ETV Bharat / international

ಪಾಕ್​ ವಿಪಕ್ಷದ 150ಕ್ಕೂ ಹೆಚ್ಚು ಕಾರ್ಯಕರ್ತರ ವಿರುದ್ಧ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಕೇಸ್​​​! - ಕೊರೊನಾ ಮಾರ್ಗಸೂಚಿಯ ಉಲ್ಲಂಘನೆ ದೂರು

ಪಿಡಿಎಂ ಹಾಗೂ ಅದರ ಮೈತ್ರಿಕೂಟದ ಪಕ್ಷಗಳ ಕಾರ್ಯಕರ್ತರ ವಿರುದ್ಧ ಕೊರೊನಾ ಮಾರ್ಗಸೂಚಿಗಳ ಉಲ್ಲಂಘನೆ ದೂರು ದಾಖಲಾಗಿದೆ.

Over 150 PDM activists booked for violating SOPs
ಪಿಡಿಎಂ ಕಾರ್ಯಕರ್ತರ ವಿರುದ್ಧ ದೂರು
author img

By

Published : Dec 7, 2020, 7:29 PM IST

ರಾವಲ್ಪಿಂಡಿ (ಪಾಕಿಸ್ತಾನ): ಕೊರೊನಾ ಸೋಂಕಿನ ವಿರುದ್ಧ ಜಾರಿಗೆ ಜಾರಿಗೆ ತಂದಿದ್ದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಪಾಕಿಸ್ತಾನ ಡೆಮಾಕ್ರಟಿಕ್ ಮೂಮೆಂಟ್​​ನ (ಪಿಡಿಎಂ)ಯ 150ಕ್ಕೂ ಹೆಚ್ಚು ಕಾರ್ಯಕರ್ತರ ಮೇಲೆ ದೂರು ದಾಖಲಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನ ಡೆಮಾಕ್ರಟಿಕ್ ಮೂಮೆಂಟ್​​ ಪಕ್ಷವು ಸರ್ಕಾರವನ್ನು ವಿರೋಧಿಸುವ ಪಕ್ಷವಾಗಿದ್ದು, ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಪಕ್ಷಗಳ ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿದೆ ಎಂದು ಮಾಧ್ಯಮಗಳು ಹೇಳಿವೆ.

ಇದನ್ನೂ ಓದಿ: ಗಡಿ ದಾಟಿ ಬಂದಿದ್ದ ಪಾಕ್​ ಬಾಲಕಿಯರು: ಪಿಒಕೆಗೆ ಮರಳಿಸಿದ ಸೇನೆ

ಜೆಯುಐ-ಎಫ್​​​ನ ರಾವಲ್ಪಿಂಡಿ ಮುಖ್ಯಸ್ಥ ಜಿಯಾ-ಉರ್-ರೆಹ್ಮಾನ್ ಅಮಜೈ ಸೇರಿದಂತೆ ಸುಮಾರು 12 ಮಂದಿಯ ಮೇಲೆ ಎಫ್​ಐಆರ್ ದಾಖಲು ಮಾಡಲಾಗಿದೆ. ಕೊರೊನಾ ಸಂಕಷ್ಟದ ವೇಳೆ ಜಿಲ್ಲಾಧಿಕಾರಿಗಳ ಅನುಮತಿಯಿಲ್ಲದೆ ಸರ್ಕಾರದ ವಿರುದ್ಧ ಮೆರವಣಿಗೆ ನಡೆಸುತ್ತಿದ್ದ ಕಾರಣದಿಂದ ಅವರನ್ನು ತಡೆದು ದೂರು ದಾಖಲು ಮಾಡಿಕೊಳ್ಳಲಾಗಿದೆ.

ಇದಕ್ಕೂ ಮೊದಲು ಹಲವಾರು ಮೆರವಣಿಗೆಗಳನ್ನು ನಡೆಸಲಾಗಿದ್ದು, ಅಕ್ಟೋಬರ್ 16ರಂದು ಗುಜ್ರಾನ್​ವಾಲಾ, ಅಕ್ಟೋಬರ್ 19ರಂದು ಕರಾಚಿ, ಅಕ್ಟೋಬರ್ 25ರಂದು ಕ್ವೆಟ್ಟಾ, ನವೆಂಬರ್ 22ರಂದು ಪೇಶಾವರ, ನವೆಂಬರ್ 30ರಂದು ಮುಲ್ತಾನ್​ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.