ಮಾಲೆ: ಸುಸ್ಥಿರ ಅಭಿವೃದ್ಧಿ ಕುರಿತ ಜಾಗತಿಕ ಸಭೆಯಲ್ಲಿ ಪಾಕಿಸ್ತಾನ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿ ಮತ್ತೆ ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಮುಖಭಂಗ ಅನುಭವಿಸಿದೆ.
ಜಾಗತಿಕ ಸಮುದಾಯದ ರಾಷ್ಟ್ರಗಳು ಮಾಲ್ಡೀವ್ಸ್ನ ರಾಜಧಾನಿ ಮಾಲೆಯಲ್ಲಿ ಸುಸ್ಥಿರ ಅಭಿವೃದ್ಧಿಯ ಕುರಿತಾದ ಜಾಗತಿಕ ಸಭೆ ಕರೆದಿದ್ದವು. ಮಾಲ್ಡೀವ್ಸ್ ಸಂಸತ್ತಿನಲ್ಲಿ ಪಾಕಿಸ್ತಾನದ ಪ್ರತಿನಿಧಿ ಕಾಶ್ಮೀರ ಸಮಸ್ಯೆಯನ್ನು ಎಳೆದು ತಂದರೂ ಸ್ಪೀಕರ್ ಮುಂದೆ ಮಂಡಿಸುವಲ್ಲಿ ವಿಫಲರಾದರು.
-
Heated exchange of words between the respective speakers of parliament from #India and #Pakistan over the #Kashmir issue | Part 1 | @Raajje_tv pic.twitter.com/HhSq0ubceP
— raajje.mv (@raajjemv) September 1, 2019 " class="align-text-top noRightClick twitterSection" data="
">Heated exchange of words between the respective speakers of parliament from #India and #Pakistan over the #Kashmir issue | Part 1 | @Raajje_tv pic.twitter.com/HhSq0ubceP
— raajje.mv (@raajjemv) September 1, 2019Heated exchange of words between the respective speakers of parliament from #India and #Pakistan over the #Kashmir issue | Part 1 | @Raajje_tv pic.twitter.com/HhSq0ubceP
— raajje.mv (@raajjemv) September 1, 2019
ಭಾರತದ ಆಂತರಿಕ ಸಮಸ್ಯೆಯನ್ನು ಎತ್ತಿದ್ದಕ್ಕಾಗಿ ಮತ್ತು ಬೇರೆ ಉದ್ದೇಶಗಳಿಗಾಗಿ ಈ ವೇದಿಕೆಯನ್ನು ರಾಜಕೀಯಗೊಳಿಸಲು ಪ್ರಯತ್ನಿಸಿದ್ದಕ್ಕಾಗಿ ಭಾರತವು ಪಾಕಿಸ್ತಾನದ ನಡೆಯನ್ನು ಖಂಡಿಸಿತು. ಮಾಲ್ಡೀವ್ಸ್'ಸುಸ್ಥಿರ ಗುರಿಗಳನ್ನು ಸಾಧಿಸುವ' (ಎಸ್‌ಡಿಜಿ) 4ನೇ ದಕ್ಷಿಣ ಏಷ್ಯಾದ ಸ್ಪೀಕರ್‌ಗಳ ಶೃಂಗಸಭೆ ಆಯೋಜಿಸುತ್ತು. ಭಾರತದ ನಿಯೋಗದಿಂದ ಲೋಕಸಭಾ ಸ್ಪೀಕರ್ ಓಂಬಿರ್ಲಾ ಮತ್ತು ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಸಭೆಯಲ್ಲಿ ಭಾಗವಹಿಸಿದ್ದರು.
ಮಾಲ್ಡೀವ್ಸ್ ಸಂಸತ್ತಿನಲ್ಲಿ ಸುಸ್ಥಿರ ಅಭಿವೃದ್ಧಿಯ ಕುರಿತು ಚರ್ಚೆ ನಡೆಯುತ್ತಿರುವಾಗ ಪಾಕಿಸ್ತಾನದ ಪ್ರತಿನಿಧಿ ಖಾಸಿಮ್ ಸೂರಿ, ಕಾಶ್ಮೀರದ ವಿಷಯವನ್ನು ಸಂಸತ್ ಮುಂದೆ ತಂದು "ಕಾಶ್ಮೀರಿಗಳ ಮೇಲಿನ ದಬ್ಬಾಳಿಕೆಯನ್ನು ನಾವು ನಿರ್ಲಕ್ಷಿಸಲಾಗುವುದಿಲ್ಲ" ಎನ್ನುತ ಪ್ರತಿಭಟನೆಗೆ ಇಳಿಯಲು ಮುಂದಾದರು.
-
Heated exchange of words between the respective speakers of parliament from #India and #Pakistan over the #Kashmir issue | Part 2 | @Raajje_tv pic.twitter.com/o9OV0VAElI
— raajje.mv (@raajjemv) September 1, 2019 " class="align-text-top noRightClick twitterSection" data="
">Heated exchange of words between the respective speakers of parliament from #India and #Pakistan over the #Kashmir issue | Part 2 | @Raajje_tv pic.twitter.com/o9OV0VAElI
— raajje.mv (@raajjemv) September 1, 2019Heated exchange of words between the respective speakers of parliament from #India and #Pakistan over the #Kashmir issue | Part 2 | @Raajje_tv pic.twitter.com/o9OV0VAElI
— raajje.mv (@raajjemv) September 1, 2019
ಪಾಕಿಸ್ತಾನದ ಈ ಕ್ರಮವನ್ನು ವಿರೋಧಿಸಿ ಭಾರತ ತೀಕ್ಷಣ ಪ್ರತಿಕ್ರಿಯೆ ನೀಡಿತು. ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್, "ಈ ವೇದಿಕೆಯಲ್ಲಿ ಭಾರತದ ಆಂತರಿಕ ವಿಷಯವನ್ನು ಎತ್ತುವುದನ್ನು ನಾವು ಬಲವಾಗಿ ಆಕ್ಷೇಪಿಸುತ್ತೇವೆ. ಶೃಂಗಸಭೆಯ ವಿಷಯಕ್ಕೆ ಹೊರತಾದ ಸಮಸ್ಯೆಗಳನ್ನು ಎತ್ತುವ ಮೂಲಕ ವೇದಿಕೆಯನ್ನು ರಾಜಕೀಯಗೊಳಿಸುತ್ತಿದೆ. ನಾವು ಇದನ್ನು ತಿರಸ್ಕರಿಸುತ್ತೇವೆ" ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಸಂಸತ್ತಿನ ಸ್ಪೀಕರ್ ನಶೀದ್ ಮತ್ತು ಮಾಲ್ಡೀವ್ಸ್ ಆಡಳಿತವು, ಪಾಕಿಸ್ತಾನದ ನಿಯೋಗಕ್ಕೆ ಕಾರ್ಯಸೂಚಿಗೆ ಅಂಟಿಕೊಂಡು ಮುಂದುವರಿಯುವಂತೆ ಸೂಚಿಸಿತು. ಇಲ್ಲಿ ಯಾವುದೇ ರಾಜಕೀಯ ಸಮಸ್ಯೆಗಳನ್ನು ಎತ್ತಬಾರದು. ಅದರ ಹೊರತಾಗಿಯೂ ಪಾಕಿಸ್ತಾನ ರಾಜಕೀಯಗೊಳಿಸಿದೆ. ಕಾಶ್ಮೀರದ ಕುರಿತಾದ ಎಲ್ಲ ಉಲ್ಲೇಖಗಳನ್ನು ದಾಖಲೆಗಳಿಂದ ತೆಗೆದು ಹಾಕಲಾಗುವುದು ಎಂದು ಭಾರತಕ್ಕೆ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.