ETV Bharat / international

ನಮ್ಮನ್ನು ಎಷ್ಟೇ ಅವಮಾನಿಸಿದರೂ ನಾವು ಭಯೋತ್ಪಾದನೆ ವಿರುದ್ಧದ ಹೋರಾಟ ನಿಲ್ಲಿಸಿಲ್ಲ: ಇಮ್ರಾನ್​ ಖಾನ್​ - ಅಮೆರಿಕಗೆ ಬೆಂಬಲ ನೀಡುವುದಕ್ಕಿಂತ ಭಯೋತ್ಪಾದನೆಗೆ ಬೆಂಬಲ ಕೊಡುವುದು ನಮಗೆ ಅವಮಾನವೇನಲ್ಲ

ನಾವು ಅಮೆರಿಕಗೆ ಅನೇಕ ಸಹಾಯ ಮಾಡಿದರೂ, ಅವರು ನಮ್ಮನ್ನು ಹೊಗಳಲಿಲ್ಲ ಅಥವಾ ನಮ್ಮ ಸೇವೆಗೆ ಮೆಚ್ಚುಗೆ ಸೂಚಿಸಿಲ್ಲ. ಬದಲಾಗಿ ನಮ್ಮನ್ನು ದ್ರೋಹಿಗಳು ಎಂದೇ ದೂಷಿಸುತ್ತಿದ್ದಾರೆ. ಭಯೋತ್ಪಾದನೆ ವಿರುದ್ಧದ ಅಮೆರಿಕ ಯುದ್ಧಕ್ಕೆ ನಾವು ಮುಂಚೂಣಿಯಲ್ಲಿರಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

Pakistan Prime Minister Imran Khan
Pakistan Prime Minister Imran Khan
author img

By

Published : Jul 1, 2021, 11:39 AM IST

ಇಸ್ಲಾಮಾಬಾದ್: ಅಮೆರಿಕಗೆ ಬೆಂಬಲ ನೀಡಿರುವುದು ಭಯೋತ್ಪಾದನೆಗೆ ಬೆಂಬಲ ನೀಡಿದಷ್ಟು ನಮಗೆ ಅವಮಾನವೇನಲ್ಲ ಎಂದು ಪಾಕ್​ ಪ್ರಧಾನಿ ಇಮ್ರಾನ್​ಖಾನ್​​ ಹೇಳಿದ್ದಾರೆ. ಪಾಕಿಸ್ತಾನವು ಶಾಂತಿಯುತವಾಗಿ ಅಮೆರಿಕದೊಂದಿಗೆ ಸ್ನೇಹ ಬೆಳೆಸಲು ಇಚ್ಛಿಸುತ್ತದೆಯೇ ಹೊರತು, ಸಂಘರ್ಷಕ್ಕೆ ಇಳಿಯಲ್ಲ ಎಂದು ರಾಷ್ಟ್ರೀಯ ಅಸೆಂಬ್ಲಿಯ ಬಜೆಟ್​ ಅಧಿವೇಶನದಲ್ಲಿ ಪಾಕ್​ ಪ್ರಧಾನಿ ಹೇಳಿದ್ದಾರೆ.

ನಾವು ಅಮೆರಿಕಗೆ ಅನೇಕ ಸಹಾಯ ಮಾಡಿದರೂ, ಅವರು ನಮ್ಮನ್ನು ಹೊಗಳಲಿಲ್ಲ ಅಥವಾ ನಮ್ಮ ಸೇವೆಗೆ ಮೆಚ್ಚುಗೆ ಸೂಚಿಸಿಲ್ಲ. ಬದಲಾಗಿ ನಮ್ಮನ್ನು ದ್ರೋಹಿಗಳು ಎಂದೇ ದೂಷಿಸುತ್ತಿದ್ದಾರೆ. ಇಷ್ಟರ ಮಧ್ಯೆಯೂ ಭಯೋತ್ಪಾದನೆ ವಿರುದ್ಧದ ಅಮೆರಿಕದ ಹೋರಾಟದಲ್ಲಿ ಮುಂಚೂಣಿಯಲ್ಲಿರಲು ನಿರ್ಧರಿಸಿದ್ದೇವೆ ಎಂದಿದ್ದಾರೆ ಖಾನ್​.

ಯಾವುದೇ ದೇಶವು ಯುದ್ಧದಲ್ಲಿ ಭಾಗಿಯಾಗಿ 70 ಸಾವಿರ ಜೀವಗಳನ್ನು ಕಳೆದುಕೊಳ್ಳುತ್ತದೆಯೇ? ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪಾಕ್​ಗೆ ತುಂಬಾ ಕಠಿಣ ಸಮಯ ಬರಲಿದೆ ಎಂದು ಖಾನ್ ಎಚ್ಚರಿಸಿದ್ದಾರೆ. ತೆಹ್ರಿಕ್-ಇ-ತಾಲಿಬಾನ್​ ಪಾಕಿಸ್ತಾನಕ್ಕೆ ಸೇರಿದ ಸುಮಾರು 5 ಸಾವಿರ ಭಯೋತ್ಪಾದಕರು ನೆರೆಯ ದೇಶದಲ್ಲಿದ್ದುಕೊಂಡು ತನ್ನ ಭದ್ರತೆಗೆ ಅಪಾಯವನ್ನು ಉಂಟು ಮಾಡುತ್ತಿದೆ ಎಂಬ ಅಂಶವನ್ನು ಇಮ್ರಾನ್​ ಖಾನ್​ ಬಯಲಿಗೆ ಎಳೆದಿದ್ದಾರೆ.

ಈ ತಿಂಗಳ ಆರಂಭದಲ್ಲಿ ಪಾಕಿಸ್ತಾನದ ಆಂತರಿಕ ಸಚಿವ ಶೇಖ್ ರಶೀದ್, ಪಾಕಿಸ್ತಾನದ ವಿರುದ್ಧ ಚಟುವಟಿಕೆಗಳನ್ನು ನಡೆಸಲು ಟಿಟಿಪಿಯಂತಹ ಭಯೋತ್ಪಾದಕ ಗುಂಪುಗಳಿಗೆ ತಾಲಿಬಾನ್ ಅವಕಾಶ ನೀಡುವುದಿಲ್ಲ ಎಂದು ಇಸ್ಲಾಮಾಬಾದ್ ನಿರೀಕ್ಷಿಸುತ್ತಿದೆ ಎಂದು ಇದೇ ವೇಳೆ ಅವರು ಹೇಳಿದ್ದಾರೆ.

ಇದನ್ನೂ ಓದಿ:Vaccine ಪೂರೈಕೆಗೆ ಅಡೆತಡೆಯಾದರೂ, ವಿತರಣೆಯಲ್ಲಿ ಜಾಗತಿಕವಾಗಿ ನಂ.1 ಅಮೆರಿಕ!

ನಾವು ಎರಡೂ ಬದಿಗಳಿಂದ ಹಿನ್ನಡೆ ಅನುಭವಿಸಿದರೂ ಪಾಕಿಸ್ತಾನವು ಅಫ್ಘಾನಿಸ್ತಾನದ ಜೊತೆಗೆ ಡುರಾಂಡ್ ಲೈನ್ ಫೆನ್ಸಿಂಗ್‌ನ ಶೇಕಡಾ 80 ಕ್ಕಿಂತಲೂ ಹೆಚ್ಚಿನದನ್ನು ಪೂರ್ಣಗೊಳಿಸಿದೆ. ಅಫ್ಘಾನ್ ಸರ್ಕಾರದೊಂದಿಗೆ ಒಪ್ಪಂದದ ಅನುಪಸ್ಥಿತಿಯ ಹೊರತಾಗಿಯೂ, ಪಾಕಿಸ್ತಾನ ಸರ್ಕಾರ ಡುರಾಂಡ್ ರೇಖೆಯನ್ನು ಅಧಿಕೃತ ಗಡಿ ರೇಖೆ ಎಂದು ಘೋಷಿಸುತ್ತಿದೆ ಎಂದು ಇಮ್ರಾನ್​ ಖಾನ್​ ಸ್ಪಷ್ಟ ಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.