ETV Bharat / international

ಭಾರತದಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ: ಆಸಿಯಾನ್​ ರಾಷ್ಟ್ರಗಳಿಗೆ ಮೋದಿ ಕರೆ - ಜಪಾನ್ ಪ್ರಧಾನಿಯನ್ನ ಭೇಟಿ ಮಾಡಿದ ಮೋದಿ

ಮೂರು ದಿನಗಳ ಥಾಯ್ಲೆಂಡ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು 14ನೇ ಈಸ್ಟ್​ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ.

ಮೋದಿ
author img

By

Published : Nov 4, 2019, 4:48 PM IST

ಬ್ಯಾಂಕಾಕ್: ಥಾಯ್ಲೆಂಡ್ ಪ್ರವಾಸದ ಎರಡನೇ ದಿನವಾದ ಇಂದು ಪ್ರಧಾನಿ ಮೋದಿ ಆಸಿಯನ್ ಶೃಂಗಸಭೆಯಲ್ಲಿ ಭಾಗವಹಿಸಿ ಹೂಡಿಕೆದಾರರನ್ನ ಭಾರತಕ್ಕೆ ಆಹ್ವಾನಿಸಿದ್ದಾರೆ.

ಶೃಂಗಸಭೆಯಲ್ಲಿ ಭಾಗವಹಿಸಿ ಹೂಡಿಕೆ ದಾರರನ್ನ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಭಾರತದಲ್ಲಿ ಹೂಡಿಕೆ ಮಾಡಲು ಇದು ಉತ್ತಮವಾದ ಸಮಯ ಕಳೆದ 5 ವರ್ಷಗಳಲ್ಲಿ ಭಾರತಕ್ಕೆ 286 ಬಿಲಿಯನ್ ಅಮೆರಿಕ ಡಾಲರ್ ಹಣ ವಿದೇಶಿ ನೇರ ಹೂಡಿಕೆಯಿಂದ ಬಂದಿದೆ. ಕಳೆದ 20 ವರ್ಷಗಳಲ್ಲಿ ಭಾರತಕ್ಕೆ ಬಂದ ಹಣದ ಅರ್ಧದಷ್ಟು ಹಣ ಕೇವಲ 5 ವರ್ಷಗಳಲ್ಲೇ ಹರಿದುಬಂದಿದೆ. ನಾನು ತುಂಬಾ ಖಚಿತವಾಗಿ ಹೇಳಬಲ್ಲೆ ಈದು ಬಾರತದಲ್ಲಿ ಹೂಡಿಕೆ ಮಾಡಲು ಇರುವ ಉತ್ತಮ ಸಮಯ ಎದಿದ್ದಾರೆ.

ಇದಾದ ನಂತರ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಚರ್ಚೆ ವೇಳೆ ಉಭಯ ರಾಷ್ಟ್ರಗಳ ರಕ್ಷಣೆ ಮತ್ತು ಭದ್ರತಾ ವಿಚಾರದಲ್ಲಿ ಪರಸ್ಪರ ಸಹಕಾರದ ಕುರಿತು ಮಾತುಕತೆ ನಡೆಸಿದ್ದಾರೆ.

ಇದೇ ವೇಳೆ, ಮೊದಿ ವಿಯೆಟ್ನಾಂ ಪ್ರಧಾನಮಂತ್ರಿ ಗುಯೆನ್‌ ಕ್ಸುವಾನ್‌ ಫು ಅವರನ್ನ ಭೇಟಿ ಮಾಡಿದ್ದಾರೆ. ಭೇಟಿ ವೇಳೆ, ಪರಸ್ಪರ ವ್ಯಾಪಾರಾಭಿವೃದ್ಧಿ ಕುರಿತು ಚರ್ಚೆ ನಡೆಸಿದ್ದಾರೆ.

ಇನ್ನು 14ನೇ ಈಸ್ಟ್​ ಏಷ್ಯಾ ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ರಾಷ್ಟ್ರಗಳ ನಾಯಕರು ಒಟ್ಟಿಗೆ ಫೋಟೋಕ್ಕೆ ಪೋಸ್​ ನೀಡಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.