ETV Bharat / international

ಸದ್ದಿಲ್ಲದೇ ಉಗ್ರವಾದಿಗಳ ಪಟ್ಟಿಯಿಂದ ಸಾವಿರಾರು ಹೆಸರು ಅಳಿಸಿದ ಕುತಂತ್ರಿ ಪಾಕ್!

ಧನಸಹಾಯ ನಿಲ್ಲದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಪಾಕಿಸ್ತಾನ ತನ್ನ ದೇಶದ ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ಪ್ರಾಧಿಕಾರದ ಪಟ್ಟಿಯಿಂದ ಉಗ್ರವಾದಿಗಳ ಹೆಸರನ್ನು ಒಂದೊಂದಾಗಿ ಕಡಿಮೆ ಮಾಡುತ್ತಿದೆ. ವಾಸ್ತವದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಅಥವಾ ಭಯೋತ್ಪಾದಕರನ್ನು ಮಟ್ಟ ಹಾಕುವ ಯಾವುದೇ ಕ್ರಮಗಳನ್ನು ಪಾಕ್ ಕೈಗೊಂಡಿಲ್ಲ. ಆದರೂ ಭಯೋತ್ಪಾದಕರೇ ಇಲ್ಲ ಎಂದು ತೋರಿಸುವ ಮೂಲಕ ಎಫ್​ಎಟಿಎಫ್ ನ ಬೀಸುವ ದೊಣ್ಣೆಯಿಂದ ಪಾರಾಗಲು ಪಾಕ್ ಹವಣಿಸುತ್ತಿದೆ.

Pakistan removes thousands of names
Pakistan removes thousands of names
author img

By

Published : Apr 21, 2020, 11:09 PM IST

ನ್ಯೂಯಾರ್ಕ್​​: ತನ್ನ ದೇಶದಲ್ಲಿನ ಘೋಷಿತ ಉಗ್ರವಾದಿಗಳ ಪಟ್ಟಿಯಿಂದ ಸಾವಿರಾರು ಹೆಸರುಗಳನ್ನು ಸದ್ದಿಲ್ಲದೇ ಅಳಿಸಿ ಹಾಕಿದೆ ಪಾಕಿಸ್ತಾನ. 2008ರ ಮುಂಬೈ ಅಟ್ಯಾಕ್ ಮಾಸ್ಟರ್​ಮೈಂಡ್ ಹಾಗೂ ಲಷ್ಕರ್-ಎ-ತೊಯ್ಬಾ ಕಮಾಂಡರ್ ಝಕಿಯುರ್​ ರೆಹಮಾನ್ ಲಖ್ವಿ ಹೆಸರನ್ನೂ ಪಾಕ್ ಉಗ್ರವಾದಿಗಳ ಪಟ್ಟಿಯಿಂದ ತೆಗೆದಿದೆ. ಜಾಗತಿಕ ಅಕ್ರಮ ಹಣ ವರ್ಗಾವಣೆಯ ಮೇಲೆ ನಿಗಾ ಇಡುವ ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್​ ಫೋರ್ಸ್​ನ (FATF) ಪರಿಶೀಲನಾ ಅವಧಿ ಹತ್ತಿರವಾಗುತ್ತಿದ್ದಂತೆಯೇ ಪಾಕ್ ತನ್ನ ಕುತಂತ್ರ ಬುದ್ಧಿಯ ಕೆಲಸಕ್ಕೆ ಕೈಹಾಕಿದೆ.

ಉಗ್ರವಾದಿಗಳಿಗೆ ಅಕ್ರಮ ದಾರಿಗಳ ಮೂಲಕ ಹಣ ವರ್ಗಾವಣೆಯಾಗುತ್ತಿರುವುದನ್ನು ನಿಲ್ಲಿಸಲು ಪಾಕ್​ನಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಫ್​ಎಟಿಎಫ್​ ಪಾಕಿಸ್ತಾನವನ್ನು ತನ್ನ ಪಟ್ಟಿಯ ಗ್ರೇ ಲಿಸ್ಟ್​ (ಅತ್ಯಂತ ಕಳಪೆ) ನಲ್ಲಿಟ್ಟಿದೆ. ಗ್ರೇ ಲಿಸ್ಟ್​ನಲ್ಲಿ ಮುಂದುವರೆದಲ್ಲಿ ಅಮೆರಿಕ ಹಾಗೂ ಇನ್ನೂ ಕೆಲ ಅಂತಾರಾಷ್ಟ್ರೀಯ ಮೂಲಗಳಿಂದ ಬರುವ ಸಹಾಯಧನ ಸಂಪೂರ್ಣವಾಗಿ ನಿಲ್ಲಲಿದೆ. ಇದರಿಂದ ಮೊದಲೇ ಪಾತಾಳ ಕಂಡಿರುವ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿಗೆ ಮತ್ತೊಂದು ದೊಡ್ಡ ಹೊಡೆತ ಬೀಳಲಿದೆ.

ಧನಸಹಾಯ ನಿಲ್ಲದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಪಾಕಿಸ್ತಾನ ತನ್ನ ದೇಶದ ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ಪ್ರಾಧಿಕಾರದ ಪಟ್ಟಿಯಿಂದ ಉಗ್ರವಾದಿಗಳ ಹೆಸರನ್ನು ಒಂದೊಂದಾಗಿ ಕಡಿಮೆ ಮಾಡುತ್ತಿದೆ. ವಾಸ್ತವದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಅಥವಾ ಭಯೋತ್ಪಾದಕರನ್ನು ಮಟ್ಟ ಹಾಕುವ ಯಾವುದೇ ಕ್ರಮಗಳನ್ನು ಪಾಕ್ ಕೈಗೊಂಡಿಲ್ಲ. ಆದರೂ ಭಯೋತ್ಪಾದಕರೇ ಇಲ್ಲ ಎಂದು ತೋರಿಸುವ ಮೂಲಕ ಎಫ್​ಎಟಿಎಫ್ ನ ಬೀಸುವ ದೊಣ್ಣೆಯಿಂದ ಪಾರಾಗಲು ಪಾಕ್ ಹವಣಿಸುತ್ತಿದೆ.

ಪಾಕ್​ ಭಯೋತ್ಪಾದಕರ ಪಟ್ಟಿಯಲ್ಲಿ 2018 ರಲ್ಲಿ 7,600 ಹೆಸರುಗಳಿದ್ದವು. ಈ ವರ್ಷ ಅದರಲ್ಲಿ 3,800 ಹೆಸರುಗಳು ಮಾತ್ರ ಉಳಿದಿವೆ ಎಂದು ನ್ಯೂಯಾರ್ಕ್​ ಮೂಲದ ಸ್ವತಂತ್ರ ಕಣ್ಗಾವಲು ಸಂಸ್ಥೆ ವರದಿ ಮಾಡಿದೆ. ಕೆಲ ಹೆಸರುಗಳು ಪುನರಾವರ್ತನೆಯಾಗಿದ್ದರಿಂದಲೂ ಪಟ್ಟಿಯಿಂದ ಕಡಿಮೆ ಮಾಡಿರಬಹುದು. ಆದರೆ ಸಾರ್ವಜನಿಕವಾಗಿ ಯಾವುದೇ ಸಮರ್ಥನೆ ನೀಡದೇ 4000 ಉಗ್ರವಾದಿಗಳ ಹೆಸರು ಅಳಿಸಿ ಹಾಕಿದ್ದು ಸಂಶಯಗಳನ್ನು ಮೂಡಿಸುತ್ತಿದೆ ಎಂದು ಹೇಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.