ಇಸ್ಲಾಮಾಬಾದ್(ಪಾಕಿಸ್ತಾನ) : 12 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ವ್ಯಾಕ್ಸಿನ್ ನೀಡುವ ಅಭಿಯಾನಕ್ಕೆ ಈಗಾಗಲೇ ಕೆಲ ದೇಶಗಳು ಗ್ರೀನ್ ಸಿಗ್ನಲ್ ನೀಡಿವೆ. ಇದೀಗ ಪಾಕಿಸ್ತಾನ ಕೂಡ ಆ ಸಾಲಿಗೆ ಸೇರಿಕೊಂಡಿದೆ.
ಇಂದು ನಡೆದ NCOC ಸಭೆಯಲ್ಲಿ 12 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ವ್ಯಾಕ್ಸಿನ್ ನೀಡುವ ಅಭಿಯಾನಕ್ಕೆ ಚಾಲನೆ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಮುಖವಾಗಿ ಶಾಲೆಗೆ ತೆರಳುವ ಮಕ್ಕಳಿಗೆ ವ್ಯಾಕ್ಸಿನ್ ನೀಡಲು ಮೊದಲ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
-
In today's NCOC meeting decided to start vaccination of all 12 years and older. Special drive will be run for vaccination at schools to make it easier for children to be vaccinated
— Asad Umar (@Asad_Umar) September 28, 2021 " class="align-text-top noRightClick twitterSection" data="
">In today's NCOC meeting decided to start vaccination of all 12 years and older. Special drive will be run for vaccination at schools to make it easier for children to be vaccinated
— Asad Umar (@Asad_Umar) September 28, 2021In today's NCOC meeting decided to start vaccination of all 12 years and older. Special drive will be run for vaccination at schools to make it easier for children to be vaccinated
— Asad Umar (@Asad_Umar) September 28, 2021
ಪಾಕಿಸ್ತಾನದ ಯೋಜನಾ ಸಚಿವರಾಗಿರುವ ಅಸಾದ್ ಉಮರ್ ಟ್ವೀಟ್ ಮಾಡಿದ್ದು, ಪಾಕಿಸ್ತಾನದ ಶಾಲೆಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕುವ ಅಭಿಯಾನ ಶೀಘ್ರವೇ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಪಾಕ್ನಲ್ಲಿ ಕೋವಿಡ್ನಿಂದ 41 ಸಾವು ಹಾಗೂ 1,400 ಹೊಸ ಪ್ರಕರಣ ಕಾಣಿಸಿಕೊಂಡಿವೆ. ಇತ್ತೀಚಿನ ದಿನಗಳಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ.
ಇದನ್ನೂ ಓದಿರಿ: ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ ನೀಡುತ್ತಿದ್ದಂತೆ ಈ ರೀತಿ ಕಾಲೆಳೆದ ಕ್ಯಾ. ಅಮರೀಂದರ್ ಸಿಂಗ್!
ಬ್ರೇಜಿಲ್,ಪನಾಮಾ, ಜಪಾನ್ ಸೇರಿ ಕೆಲ ದೇಶಗಳಲ್ಲಿ ಈಗಾಗಲೇ 12 ವರ್ಷ ಮೇಲ್ಪಟ್ಟವರಿಗೆ ಕೊರೊನಾ ವ್ಯಾಕ್ಸಿನೇಷನ್ ನೀಡುವ ಅಭಿಯಾನ ಆರಂಭಗೊಂಡಿದೆ. ಭಾರತದಲ್ಲೂ ಇದರ ಬಗ್ಗೆ ಚಿಂತನೆ ನಡೆಸಲಾಗಿದೆ. ಮುಂದಿನ ಕೆಲ ತಿಂಗಳಲ್ಲಿ ಮಕ್ಕಳಿಗೆ ವ್ಯಾಕ್ಸಿನ್ ನೀಡುವ ಅಭಿಯಾನ ಆರಂಭ ಮಾಡುವ ಸಾಧ್ಯತೆ ಇದೆ.