ಇಸ್ಲಾಮಾಬಾದ್: ಪಾಕಿಸ್ತಾನ ಮತ್ತು ಚೀನಾ ನಡುವಿನ ಪಾಲುದಾರಿಕೆಯು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗಾಗಿ ಭದ್ರತಾ ವಾತಾವರಣದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದೆ ಎಂದು ಪಾಕ್ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಹೇಳಿದ್ದಾರೆ.
ಚೀನಾ ಜನರ ವಿಮೋಚನಾ ಸೇನೆ (ಪಿಎಲ್‌ಎ) ಸ್ಥಾಪನೆಯ 94ನೇ ವಾರ್ಷಿಕೋತ್ಸವದ ನೆನಪಿಗಾಗಿ, ಪಾಕಿಸ್ತಾನ ಸೇನೆ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ. ಜನರಲ್ ಬಾಜ್ವಾ ಪ್ರಕಾರ, ಭದ್ರತಾ ವಾತಾವರಣದಲ್ಲಿ ಚೀನಾ ಪಾಲುದಾರಿಕೆಯು ಪಾಕಿಸ್ತಾನ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗಾಗಿ ಹೆಚ್ಚು ಮಹತ್ವ ಪಡೆಯುತ್ತಿದೆ.
ನಮ್ಮ ಹಿಂದಿನ ಮತ್ತು ವರ್ತಮಾನದಲ್ಲಿ ನಾವೆಂದಿಗೂ ಸವಾಲುಗಳನ್ನು ನೀಡುವುದಿಲ್ಲ ಎಂಬುದಕ್ಕೆ ಈ ಸ್ನೇಹ ಸಾಕ್ಷಿಯಾಗಿದೆ. ಪಿಎಲ್‌ಎ ಮತ್ತು ಪಾಕಿಸ್ತಾನ ಸೇನೆಯು ನಮ್ಮ ಸಾಮೂಹಿಕ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ನಿರಂತರವಾಗಿ ಶ್ರಮಿಸಲಿವೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನ-ಚೀನಾ ಸಂಬಂಧ ಅನನ್ಯ ಮತ್ತು ದೃಢವಾಗಿದೆ. ಸವಾಲುಗಳ ನಡುವೆಯೂ ತನ್ನ ಸ್ಥಿತಿಸ್ಥಾಪಕತ್ವ ಸಾಬೀತುಪಡಿಸಿದೆ. ಚೀನಾದ ರಕ್ಷಣಾ, ಭದ್ರತೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಪಿಎಲ್‌ಎ ಪಾತ್ರವನ್ನು ಅವರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: 75ನೇ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಭಾರತ ಅಭಿನಂದಿಸಿದ ಅಮೆರಿಕ
ಚೀನಾದ ಡಿಫೆನ್ಸ್ ಅಟ್ಯಾಚ್ ಮೇಜರ್ ಜನರಲ್ ಚೆನ್ ವೆನ್ರಾಂಗ್ ಮಾತನಾಡಿ, ಪಾಕಿಸ್ತಾನ ಸಶಸ್ತ್ರ ಪಡೆಗಳು ಪಾಕಿಸ್ತಾನ - ಚೀನಾ ಕಾರ್ಯತಂತ್ರದ ಸಂಬಂಧಗಳ ಆಧಾರ ಸ್ತಂಬ ಎಂಬ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಅಭಿಪ್ರಾಯವನ್ನು ನೆನಪಿಸಿಕೊಂಡರು. ಪ್ರಪಂಚದ ಪರಿಸ್ಥಿತಿ ಹೇಗೆ ಬದಲಾದರೂ, ನಮ್ಮ ರಾಷ್ಟ್ರೀಯ ಸಾರ್ವಭೌಮತೆ, ಪ್ರಾದೇಶಿಕ ಸಮಗ್ರತೆ ಮತ್ತು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ನಾವು ಯಾವಾಗಲೂ ಜೊತೆಯಾಗಿ ನಿಲ್ಲುತ್ತೇವೆ ಎಂದು ಅವರು ಹೇಳಿದರು.