ಮನಿಲಾ: ಫಿಲಿಪಿನ್ಸ್‌ನಲ್ಲಿ ಇಂದು ಚಂಡಮಾರುತದಿಂದ 13 ಜನ ಕಾಣೆಯಾಗಿದ್ದಾರೆ. ಇದರಲ್ಲಿ 12 ಜನ ಮೀನುಗಾರರಿದ್ದಾರೆ. ಚಂಡಮಾರುತದ ಹಿನ್ನೆಲೆ ಸಾವಿರಾರು ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಹೇಳಲಾಗಿದೆ. ಸಾವುನೋವುಗಳ ಬಗ್ಗೆ ತಕ್ಷಣದ ವರದಿಗಳು ಬಂದಿಲ್ಲ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.
ಚಂಡಮಾರುತವು ದಕ್ಷಿಣ ಚೀನಾ ಸಮುದ್ರದ ಕಡೆಗೆ ಪಶ್ಚಿಮಕ್ಕೆ ಬೀಸುತ್ತಿದ್ದು, ಗಂಟೆಗೆ 125 ಕಿಲೋಮೀಟರ್ ವೇಗದ ಗಾಳಿ ಮತ್ತು 150 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿದೆ ಎಂದು ಹೇಳಿದ್ದಾರೆ.
ಕನಿಷ್ಟ 25 ಸಾವಿರ ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದೆ. ಸುಮಾರು 20,000 ಶಾಲೆಗಳು ಮತ್ತು ಸರ್ಕಾರಿ ಕಟ್ಟಡಗಳಲ್ಲಿ ಗಂಜಿ ಕೇಂದ್ರ ಸ್ಥಾಪನೆ ಮಾಡಲಾಗಿದೆ ಎಂದು ನಾಗರಿಕ ರಕ್ಷಣಾ ಕಚೇರಿ ತಿಳಿಸಿದೆ.
ರಾತ್ರಿಯಿಡೀ ಸುರಿಯುತ್ತಿರುವ ಮಳೆಯಿಂದಾಗಿ ಕೆಲ ಗ್ರಾಮೀಣ ಪ್ರದೇಶಗಲಲ್ಲಿ ಪ್ರವಾಹ ಉಂಟಾಗಿದೆ. ನಂತರ ತೀವ್ರ ಗಾಳಿಯಿಂದ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಇದರಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಚಂಡಮಾರುತ ಹಾದುಹೋದ ನಂತರ ಕೆಲವು ಪಟ್ಟಣಗಳಲ್ಲಿ ರಸ್ತೆ ಮೇಲೆ ಬಿದ್ದಿರುವ ಮರಗಳ ಅವಶೇಷಗಳನ್ನು ಅಧಿಕಾರಿಗಳು ತೆರವುಗೊಳಿಸುತ್ತಿದ್ದಾರೆ.
ಕರಾವಳಿ ಕಾವಲು ಪಡೆ ಹಡಗುಗಳು ಮತ್ತು ದೋಣಿ ದೋಣಿಗಳನ್ನು ಸಮುದ್ರಕ್ಕೆ ಹೋಗದಂತೆ ನಿರ್ಬಂಧಿಸಲಾಗಿದೆ. ಇದಿರಂದ 1,800 ಕ್ಕೂ ಹೆಚ್ಚು ಸರಕು ಟ್ರಕ್ ಚಾಲಕರು, ಕಾರ್ಮಿಕರು ಮತ್ತು ಪ್ರಯಾಣಿಕರು ಬಂದರುಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹವಾಮಾನ ಪರಿಸ್ಥಿತಿ ಸರಿದೂಗುತ್ತಿದ್ದಂತೆ ಕೆಲವು ಬಂದರುಗಳನ್ನು ತೆರೆಯಲಾಗಿದೆ.