ETV Bharat / international

ಜಪಾನ್​ ಸಮುದ್ರದ ಮೇಲೆ ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ

ಜಪಾನ್​ನ ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಪ್ರಕಾರ ಉತ್ತರ ಕೊರಿಯಾ ಗುರುತಿಸಲಾಗದ ಕ್ಷಿಪಣಿಯೊಂದನ್ನು ಉಡ್ಡಯನ ಮಾಡಿದೆ ಎಂದು ಹೇಳಲಾಗುತ್ತಿದೆ. ಜಪಾನ್​ ಸಮುದ್ರದತ್ತ ಈ ಕ್ಷಿಪಣಿಯನ್ನ ಹಾರಿಸಲಾಗಿದೆ ಎಂದು ದಕ್ಷಿಣ ಕೊರಿಯಾದ ಸುದ್ದಿ ಸಂಸ್ಥೆಯೊಂದು ಅಲ್ಲಿನ ಮಿಲಿಟರಿ ವರದಿಯನ್ನ ಉಲ್ಲೇಖಿಸಿ ಸುದ್ದಿ ಬಿತ್ತರಿಸಿದೆ.

ಕ್ಷಿಪಣಿ ಉಡಾವಣೆ
ಕ್ಷಿಪಣಿ ಉಡಾವಣೆ
author img

By

Published : Jan 27, 2022, 9:06 AM IST

ಪಯೋಂಗ್ಯಾಂಗ್: ಉತ್ತರ ಕೊರಿಯಾ ಜಪಾನ್ ಸಮುದ್ರವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಉಡಾಯಿಸಿದೆ ಎಂದು ಜಪಾನ್​ನ ಯೋನ್ಹಾಪ್ ನ್ಯೂಸ್ ಎಂಬ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಈ ವರ್ಷ ಪಯೋಂಗ್ಯಾಂಗ್ ನಡೆಸಿದ ಆರನೇ ಕ್ಷಿಪಣಿ ಪರೀಕ್ಷೆ ಇದಾಗಿದೆ. ಚೀನಾ ಮತ್ತು ರಷ್ಯಾವು ವಿಶ್ವಸಂಸ್ಥೆಯಲ್ಲಿ ಅಮೆರಿಕದ ಯತ್ನವನ್ನು ವಿಫಲಗೊಳಿಸಿದ ಬಳಿಕ, ಉತ್ತರ ಕೊರಿಯಾ ಮತ್ತೊಂದು ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ನಡೆಸಿ ಅಮೆರಿಕಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿದೆ ಎಂದು ಮಾಧ್ಯಮ ವರದಿ ಮಾಡಿವೆ.

ಉತ್ತರ ಕೊರಿಯಾ ಈ ಹಿಂದೆ ಸಹ ಕ್ಷಿಪಣಿಯೊಂದನ್ನು ಉಡಾವಣೆ ಮಾಡಿತ್ತು ಎಂದು ಹೇಳಲಾಗುತ್ತಿದೆ. ಕೊರಿಯಾದ ಪೂರ್ವ ಸಮುದ್ರದಲ್ಲಿರುವ ದ್ವೀಪವೊಂದನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಉಡಾಯಿಸಿತ್ತು. ಜಲಾಂತರ್ಗಾಮಿಯಿಂದ ಕ್ಷಿಪಣಿ ಉಡಾಯಿಸುವ ತಂತ್ರಜ್ಞಾನದ ಪರೀಕ್ಷೆ ಹಿನ್ನೆಲೆಯಲ್ಲಿ ಇತರ ರಾಷ್ಟ್ರಗಳು ಚಿಂತಿತವಾಗಿದ್ದು, ಕಳವಳ ಕೂಡಾ ವ್ಯಕ್ತಪಡಿಸಿವೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.