ETV Bharat / international

FATF Report: ಮತ್ತೆ ಬೂದು ಪಟ್ಟಿಯಲ್ಲೇ ಉಳಿದ ಪಾಕ್, ಟರ್ಕಿ ಹೊಸದಾಗಿ ಸೇರ್ಪಡೆ - Paris-based FATF

ಎಫ್​ಎಟಿಎಫ್ ಬೂದು ಪಟ್ಟಿಯಿಂದ ಹೊರಬರಲು ಪಾಕ್​ ಈ ಬಾರಿಯೂ ಸಾಕಷ್ಟು ಕಸರತ್ತು ನಡೆಸಿದ್ದ ಪಾಕ್ ಕೊನೆಗೂ ವಿಫಲವಾಗಿದೆ. ಪಾಕಿಸ್ತಾನದ ಜೊತೆಗೆ ಟರ್ಕಿಯೂ ಹೊಸದಾಗಿ ಸೇರ್ಪಡೆಗೊಂಡಿದೆ.

pakistan-to-remain-on-grey-list-of-global-terror-financing-watchdog-fatf
FATF Report: ಮತ್ತೆ ಬೂದು ಪಟ್ಟಿಯಲ್ಲೇ ಉಳಿದ ಪಾಕ್, ಟರ್ಕಿ ಹೊಸದಾಗಿ ಸೇರ್ಪಡೆ
author img

By

Published : Oct 22, 2021, 3:29 AM IST

ಪ್ಯಾರಿಸ್, ಫ್ರಾನ್ಸ್ : ಉಗ್ರರಿಗೆ ಪಾಕಿಸ್ತಾನ ಬೆಂಬಲ ನೀಡುತ್ತಲೇ ಇದೆ ಎಂಬುದು ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಬೀತಾಗುತ್ತಿದೆ. ಫೈನಾನ್​ಷಿಯಲ್ ಆ್ಯಕ್ಷನ್ ಟಾಸ್ಟ್​ ಫೋರ್ಸ್ (FATF) ಮತ್ತೆ ಪಾಕ್​​ ಅನ್ನು ಬೂದು ಬಣ್ಣದ ಪಟ್ಟಿಗಳ ರಾಷ್ಟ್ರಗಳಲ್ಲೇ ಉಳಿಸಿದೆ.

ವಿಶ್ವಸಂಸ್ಥೆ ಗುರುತಿಸಿರುವ ಹಾಗೂ ಭಾರತಕ್ಕೆ ಬೇಕಾಗಿರುವ ಹಫೀಜ್ ಸಯೀದ್, ಮಸೂದ್ ಅಜರ್ ಮುಂತಾದ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಯಾವುದೇ ಕ್ರಮಕೈಗೊಂಡಿಲ್ಲ ಜಾಗತಿಕ ಭಯೋತ್ಪಾದನಾ ವಿರೋಧಿ ಹಣಕಾಸು ಕಾವಲುಪಡೆಯಾದ ಎಫ್​ಎಟಿಎಫ್​ ಹೇಳಿದೆ.

ಈ ಬಾರಿ ಪಾಕ್ ಮಾತ್ರವಲ್ಲದೇ ಟರ್ಕಿಯನ್ನೂ ಕೂಡಾ ಎಫ್​ಎಟಿಎಫ್ ಬೂದು ಬಣ್ಣದ ರಾಷ್ಟ್ರಗಳ ಪಟ್ಟಿಗೆ ಸೇರಿಸಿದೆ. ಈ ಮೂಲಕ ಟರ್ಕಿಯೂ ಕೂಡಾ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ರುಜುವಾತಾಗಿದೆ.

ಎಫ್​ಎಟಿಎಫ್​​ ಬೂದು ಪಟ್ಟಿ ಎಂದರೇನು? : ಎಫ್ಎಟಿಎಫ್​ ಪ್ರಕಾರ ಬೂದು ಪಟ್ಟಿ ರಾಷ್ಟ್ರಗಳು ಭಯೋತ್ಪಾದನೆಗೆ ಹಣಕಾಸು ಪೂರೈಸುವ ರಾಷ್ಟ್ರಗಳಾಗಿರುತ್ತವೆ. ಈ ರಾಷ್ಟ್ರಗಳನ್ನು ಭಯೋತ್ಪಾದಕರ ಸ್ವರ್ಗ ಎಂದೇ ಕರೆಯಲಾಗುತ್ತದೆ. ಇಂತಹ ರಾಷ್ಟ್ರಗಳನ್ನು ಎಫ್​ಎಟಿಎಫ್​ ಬೂದು ಪಟ್ಟಿಗೆ ಸೇರಿಸುತ್ತದೆ.

ಈ ಬಾರಿಯೂ ಬೂದು ಪಟ್ಟಿಯಿಂದ ಹೊರಬರಲು ಪಾಕ್​ ಸಾಕಷ್ಟು ಕಸರತ್ತು ನಡೆಸಿತ್ತು. ಬೂದು ಪಟ್ಟಿಯ ನಂತರ ಬ್ಲಾಕ್​ ಲಿಸ್ಟ್ ಎಂಬ ಮತ್ತೊಂದು ಪಟ್ಟಿಯನ್ನು ಎಫ್​ಎಟಿಎಫ್​ ತಯಾರಿಸಲಿದೆ.

ಬೂದು ಪಟ್ಟಿಯಲ್ಲಿರುವ ರಾಷ್ಟ್ರಗಳಲ್ಲಿ ಭಯೋತ್ಪಾದನೆ ಬೆಂಬಲ ನೀಡುವ ಅಂಶಗಳು ತೀವ್ರವಾಗಿ ಕಂಡು ಬಂದರೆ ಅಂತಹ ರಾಷ್ಟ್ರವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ. ಇಂತಹ ರಾಷ್ಟ್ರಗಳಿಗೆ ಈ ಅಂತಾರಾಷ್ಟ್ರೀಯ ಸಂಘಟನೆಗಳಿಂದ ಹಣಕಾಸು ಬೆಂಬಲ ದೊರೆಯಲು ಕಷ್ಟವಾಗುತ್ತದೆ.

ಇದನ್ನೂ ಓದಿ: 100 ಕೋಟಿ ಲಸಿಕೆ ನೀಡಿ ಭಾರತ ದಾಖಲೆ..100 ಐತಿಹಾಸಿಕ ಸ್ಮಾರಕಗಳಲ್ಲಿ ತ್ರಿವರ್ಣ ವಿದ್ಯುತ್ ದೀಪಾಲಂಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.