ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಏಕಾಏಕಿ ವಿದ್ಯುತ್ ಕಡಿತ ಉಂಟಾದ ಹಿನ್ನೆಲೆ ಜನಜೀವನ ಏರು ಪೇರಾಗಿದ್ದು, ಹಲವು ನಗರಗಳು ಮತ್ತು ಪಟ್ಟಣಗಳು ಕತ್ತಲೆಯಲ್ಲಿ ಮುಳುಗಿದವು ಎಂದು ಮಾಧ್ಯಮಗಳು ವರದಿ ಮಾಡಿವೆ.
ನಿನ್ನೆ ಮಧ್ಯರಾತ್ರಿ ತಾಂತ್ರಿಕ ಸಮಸ್ಯೆಯಿಂದಾಗಿ ಏಕಕಾಲದಲ್ಲಿ ನಗರಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾದ ಹಿನ್ನೆಲೆ ಕರಾಚಿ, ರಾವಲ್ಪಿಂಡಿ, ಲಾಹೋರ್, ಇಸ್ಲಾಮಾಬಾದ್, ಮುಲ್ತಾನ್ ಮತ್ತು ಇತರೆ ನಿವಾಸಿಗಳು ಸಂಕಷ್ಟ ಎದುರಿಸಿದರು.
ರಾಷ್ಟ್ರೀಯ ವಿತರಣಾ ವ್ಯವಸ್ಥೆಯ ವಿದ್ಯುತ್ ಫ್ರಿಕ್ವೆನ್ಸಿ ದಿಢೀರ್ ಕುಸಿದಿದ್ದು, ಈ ಹಿನ್ನೆಲೆ ಫ್ರಿಕ್ವೆನ್ಸಿ ಕುಸಿತಕ್ಕೆ ಕಾರಣ ಕಂಡುಹಿಡಿಯಲು ಎನ್‌ಟಿಡಿಸಿ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಇಸ್ಲಾಮಾಬಾದ್ ಜಿಲ್ಲಾಧಿಕಾರಿ ಮುಹಮ್ಮದ್ ಹಮ್ಜಾ ಶಫ್ಕಾತ್ ಟ್ವೀಟ್ ಮಾಡಿದ್ದಾರೆ.
-
Plz save your energy and water. No need to panic. Some technical fault in the Transmission system. Might take a couple of hours to normalize. Don't believe in conspiracies. We are on duty to keep the city safe @DigIslamabad @rmwaq
— Muhammed Hamza Shafqaat (@hamzashafqaat) January 9, 2021 " class="align-text-top noRightClick twitterSection" data="
">Plz save your energy and water. No need to panic. Some technical fault in the Transmission system. Might take a couple of hours to normalize. Don't believe in conspiracies. We are on duty to keep the city safe @DigIslamabad @rmwaq
— Muhammed Hamza Shafqaat (@hamzashafqaat) January 9, 2021Plz save your energy and water. No need to panic. Some technical fault in the Transmission system. Might take a couple of hours to normalize. Don't believe in conspiracies. We are on duty to keep the city safe @DigIslamabad @rmwaq
— Muhammed Hamza Shafqaat (@hamzashafqaat) January 9, 2021
ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿನ ಫ್ರಿಕ್ವೆನ್ಸಿಯು ಇದ್ದಕ್ಕಿದ್ದಂತೆ 50 ರಿಂದ 0 ಗೆ ಇಳಿದಿದೆ. ಈ ಹಿನ್ನೆಲೆ ಫ್ರಿಕ್ವೆನ್ಸಿ ಕುಸಿತಕ್ಕೆ ಕಾರಣವೇನು ಎಂಬುದನ್ನು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ. ಜನರು ಸಂಯಮದಿಂದ ವರ್ತಿಸಬೇಕು ಎಂದು ವಿದ್ಯುತ್ ಸಚಿವ ಒಮರ್ ಅಯೂಬ್ ಟ್ವೀಟ್ ಮಾಡಿದ್ದಾರೆ.
ಇನ್ನು ಪಾಕಿಸ್ತಾನದ ವಿದ್ಯುತ್ ವ್ಯತ್ಯಯ ಕುರಿತು ಭಾರತ ಹಾಗೂ ಪಾಕಿಸ್ತಾನದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗುತ್ತಿದ್ದು, ಟ್ವಿಟ್ಟರ್‌ನಲ್ಲಿ ಕೆಲವರು ಹಾಸ್ಯಮಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಇಮ್ರಾನ್ ಖಾನ್ ವಿರುದ್ಧ ನೆಟಿಜನ್ ಆಕ್ರೋಶ ವ್ಯಕ್ತಪಡಿಸುತ್ತಿದ್ದು, 'ಅಂತಿಮವಾಗಿ ಇಮ್ರಾನ್ ಖಾನ್ ನಯಾ ಪಾಕಿಸ್ತಾನದಲ್ಲಿ ನೈಟ್ ಮೂಡ್ ಪರಿಚಯಿಸಿಬಿಟ್ಟರು' ಎಂದು ಟ್ವಟಿರ್ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ 'ಪಾಕಿಸ್ತಾನದಲ್ಲಿರುವ ಪ್ರತಿಯೊಬ್ಬರು ಬೆಳಗ್ಗೆ ತನಕ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿರುತ್ತಾರೆ' ಎಂದು ಕಾಲೆಳೆದಿದ್ದಾರೆ.