ಇಸ್ಲಾಮಾಬಾದ್: ಸಂಸತ್ ಚುನಾವಣೆಯಲ್ಲಿ ಪಾಕ್ ಹಣಕಾಸು ಸಚಿವ ಅಬ್ದುಲ್ ಹಫೀಜ್ ಶೇಖ್ ಸೋಲು ಕಂಡಿರುವ ಕಾರಣ ಇದೀಗ ಪ್ರಧಾನಿ ಇಮ್ರಾನ್ ಖಾನ್ ಸಂಸತ್ತಿನಲ್ಲಿ ವಿಶ್ವಾಸಮತ ಯಾಚನೆ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಇದಕ್ಕೂ ಮುಂಚಿತವಾಗಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ಸಿದ್ಧ ಎಂದಿದ್ದಾರೆ.
-
I am going to take a vote of confidence from the (National) Assembly. No matter if I sit in Opposition or am out of the Assembly, I will not spare anyone of you (Opposition leaders) until you return the money of this country: Pakistan PM Imran Khan (file photo) pic.twitter.com/P5nDNgSNxb
— ANI (@ANI) March 4, 2021 " class="align-text-top noRightClick twitterSection" data="
">I am going to take a vote of confidence from the (National) Assembly. No matter if I sit in Opposition or am out of the Assembly, I will not spare anyone of you (Opposition leaders) until you return the money of this country: Pakistan PM Imran Khan (file photo) pic.twitter.com/P5nDNgSNxb
— ANI (@ANI) March 4, 2021I am going to take a vote of confidence from the (National) Assembly. No matter if I sit in Opposition or am out of the Assembly, I will not spare anyone of you (Opposition leaders) until you return the money of this country: Pakistan PM Imran Khan (file photo) pic.twitter.com/P5nDNgSNxb
— ANI (@ANI) March 4, 2021
ಇದನ್ನೂ ಓದಿ: ಪಾಕ್ ಪ್ರಧಾನಿ ತಲೆನೋವು ಹೆಚ್ಚಿಸಿದ ಸೆನೆಟ್ ಚುನಾವಣೆ ಸೋಲು; ಕುತೂಹಲ ಕೆರಳಿಸಿದ ಇಮ್ರಾನ್ ಭಾಷಣ
ರಾತ್ರಿ 7:30ಕ್ಕೆ ದೇಶವನ್ನುದ್ದೇಶಿಸಿ ಮಾತನಾಡಿರುವ ಖಾನ್, ವಿಶ್ವಾಸಮತಯಾಚನೆ ಮಾಡಲು ಸಿದ್ಧವಿರುವುದಾಗಿ ಹೇಳಿಕೊಂಡಿದ್ದಾರೆ. ಒಂದು ವೇಳೆ ಸೋಲು ಕಂಡರೆ ವಿಪಕ್ಷದಲ್ಲಿ ಕುಳಿತುಕೊಳ್ಳಲು ಅಥವಾ ಅಸೆಂಬ್ಲಿಯಿಂದ ಹೊರಹೋಗಲು ತಾವು ಸಿದ್ಧ ಎಂದಿದ್ದಾರೆ. ಮಾರ್ಚ್ 6ರಂದು ವಿಶ್ವಾಸಮತಯಾಚನೆ ನಡೆಯಲಿದ್ದು, ದೇಶದ ಹಣ ಹಿಂದಿರುಗಿಸುವವರೆಗೂ ನಾನು ನಿಮ್ಮನ್ನ(ವಿಪಕ್ಷ ನಾಯಕರು) ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ಸಂಸತ್ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ವಿರುದ್ಧ ಇಮ್ರಾನ್ ಖಾನ್ ಆಪ್ತ ಹಾಗೂ ಹಣಕಾಸು ಸಚಿವ ಅಬ್ದುಲ್ ಹಫೀಜ್ ಶೇಲ್ ಸೋಲು ಕಂಡಿದ್ದಾರೆ. ಹೀಗಾಗಿ ಸಂಸತ್ತಿನಲ್ಲಿ ವಿಶ್ವಾಸಮತ ಯಾಚನೆ ಮಾಡಲು ಪಾಕ್ ಪ್ರಧಾನಿ ನಿರ್ಧರಿಸಿದ್ದಾರೆ. ಗಿಲಾನಿ ಗೆಲುವು ಸಾಧಿಸುತ್ತಿದ್ದಂತೆ ವಿರೋಧ ಪಕ್ಷಗಳಿಂದ ಖಾನ್ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದು, ಪ್ರಧಾನಿ ಸ್ಥಾನಕ್ಕೆ ಗೌರವದಿಂದ ರಾಜೀನಾಮೆ ನೀಡುವಂತೆ ಒತ್ತಾಯಿಸಿವೆ.