ಅಲ್ಮಾಟಿ(ಕಜಾಕಿಸ್ತಾನ): ಸುಮಾರು 100 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಪ್ರಯಾಣಿಕ ವಿಮಾನ ಪತನವಾದ ಘಟನೆ ಕಜಾಕಿಸ್ತಾನದಲ್ಲಿ ನಡೆದಿದೆ.
ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆದಿದ್ದು, ಕಜಕಿಸ್ತಾನದ ಅಲ್ಮಾಟಿ ಏರ್ಪೋರ್ಟ್ ಬಳಿ ದುರಂತ ಸಂಭವಿಸಿದೆ. ಬೇಕ್ ಏರ್‌ಲೈನ್ಸ್‌ಗೆ ಸೇರಿರುವ ವಿಮಾನ ಇದಾಗಿದ್ದು, ಅಲ್ಲಿನ ವಿಮಾನ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ, ಸದ್ಯ 14 ಪ್ರಯಾಣಿಕರು ಸಾವನ್ನಪ್ಪಿದ್ದಾಗಿ ಮಾಹಿತಿ ಬರುತ್ತಿದೆ. ಇದರ ಜತೆಗೆ 35ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾಗಿ ತಿಳಿದು ಬಂದಿದೆ.
ವಿಮಾನದಲ್ಲಿ ಐವರು ಸಿಬ್ಬಂದಿ ಇದ್ದರು ಎನ್ನಲಾಗುತ್ತಿದ್ದು, ಏಕಾಏಕಿಯಾಗಿ ನಿಯಂತ್ರಣ ಕಳೆದುಕೊಂಡ ವಿಮಾನ ಪತನಗೊಂಡಿದೆ. ಸದ್ಯ ಸ್ಥಳದಲ್ಲಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತಿದೆ.
ಈ ವಿಮಾನ ಕಜಾಕಿಸ್ತಾನದ ಅತಿ ದೊಡ್ಡ ನಗರ ಅಲ್ಮಾಟಿಯಿಂದ ನೂರ್ ಸುಲ್ತಾನ್‌ಗೆ ತೆರಳುತ್ತಿತ್ತು ಎಂಬ ಮಾಹಿತಿ ದೊರೆತಿದೆ.