ಲಾಹೋರ್(ಪಾಕಿಸ್ತಾನ): ಪಾಕಿಸ್ತಾನದ ಲಾಹೋರ್ನಲ್ಲಿರುವ ಪ್ರಮುಖ ಅನಾರ್ಕಲಿ ಮಾರುಕಟ್ಟೆಯಲ್ಲಿ ಪ್ರಬಲ ಬಾಂಬ್ ಸ್ಫೋಟಗೊಂಡಿದ್ದು, ಪರಿಣಾಮ ಓರ್ವ ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದಂತೆ 23 ಮಂದಿ ಗಾಯಗೊಂಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಫೋಟದಲ್ಲಿ ಗಾಯಗೊಂಡಿರುವ ಎಲ್ಲರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಭಾರತೀಯ ವಸ್ತುಗಳ ಮಾರಾಟ ಮಾಡುವ ಲಾಹೋರ್ನ ಪ್ರಸಿದ್ಧ ಮಾರ್ಕೆಟ್ನ ಪಾನ್ ಮಂಡಿಯಲ್ಲಿ ಈ ಬಾಂಬ್ ಸ್ಫೋಟಗೊಂಡಿದೆ. ಪ್ರತಿದಿನ ಅತಿ ಹೆಚ್ಚಿನ ಜನರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಬಾಂಬ್ ಸ್ಫೋಟದಿಂದಾಗಿ ಅನೇಕ ಅಂಗಡಿ ಮತ್ತು ಕಟ್ಟಡಗಳ ಕಿಟಕಿ ಒಡೆದು ಹೋಗಿವೆ ಎಂದು ತಿಳಿದು ಬಂದಿದೆ.
-
Blast in #Anarkali Bazar #Lahore
— Siddhant Anand (@JournoSiddhant) January 20, 2022 " class="align-text-top noRightClick twitterSection" data="
According to the Local Reports-1 Killed 22 injured, 3 injured including a kid are in critical situation.#Lahore pic.twitter.com/ULGA5bYBLV
">Blast in #Anarkali Bazar #Lahore
— Siddhant Anand (@JournoSiddhant) January 20, 2022
According to the Local Reports-1 Killed 22 injured, 3 injured including a kid are in critical situation.#Lahore pic.twitter.com/ULGA5bYBLVBlast in #Anarkali Bazar #Lahore
— Siddhant Anand (@JournoSiddhant) January 20, 2022
According to the Local Reports-1 Killed 22 injured, 3 injured including a kid are in critical situation.#Lahore pic.twitter.com/ULGA5bYBLV
ಲಭ್ಯವಾಗಿರುವ ಮಾಹಿತಿ ಪ್ರಕಾರ ಬೈಕ್ನಲ್ಲಿಟ್ಟಿದ್ದ ಬಾಂಬ್ ಸ್ಫೋಟಗೊಂಡಿದ್ದು, ಈ ವೇಳೆ ಸ್ಥಳದಲ್ಲಿ ನಿಲ್ಲಿಸಿದ್ದ ಅನೇಕ ವಾಹನಗಳು ಜಖಂಗೊಂಡಿವೆ. ಬಾಂಬ್ ಸ್ಫೋಟದ ಹೊಣೆಯನ್ನ ಇಲ್ಲಿಯವರೆಗೆ ಯಾವುದೇ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿಲ್ಲ ಎಂದು ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಡಾ. ಮೊಹಮ್ಮದ್ ಅಬಿದ್ ತಿಳಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ