ಕರಾಚಿ: ತಾಲಿಬಾನ್ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ನಂತರ ಕೆಲವು ನ್ಯೂಜಿಲ್ಯಾಂಡ್ ಆಟಗಾರರು ಪಾಕ್ ಪ್ರವಾಸದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ನ್ಯೂಜಿಲ್ಯಾಂಡ್ ತನ್ನ ಪಾಕಿಸ್ತಾನ ಪ್ರವಾಸವನ್ನು ಭದ್ರತಾ ಸಲಹೆಗಾರ ರೆಗ್ ಡಿಕಾಸನ್ ಅವರ ಅನುಮತಿ ಪಡೆದು ಮುಂದುವರಿಯುತ್ತಿದೆ.
ಅಕ್ಟೋಬರ್ 3 ರವರೆಗೆ ರಾವಲ್ಪಿಂಡಿ ಮತ್ತು ಲಾಹೋರ್‌ನಲ್ಲಿ ಮೂರು ಏಕದಿನ ಮತ್ತು ಐದು ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲು ನ್ಯೂಜಿಲ್ಯಾಂಡ್ ಸೆಪ್ಟೆಂಬರ್ 11 ರಂದು ಇಸ್ಲಾಮಾಬಾದ್ ತಲುಪಲಿದೆ.
ನ್ಯೂಜಿಲ್ಯಾಂಡ್ ಕ್ರಿಕೆಟ್ ಅಧಿಕಾರಿಗಳು ಈಗ ಅಂತಾರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ತಜ್ಞರಾದ ರೆಗ್ ಡಿಕಾಸನ್ ಅವರನ್ನು ಈ ವಾರಾಂತ್ಯದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿ ಸಂಪೂರ್ಣ ಭದ್ರತೆ ಮತ್ತು ಕೋವಿಡ್ -19 ಮೌಲ್ಯಮಾಪನವನ್ನು ಕೈಗೊಳ್ಳಲು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:IPL: ಐಸಿಸಿ ಅಕಾಡೆಮಿಯಲ್ಲಿ CSKಗೆ ತರಬೇತಿ, ಶೇಖ್ ಜಾಯೇದ್ ಕ್ರೀಡಾಂಗಣದಲ್ಲಿ MIಗೆ ತರಬೇತಿ
"ಇತ್ತೀಚಿನ ವರ್ಷಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮತ್ತು ಇತರ ಮಂಡಳಿಗಳಿಗೆ ಭದ್ರತೆ ಮತ್ತು ಇತರ ಕ್ರಿಕೆಟ್ ಸಂಬಂಧಿತ ವಿಚಾರಗಳ ಮಾತುಕತೆ ನಡೆಸಲು ಡಿಕಾಸನ್ ಪಾಕಿಸ್ತಾನಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಿರುವುದರಿಂದ ಭದ್ರತಾ ಪರಿಸ್ಥಿತಿಯ ಬಗ್ಗೆ ವರದಿ ನೀಡಲು ಅವರಿಗಿಂತ ಉತ್ತಮ ಯಾರೂ ಇಲ್ಲ ಎಂದು ನಮಗೆ ವಿಶ್ವಾಸವಿದೆ'' ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕೃತ ಮೂಲಗಳು ತಿಳಿಸಿವೆ.
ಸರಣಿಯಿಂದ ಹಿಂದೆ ಸರಿದ ಪ್ರಮುಖ ಆಟಗಾರರು
ನ್ಯೂಜಿಲ್ಯಾಂಡ್ ಈಗಾಗಲೇ ಏಳರಿಂದ ಎಂಟು ಪ್ರಮುಖ ಆಟಗಾರರನ್ನು ಹೊಂದಿರುವ ತಂಡವನ್ನು ಕಣಕ್ಕಿಳಿಸಲು ಸಿದ್ಧವಾಗಿದೆ. ಆದರೆ, ವಿಲಿಯಮ್ಸನ್ ಮತ್ತು ಹಿರಿಯ ಆಟಗಾರರಾದ ಟ್ರೆಂಟ್ ಬೌಲ್ಟ್, ಲಾಕಿ ಫರ್ಗುಸನ್, ಕೈಲ್ ಜೆಮಿಸನ್, ಟಿಮ್ ಸೀಫರ್ಟ್, ಜಿಮ್ಮಿ ನೀಶಮ್, ಮಿಚೆಲ್ ಸ್ಯಾಂಟ್ನರ್ ಅವರು ಪಾಕ್ ಪ್ರವಾಸವನ್ನು ಕೈಬಿಟ್ಟಿದ್ದಾರೆ. ಜೊತೆಗೆ ಟಿಮ್ ಸೌಥಿ ಮತ್ತು ಡೆವೊನ್ ಕಾನ್ವೇ ಮುಂತಾದ ಆಟಗಾರರು ಪಾಕಿಸ್ತಾನ ಪ್ರವಾಸಕ್ಕೆ ಲಭ್ಯವಿಲ್ಲ.
ಡಿಕಾಸನ್ ಅನುಮತಿ ಮೇರೆಗೆ ಕೀವಿಸ್ ಪ್ರವಾಸ ಮುಂದುವರಿದರೂ ಪಾಕಿಸ್ತಾನ ಪ್ರವಾಸದ ಬಗ್ಗೆ ಅಸಮಾಧಾನವಿದ್ದಲ್ಲಿ ಆಟಗಾರರು ಪ್ರವಾಸದಿಂದ ಹಿಂದೆ ಸರಿಯುವ ಹಕ್ಕನ್ನು ಹೊಂದಿರುತ್ತಾರೆ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ಬುಧವಾರ ಹೇಳಿದೆ.
ಇದನ್ನೂ ಓದಿ:ಐಪಿಎಲ್ ಕಾಳಗಕ್ಕೆ ಸಜ್ಜಗೊಂಡ ದುಬೈ: ಕಡ್ಡಾಯ ಕ್ವಾರಂಟೈನ್ ಬಳಿಕ ಮೈದಾನದಲ್ಲಿ ಕಾಣಿಸಿಕೊಂಡ ಚಾಂಪಿಯನ್!?
ನ್ಯೂಜಿಲ್ಯಾಂಡ್ ಕ್ರಿಕೆಟ್ ಅವರ ಅಧಿಕಾರಿಗಳಲ್ಲಿ ಒಬ್ಬರನ್ನು ಮತ್ತು ಭದ್ರತಾ ಸಲಹೆಗಾರರನ್ನು ಬಾಂಗ್ಲಾದೇಶದಲ್ಲಿ ಭೇಟಿಗಾಗಿ ಕಳುಹಿಸಿದೆ. ಏಕೆಂದರೆ ಕಿವೀಸ್ ಟೀಮ್ ಮೊದಲು ಬಾಂಗ್ಲಾದೇಶಕ್ಕೆ ತೆರಳಿ ಅಲ್ಲಿಂದ ಪಾಕಿಸ್ತಾನಕ್ಕೆ ಹಾರಲಿದೆ.