ETV Bharat / international

ತಾಲಿಬಾನ್​​​​​​​​​ನೊಂದಿಗೆ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಇನ್ನೊಂದೇ ಮೆಟ್ಟಿಲು...ಹೀಗಿದೆ ಪ್ರಕ್ರಿಯೆ - ತಾಲಿಬಾನ್​​ ಆರಂಭ

ತಾಲಿಬಾನ್​ ಮತ್ತು ಅಮೆರಿಕ ನಡುವೆ ಕದನ ವಿರಾಮದ ಒಪ್ಪಂದದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದರೂ ಇದೂವರೆಗೂ ಅದು ಕಾರ್ಯರೂಪಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ಆ ಸಮಯ ಸಮೀಪಿಸಿದ್ದು, ಈ ಒಪ್ಪಂದಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿ ಇದೆ.

Afghan Peace Process
ತಾಲಿಬಾನ್​​ ಶಾಂತಿ ಒಪ್ಪಂದದ ಐತಿಹಾಸಿಕ ಪ್ರಕ್ರಿಯೆ
author img

By

Published : Feb 28, 2020, 7:33 PM IST

Updated : Feb 28, 2020, 7:47 PM IST

ಕಾಬೂಲ್​​(ಅಫ್ಘಾನಿಸ್ತಾನ್​): ತಾಲಿಬಾನ್​​ ಮತ್ತು ಅಮೆರಿಕ ದೇಶದ ನಡುವೆ ಐತಿಹಾಸಿಕ ಕದನ ವಿರಾಮ ಒಪ್ಪಂದಕ್ಕೆ ಇನ್ನೇನು ಕೇವಲ ಒಂದು ದಿನ ಮಾತ್ರ ಬಾಕಿ ಇದ್ದು, ಅಫ್ಘಾ ನಿಸ್ತಾನದಲ್ಲಿರುವ ಅಮೆರಿಕ ಸೈನಿಕರು ಈ ಒಪ್ಪಂದದ ಬಳಿಕ ತಮ್ಮ ತವರಿಗೆ ಹಿಂದಿರುಗಲಿದ್ದಾರೆ.

ಈ ಐತಿಹಾಸಿಕ ಒಪ್ಪಂದದ ಬಗ್ಗೆ 2001ರಿಂದಲೂ ಚರ್ಚೆ ನಡೆಯುತ್ತಿದ್ದರೂ ಇದು ಕಾರ್ಯರೂಪಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಈ ಕದನ ವಿರಾಮದ ಮುಖ್ಯ ಧ್ಯೇಯವೇ ಅಲ್ ಖೈದಾದಂತಹ ಭಯೋತ್ಪಾದಕ ಗುಂಪುಗಳನ್ನು ಆಶ್ರಯಿಸದಂತೆ ತಾಲಿಬಾನ್‌ನಿಂದ ಬದ್ಧತೆ ಪಡೆದುಕೊಳ್ಳುವುದು.

ತಾಲಿಬಾನ್​​ ಎಂದರೇನು? ಆ​​ ಬಗ್ಗೆ ನಿಮಗೆಷ್ಟು ಗೊತ್ತು?:

Taliban
ತಾಲಿಬಾನ್​ ಬಗ್ಗೆ ಇನ್ನಷ್ಟು ಮಾಹಿತಿ

ತಾಲಿಬಾನ್​​ ಎಂದರೆ ವಿದ್ಯಾರ್ಥಿಗಳು ಎಂಬ ಅರ್ಥವನ್ನು ನೀಡುತ್ತದೆ. 1996ರ ಸೆಪ್ಟೆಂಬರ್​​ನಲ್ಲಿ ಕಾಬೂಲ್​ ಪತನದ ನಂತರ ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ತನ್ನ ಆಡಳಿತವನ್ನು ಪ್ರಾರಂಭಿಸುತ್ತದೆ. ತದನಂತರದ ದಿನಗಳಲ್ಲಿ ಇದನ್ನು ಇಸ್ಲಾಮಿಕ್​ ಎಮಿರೇಟ್​​ ಎಂದು ಕರೆಯಲಾಗುತ್ತದೆ. ತಾಲಿಬಾನ್​​ ಗುಂಪು ಮೊಹಮ್ಮದ್ ಒಮರ್ ನೇತೃತ್ವದ ಧಾರ್ಮಿಕ ವಿದ್ಯಾರ್ಥಿಗಳನ್ನು ಒಳಗೊಂಡಿತ್ತು, ಮುಲ್ಲಾ ಒಮರ್​ ಎಂದೂ ಆತನನ್ನು ಕರೆಯಲಾಗುತ್ತಿತ್ತು.

Media Reports
ಕೃಪೆ: ಮಾಧ್ಯಮ ಮೂಲಗಳು

ತಾಲಿಬಾನ್​​ ಆರಂಭವಾಗಿದ್ದು ಹೇಗೆ?:

1994: ತಾಲಿಬಾನ್ ಎಂಬುದು ಧಾರ್ಮಿಕ ವಿದ್ಯಾರ್ಥಿಗಳ ಒಂದು ಗುಂಪಾಗಿದ್ದು, ಇಲ್ಲಿರುವ ಎಲ್ಲ ಸಂಘಟಕರು ಗುಂಪಿನ ಬೆಳವಣಿಗೆ ಮತ್ತು ಯಶಸ್ಸಿಗಾಗಿ ಪ್ರಮುಖ ಪಾತ್ರ ವಹಿಸುತ್ತಾರೆ.

1996: ತಾಲಿಬಾನ್ ಸಂಘಟನೆಯ ಮೂಲಕ ಇಸ್ಲಾಮಿಕ್​ ಎಮಿರೇಟ್ಸ್​ನ್ನು ಸ್ಥಾಪಿಸಲಾಯಿತು ಹಾಗೂ ತದನಂತರದ ದಿನಗಳಲ್ಲಿ ಇದು ತಾಲಿಬಾನ್​ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿತು.

1998: ಶೇ.90ರಷ್ಟು ಅಫ್ಘಾನಿಸ್ತಾನವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ತಾಲಿಬಾನ್​ ಯಶಸ್ವಿಯಾಯಿತು.

ತಾಲಿಬಾನ್​​ ಮಾಡಿದ್ದೇನು?:

ತಾಲಿಬಾನ್​ ಸಂಘಟನೆ ಅಫ್ಘಾನಿಸ್ತಾವನ್ನ ತನ್ನ ಹಿಡಿತಕ್ಕೆ ಪಡೆದ ಕೂಡಲೇ ಮಾಡಿದ ಕೆಲಸವೆಂದರೆ ದೇಶದ ಆರ್ಥಿಕತೆ ಮತ್ತು ಮೂಲಸೌಕರ್ಯಗಳನ್ನು ನಾಶಪಡಿಸಿದ್ದು. ಮೂಲ ಸರಬರಾಜುಗಳನ್ನು ಅತಿ ಕಡಿಮೆಯಾಗಿ ಪೂರೈಕೆ ಮಾಡಿ, ಟಿವಿ, ಸಂಗೀತ ಮತ್ತು ಸಿನಿಮಾವನ್ನು ನಿಷೇಧಿಸಲಾಗಿತ್ತು.

ದೇಶದ ಜನತೆಗೆ ಕಟ್ಟುನಿಟ್ಟಾದ ಡ್ರೆಸ್​​ ಕೋಡ್​ಗಳನ್ನು ಜಾರಿಗೊಳಿಸಲಾಗಿತ್ತು. ಸ್ತ್ರೀ ಶಿಕ್ಷಣವನ್ನು ಮೊಟಕುಗೊಳಿಸಿ, ಅಫ್ಘಾನಿಸ್ತಾನದಲ್ಲಿ ಕ್ರೂರ ಶಿಕ್ಷೆಗಳನ್ನು ಜಾರಿ ಮಾಡಲಾಗಿತ್ತು.

ತಾಲಿಬಾನ್​​ನ ಸಂಪನ್ಮೂಲಗಳೇನು?

  • ಓಪಿಯಮ್​​(ಅಫೀಮು) ಕೃಷಿಗೆ ತೆರಿಗೆ ವಿಧಿಸುವ ಮೂಲಕ ತಾಲಿಬಾನ್ ಹೆಚ್ಚು ಹಣವನ್ನು ಸಂಪಾದಿಸಿತು. ಶೇ 10 ರಷ್ಟು ಕೃಷಿ ತೆರಿಗೆಯನ್ನು ಪಾವತಿಸುವಂತೆ ತಾಲಿಬಾನ್​ ಆದೇಶ ಹೊರಡಿಸಿತು.
  • ಅಫೀಮನ್ನು ಖರೀದಿಸಿ ಹೆರಾಯಿನ್​​ ಆಗಿ ಪರಿವರ್ತಿಸುವ ಪ್ರಯೋಗಾಲಯಗಳ ಮೇಲೆಯೂ ಸಹ ತಾಲಿಬಾನ್​​ ತೆರಿಗೆಯನ್ನು ಹೇರ ತೊಡಗಿತು.
  • ಅಕ್ರಮವಾಗಿ ಔಷಧಗಳನ್ನು ರಫ್ತು ಮಾಡುವ ವ್ಯಾಪಾರಿಗಳ ಮೇಲೆಯೂ ತೆರಿಗೆ ಹೇರುವ ಮೂಲಕ ತಾಲಿಬಾನ್​ ಹೆಚ್ಚು ಸಂಪನ್ಮೂಲಭರಿತಬಾಗಲು ಕಾರಣವಾಯಿತು.
Media Reports
ಕೃಪೆ: ಮಾಧ್ಯಮ ಮೂಲಗಳು

ಏನಿದು ಅಮೆರಿಕ ತಾಲಿಬಾನ್​ ಒಪ್ಪಂದ:

ಅಮೆರಿಕ ಮತ್ತು ಅಫ್ಘಾನಿಸ್ತಾನದ ನಡುವೆ ಕದನ ವಿರಾಮದ ಒಪ್ಪಂದ ಇದಾಗಿದ್ದು, ಈ ಒಪ್ಪಂದದ ಬಳಿಕ ಅಫ್ಘಾನಿಸ್ತಾನದಲ್ಲಿರುವ ಅಮೆರಿಕದ ಸೇನಾಬಲವನ್ನು 13 ಸಾವಿರದಿಂದ 8,600ಕ್ಕೆ ತಗ್ಗಿಸಲಿದೆ. ಹಾಗೂ ಇನ್ನುಳಿದ ಸೈನಿಕರು ಅಲ್ಲಿಯೇ ವಾಸ್ತವ್ಯ ಹೂಡಲಿದ್ದು, ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಹಾಗೂ ಆಗು ಹೋಗುಗಳ ಬಗ್ಗೆ ನಿಗಾ ಇಡಲಿದ್ದಾರೆ.

Media Reports
ಕೃಪೆ: ಮಾಧ್ಯಮ ಮೂಲಗಳು

ಈ ಒಪ್ಪಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​ ತಾತ್ವಿಕವಾಗಿ ಒಪ್ಪಿಗೆ ನೀಡಿದ್ದು, ಒಪ್ಪಂದದ ಪ್ರಕಾರ ಅಲ್​-ಖೈದಾ ಸಂಘಟನೆ ವಿರುದ್ದ ಅಪ್ಘಾನಿಸ್ತಾನದಲ್ಲಿ ಯುಎಸ್​​ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಮುಂದುವರೆಸಲಿದೆ ಎಂದು ತಿಳಿದು ಬಂದಿದೆ.

Last Updated : Feb 28, 2020, 7:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.