ETV Bharat / international

ನೋ ಕಿಸ್​.. ನೋ ಹಗ್​ ಎಂದ ರಷ್ಯಾ.. ಕಾರಣವೇನು ಗೊತ್ತೆ..?

ರಷ್ಯಾದ ಗ್ರಾಹಕ ಆರೋಗ್ಯ ತಂಡವು ನಾಗರಿಕರಿಗೆ ಹ್ಯಾಂಡ್‌ಶೇಕ್, ಚುಂಬನ ಅಥವಾ ಅಪ್ಪುಗೆಯಿಂದ ಪರಸ್ಪರ ಶುಭಾಶಯ ಹೇಳದಂತೆ ತಿಳಿಸಿದೆ. ಚೀನಾದ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಜನಸಂದಣಿಯ ಸ್ಥಳಗಳಲ್ಲಿ ಮಾಸ್ಕ್​ ಧರಿಸಲು ಸಲಹೆ ನೀಡಿದೆ.

No kissing or hugging in Russia
ನೋ ಕಿಸ್​.. ನೋ ಹಗ್​ ಎಂದ ರಷ್ಯಾ
author img

By

Published : Jan 31, 2020, 9:01 PM IST

ಮಾಸ್ಕೋ (ರಷ್ಯಾ) : ರಷ್ಯಾದ ಗ್ರಾಹಕ ಆರೋಗ್ಯ ತಂಡವು ನಾಗರಿಕರಿಗೆ ಹ್ಯಾಂಡ್‌ಶೇಕ್, ಚುಂಬನ ಅಥವಾ ಅಪ್ಪುಗೆಯಿಂದ ಪರಸ್ಪರ ಶುಭಾಶಯ ಹೇಳದಂತೆ ತಿಳಿಸಿದೆ. ಚೀನಾದ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಜನಸಂದಣಿಯ ಸ್ಥಳಗಳಲ್ಲಿ ಮಾಸ್ಕ್​ ಧರಿಸಲು ಸಲಹೆ ನೀಡಿದೆ.

ರಷ್ಯಾದಲ್ಲಿ ಕೊರೊನಾ ವೈರಸ್​ ಬಗ್ಗೆ ಯಾವುದೇ ಪ್ರಕರಣಗಳಿಲ್ಲ. ಆದರೆ ಆಗ್ನೇಯ ದೇಶಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ರಷ್ಯಾ, ವೈರಸ್​ ಹರಡುವಿಕೆಯನ್ನು ತಡೆಯಲು ಗಡಿ ನಿರ್ಬಂಧಗಳನ್ನು ವಿಧಿಸಿದೆ.

ರಷ್ಯಾ ಕೊರೊನಾ ವೈರಸ್​ ತಡೆಗೆ ಹೊಸ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿದೆ. ಇದರಲ್ಲಿ ರಷ್ಯನ್ನರಿಗೆ ಉದ್ದನೆಯ ಕೂದಲಿದ್ದರೆ ಅವನ್ನು ಕಟ್ಟಿಹಾಕಲು, ಸಾರ್ವಜನಿಕ ಸ್ಥಳಗಳಲ್ಲಿ ಡೋರ್​ನಾಬ್ಸ್​ ಮತ್ತು ಕಟಾಂಜನಗಳನ್ನು ಸ್ಪರ್ಶಿಸದಿರಲು ಮತ್ತು ಜ್ವರ ರೋಗಲಕ್ಷಣಗಳಿರುವ ಜನರೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಲು ಸಲಹೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.