ಡಮಾಸ್ಕಸ್ (ಸಿರಿಯಾ): ಜಭತ್ ಅಲ್-ನುಸ್ರಾ ಭಯೋತ್ಪಾದಕ ಗುಂಪು (The Jabhat al-Nusra terrorist group) ಕಳೆದ 24 ಗಂಟೆಗಳಲ್ಲಿ ಸಿರಿಯಾದ ಇಡ್ಲಿಬ್ ಡಿ-ಎಕ್ಸ್ಕಲೇಷನ್ (Idlib de-escalation) ವಲಯದ ಮೇಲೆ ಒಂಬತ್ತು ಬಾರಿ ಶೆಲ್ ದಾಳಿ ಮಾಡಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯದ ಕೇಂದ್ರದ ಉಪ ಮುಖ್ಯಸ್ಥ ರಿಯರ್ ಅಡ್ಮಿರಲ್ ವಾಡಿಮ್ ಕುಲಿಟ್ (Rear Admiral Vadim Kulit) ಹೇಳಿದ್ದಾರೆ.
ಜಭತ್ ಅಲ್ - ನುಸ್ರಾ ಭಯೋತ್ಪಾದಕ ಗುಂಪು ಅಲೆಪ್ಪೊ ಪ್ರಾಂತ್ಯದಲ್ಲಿ ಐದು ಬಾರಿ ಮತ್ತು ಇಡ್ಲಿಬ್ ವಲಯದಲ್ಲಿ ನಾಲ್ಕು ಶೆಲ್ ದಾಳಿ (shelling attack) ನಡೆಸಿದೆ. ಅಲೆಪ್ಪೊ ಪ್ರಾಂತ್ಯದಲ್ಲಿ ಭಯೋತ್ಪಾದಕರು ಸರ್ಕಾರಿ ಸೇನೆ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಸಿರಿಯನ್ ಸೈನಿಕ ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸಿರಿಯನ್ ಅರಬ್ ಗಣರಾಜ್ಯದಲ್ಲಿ ಭಯೋತ್ಪಾದಕರನ್ನು ಹೆಡೆಮುರಿ ಕಟ್ಟುವ ಉದ್ದೇಶದಿಂದ 2016 ರ ಫೆಬ್ರವರಿಯಲ್ಲಿ ರಷ್ಯಾದ ರಕ್ಷಣಾ ಸಚಿವಾಲಯ ಕೇಂದ್ರವನ್ನು ಇಲ್ಲಿ ಸ್ಥಾಪಿಸಲಾಗಿದೆ.