ETV Bharat / international

'ಲಸಿಕೆ ಪಡೆಯದವರು ಭಾರತಕ್ಕೆ ಹೋಗಿ... ಇಲ್ಲವೋ ಹಂದಿಗಳಿಗೆ ನೀಡುವ ಇಂಜೆಕ್ಷನ್​ ನೀಡಬೇಕಾಗತ್ತೆ' - ಫಿಲಿಪೈನ್ಸ್​ ಅಧ್ಯಕ್ಷ ರೋಡ್ರಿಗೋ​ ಡುಟರ್ಟೆ ಲಸಿಕೆ ಪಡೆಯಲು ಒತ್ತಾಯ

ಕೊರೊನಾ ಸೋಂಕು ಪ್ರಪಂಚವನ್ನೇ ನಡುಗಿಸಿದೆ. ಎಲ್ಲ ದೇಶಗಳು ವ್ಯಾಕ್ಸಿನ್​ ಮೊರೆ ಹೋಗುತ್ತಿವೆ. ಇದೀಗ ಫಿಲಿಪ್ಪಿನ್ಸ್​ ಪ್ರಧಾನಿ ತನ್ನ ಪ್ರಜೆಗಳಿಗೆ ಲಸಿಕೆ ಹಾಕಿಸಿಕೊಳ್ಳಲು ಒತ್ತಾಯಿಸಿದೆ. ಅಲ್ಲದೇ ಹಾಕಿಸಿಕೊಳ್ಳದವರು ಭಾರತ ಅಥವಾ ಬೇರೆ ದೇಶಕ್ಕೆ ತೆರಳಬಹುದೆಂದು ಎಚ್ಚರಿಸಿದೆ.

Rodrigo Duterte
ರೋಡ್ರಿಗೋ​ ಡುಟರ್ಟೆ
author img

By

Published : Jun 24, 2021, 2:48 PM IST

ಫಿಲಿಪೈನ್ಸ್​: ಕೊರೊನಾ ಲಸಿಕೆ ಹಾಕಿಸಿಕೊಳ್ಳದವರು ಭಾರತ ಅಥವಾ ಅಮೆರಿಕಗೆ ತೆರಳಿ ಎಂದು ಫಿಲಿಪ್ಪಿನ್ಸ್​​ ಅಧ್ಯಕ್ಷ ರೋಡ್ರಿಗೋ​ ಡುಟರ್ಟೆ ಆ ದೇಶ ಪ್ರಜೆಗಳಿಗೆ ಎಚ್ಚರಿಕೆ ನೀಡಿದ್ದಾರೆ.

ನನ್ನ ಹೇಳಿಕೆಯನ್ನು ಬೇರೆ ಅರ್ಥೈಸಬೇಡಿ ಎಂದ ಅವರು, ಕೊರೊನಾ ಸಂಕಷ್ಟ ದೇಶವನ್ನು ಬಾಧಿಸುತ್ತಿದೆ. ಈ ಸಂದರ್ಭ ದೇಶವಾಸಿಗಳು ವ್ಯಾಕ್ಸಿನ್​ ಪಡೆದು ಕೊರೊನಾ ಓಡಿಸುವಲ್ಲಿ ಒಗ್ಗಟ್ಟಾಗಬೇಕು. ಲಸಿಕೆ ಪಡೆಯದವರನ್ನು ಜೈಲುಪಾಲು ಮಾಡಬೇಕಾಗುತ್ತದೆ. ಎಲ್ಲಾ ಪ್ರಜೆಗಳಿಗೆ ನನ್ನ ಮಾತು ಒಂದೇ ಎಲ್ಲರೂ ಲಸಿಕೆ ತೆಗೆದುಕೊಳ್ಳಿ. ನನ್ನ ಸಹನೆ ಪರೀಕ್ಷೆ ಯಾರೂ ಮಾಡಲು ಪ್ರಯತ್ನಿಸದಿರಿ.

ಲಸಿಕೆ ಪಡೆದುಕೊಳ್ಳಲು ಇಚ್ಚಿಸದವರು ಅಮೆರಿಕ ಅಥವಾ ಭಾರತಕ್ಕೆ ಅಥವಾ ಇನ್ಯಾವುದಾದರೂ ಪ್ರಾಂತ್ಯಕ್ಕೆ ತೆರಳಿ. ಆದ್ರೆ ಇಲ್ಲಿರಬೇಕಾದರೆ ಲಸಿಕೆ ಪಡೆದುಕೊಳ್ಳುವುದು ಅಗತ್ಯ ಎಂದಿದ್ದಾರೆ. ಪ್ರತೀ ಬಾರಿ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿರುವ ರೋಡ್ರಿಗೋ ಇದೀಗ ಇನ್ನೋಂದು ಹೇಳಿಕೆ ನೀಡಿ ಪ್ರತಿ ದೇಶಗಳನ್ನು ಕೆರಳಿಸಿದ್ದಾರೆ.

ಅಷ್ಟೇ ಅಲ್ಲದೆ ಲಸಿಕೆ ಹಾಕಿಕೊಳ್ಳದೆ ಕೆಲ ಮೂರ್ಖರು ಒಂದು ಪ್ರಾಂತ್ಯದಿಂದ ಇನ್ನೊಂದು ಪ್ರಾಂತ್ಯಕ್ಕೆ ತೆರಳುತ್ತಿದ್ದಾರೆ, ಇವರಿಂದಲೇ ಕೊರೊನಾ ಹರಡುವಿಕೆ ಹೆಚ್ಚಾಗಿದೆ. ವ್ಯಾಕ್ಸಿನ್​ ಪಡೆಯದವರಿಗೆ ಹಂದಿಗಳಿಗೆ ನೀಡುವ ಇಂಜೆಕ್ಷನ್​ ಕೊಡಲಾಗುತ್ತದೆ ಇದು ಕೊರೊನಾಗಿಂತಲೂ ಅಪಾಯಕಾರಿ, ಅದು ವೈರಸ್​ ಅಲ್ಲ ನಿಮ್ಮನ್ನೂ ಸಾಯಿಸಿಬಿಡುತ್ತದೆ ಎಂದು ವಾರ್ನಿಂಗ್​ ನೀಡಿದ್ದಾರೆ ಪ್ರಧಾನಿ.

ಇದನ್ನೂ ಓದಿ: ಮುಂದೆ ಯಾವುದೇ ವೈರಸ್ ಬಂದರೂ ಹೆದರಬೇಕಿಲ್ಲ: ಕಾರಣ ಏನು ಗೊತ್ತಾ?

For All Latest Updates

TAGGED:

philippines
ETV Bharat Logo

Copyright © 2025 Ushodaya Enterprises Pvt. Ltd., All Rights Reserved.