ETV Bharat / international

ಕಂದಕಕ್ಕೆ ಉರುಳಿ ಬಿದ್ದ ಬಸ್:​ ಸ್ಥಳದಲ್ಲೇ 9 ಜನ ಸಾವು, 34 ಮಂದಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ಬಸ್​ವೊಂದು ಕಂದಕಕ್ಕೆ ಉರುಳಿ ಬಿದ್ದು, 9 ಜನ ಸಾವನ್ನಪ್ಪಿರುವ ಘಟನೆ ಭಾರತದ ಗಡಿ ದೇಶವಾದ ನೇಪಾಳದಲ್ಲಿ ನಡೆದಿದೆ.

Nine killed in road accident, Nine killed in road accident at Nepals Darchula, Darchula road accident, Darchula road accident news, ರಸ್ತೆ ಅಪಘಾತದಲ್ಲಿ 9 ಜನ ಸಾವು, ನೇಪಾಳದ ಡಾರ್ಚುಲಾ ರಸ್ತೆ ಅಪಘಾತದಲ್ಲಿ 9 ಜನ ಸಾವು, ಡಾರ್ಚುಲಾ ರಸ್ತೆ ಅಪಘಾತ, ಡಾರ್ಚುಲಾ ರಸ್ತೆ ಅಪಘಾತ ಸುದ್ದಿ,
ಸಂಗ್ರಹ ಚಿತ್ರ
author img

By

Published : Nov 13, 2020, 9:53 AM IST

ಡಾರ್ಚುಲಾ: ನೇಪಾಳದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 9 ಜನ ಸಾವನ್ನಪ್ಪಿದ್ದು, 34 ಜನ ಗಾಯಗೊಂಡಿದ್ದಾರೆ.

ಗುರುವಾರ ರಾತ್ರಿ ದಾರ್ಚುಲಾ ಜಿಲ್ಲೆಯ ಗನ್ನಾನಿಂದ ಮಹೇಂದ್ರನಗರಕ್ಕೆ ಹೋಗುತ್ತಿದ್ದ ಬಸ್​ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. 600 ಮೀಟರ್​ ಮೇಲಿಂದ ನೆಲಕ್ಕಪ್ಪಳಿಸಿದ ರಭಸಕ್ಕೆ ಬಸ್​ನಲ್ಲಿದ್ದ 40ಕ್ಕೂ ಹೆಚ್ಚು ಜನರ ಪೈಕಿ ಇಬ್ಬರು ಮಹಿಳೆಯರು ಸೇರಿದಂತೆ 9 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

  • At least 9 dead and 34 others injured in a passenger bus accident in Baitadi district of Nepal: Police

    — ANI (@ANI) November 13, 2020 " class="align-text-top noRightClick twitterSection" data=" ">

ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ 34 ಗಾಯಾಳುಗಳ ಪೈಕಿ 7 ಜನರ ಸ್ಥಿತಿ ಗಂಭೀರವಾಗಿದೆ. ಮಾಲೀಕ ಬೀರೇಂದ್ರ ಕರ್ಕಿ ಬಸ್​ ನಡೆಸುತ್ತಿದ್ದು, ಚಾಲಕನು ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.