ಮನಿಲಾ: ಪ್ರಬಲ ಚಂಡಮಾರುತಕ್ಕೆ ಫಿಲಿಪ್ಪಿನ್ಸ್ ಅಕ್ಷರಶಃ ತತ್ತರಿಸಿದೆ. ಮನೆಗಳು, ಆಸ್ಪತ್ರೆಗಳು ಮತ್ತು ಶಾಲೆಗಳನ್ನು ಉರುಳಿ ಬಿದ್ದಿದ್ದಾವೆ. ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತದಿಂದಾಗಿ ಸಾವಿನ ಸಂಖ್ಯೆ ಏರುತ್ತಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಭಾರಿ ಗಾಳಿಯಿಂದ ಮನೆಗಳ ಚಾವಣಿಗಳು ಹಾರಿದ್ದು, ಹಲವೆಡೆ ಮರಗಳು ಉರುಳಿ ದಕ್ಷಿಣ ಮತ್ತು ಮಧ್ಯ ದ್ವೀಪ ಪ್ರಾಂತ್ಯಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಹೋಟೆಲ್, ವಿಮಾನ ನಿಲ್ದಾಣ ಸೇರಿದಂತೆ ಅನೇಕ ಕಟ್ಟಡಗಳು ಹಾನಿಗೊಂಡಿವೆ. ಚಂಡಮಾರುತವು ಅಪ್ಪಳಿಸುವ ಮುನ್ನೆಚ್ಚರಿಕೆಯಿಂದ 3 ಲಕ್ಷಕ್ಕೂ ಹೆಚ್ಚು ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಓದಿ : ಪತ್ನಿ ನೆರವಿನಿಂದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ದೇವಮಾನವ: ಬಂಧನ
ದ್ವೀಪಸಮೂಹಕ್ಕೆ ಅಪ್ಪಳಿಸಿದ ಇತ್ತೀಚಿನ ದುರಂತದಲ್ಲಿ ಕನಿಷ್ಠ 375 ಜನರು ಸಾವನ್ನಪ್ಪಿದ್ದಾರೆ ಮತ್ತು 56 ಮಂದಿ ಕಾಣೆಯಾಗಿದ್ದಾರೆ, 500 ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಯರ್‌ಗಾವೊ ದ್ವೀಪದ ಜನರಲ್ ಲೂನಾ ಎಂಬ ಪ್ರವಾಸಿ ಪಟ್ಟಣದಲ್ಲಿ ಜನರು ನೀರು ಮತ್ತು ಆಹಾರಕ್ಕಾಗಿ ಪರತಪಿಸುತ್ತಿದ್ದಾರೆ.