ಕ್ಲಿನಿಕಲ್ ಪ್ರಯೋಗಗಳಲ್ಲಿದ್ದಾರೆ. ಇದರಲ್ಲಿ ಗಮಾಲಿಯಾ ಇನ್ಸ್‌ಟಿಟ್ಯೂಟ್‌ನ ಆರಂಭಿಕ ಹಂತದ ಒಬ್ಬರು ಸೇರಿದ್ದಾರೆ ಎಂದು ಸಿಎನ್‌ಬಿಸಿ ಸೋಮವಾರ ವರದಿ ಮಾಡಿದೆ..

Russia bats for safety of its COVID-19 vaccine
ನಾವು ಅಭಿವೃದ್ಧಿಪಡಿಸಿದ ಕೋವಿಡ್​-19 ಲಸಿಕೆ ಸುರಕ್ಷಿತವಾಗಿದೆ: ರಷ್ಯಾ ರಕ್ಷಣಾ ಸಚಿವಾಲಯ
author img

By

Published : Aug 5, 2020, 7:56 PM IST

ಮಾಸ್ಕೋ(ರಷ್ಯಾ) : ಗಮಾಲಿಯಾ ಸೈಂಟಿಫಿಕ್ ರಿಸರ್ಚ್ ಇನ್ಸ್‌ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿಯ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದ ಕೋವಿಡ್​-19 ಲಸಿಕೆ ಸುರಕ್ಷಿತವಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.

ಆಗಸ್ಟ್ 3 ರಂದು ಲಸಿಕೆಯ ಕ್ಲಿನಿಕಲ್ ಪ್ರಯೋಗಗಳಲ್ಲಿ ಭಾಗವಹಿಸುವವರ ಅಂತಿಮ ವೈದ್ಯಕೀಯ ಪರೀಕ್ಷೆಯು ಬರ್ಡೆಂಕೊ ಮುಖ್ಯ ಮಿಲಿಟರಿ ಕ್ಲಿನಿಕಲ್ ಆಸ್ಪತ್ರೆಯಲ್ಲಿ ನಡೆಯಿತು. ವ್ಯಾಕ್ಸಿನೇಷನ್‌ನಿಂದಾಗಿ ಎಲ್ಲಾ ಸ್ವಯಂಸೇವಕರ ರೋಗನಿರೋಧಕ ಶಕ್ತಿ ಸ್ಪಷ್ಟವಾಗಿದೆ. ಸ್ವಯಂಸೇವಕರ ಚಟುವಟಿಕೆಗಳಲ್ಲಿ ಯಾವುದೇ ಅಡ್ಡಪರಿಣಾಮಗಳು ಅಥವಾ ಅಸಹಜತೆಗಳಿಲ್ಲ ಎಂದು ಸಚಿವಾಲಯ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕನಿಷ್ಠ 26 ಕೋವಿಡ್​ -19 ವ್ಯಾಕ್ಸಿನೇಷನ್‌ ಅಭ್ಯರ್ಥಿಗಳು ವಿಶ್ವದಾದ್ಯಂತ ಕ್ಲಿನಿಕಲ್ ಪ್ರಯೋಗಗಳಲ್ಲಿದ್ದಾರೆ. ಇದರಲ್ಲಿ ಗಮಾಲಿಯಾ ಇನ್ಸ್‌ಟಿಟ್ಯೂಟ್‌ನ ಆರಂಭಿಕ ಹಂತದ ಒಬ್ಬರು ಸೇರಿದ್ದಾರೆ ಎಂದು ಸಿಎನ್‌ಬಿಸಿ ಸೋಮವಾರ ವರದಿ ಮಾಡಿದೆ. ಆದರೆ, ಯುಎನ್ ಆರೋಗ್ಯ ಸಂಸ್ಥೆ ತನ್ನ ಇತ್ತೀಚಿನ ನವೀಕರಣದಲ್ಲಿ ರಷ್ಯಾದಿಂದ ಯಾವುದೇ ಎರಡನೇ ಅಥವಾ ಮೂರನೇ ಹಂತದ ಪ್ರಯೋಗಗಳನ್ನು ಪಟ್ಟಿ ಮಾಡಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.