ನ್ಯೂಜಿಲೆಂಡ್: ಸಾಧಾರಣವಾಗಿ ಅಧಿವೇಶನದ ವೇಳೆ ಸದ್ಯಸರ ವಾಗ್ವಾದ, ಪ್ರತಿಪಕ್ಷಗಳ ಆರೋಪಗಳು, ಅಧಿಕಾರ ಪಕ್ಷದ ವಿವರಣೆಗಳು ಕೇಳಿ ಬರುತ್ತವೆ. ಆದ್ರೆ ನ್ಯೂಜಿಲೆಂಡ್ ಸಂಸತ್ ಭವನದಲ್ಲಿ ಆಸಕ್ತಿಕರ ಘಟನೆಯೊಂದು ನಡೆದಿದೆ.
-
👶🏻 At 6 weeks old, Tūtānekai Smith-Coffey had his 5 minutes of fame in the #NZParliament this week, and it all went a bit viral @TIME 😱 Thanks @SpeakerTrevor.
— Tāmati Coffey (@tamaticoffey) August 22, 2019 " class="align-text-top noRightClick twitterSection" data="
I hear we’ve got a date on @GMB this evening? Is that @piersmorgan? #nzpol pic.twitter.com/D9aCngPNIE
">👶🏻 At 6 weeks old, Tūtānekai Smith-Coffey had his 5 minutes of fame in the #NZParliament this week, and it all went a bit viral @TIME 😱 Thanks @SpeakerTrevor.
— Tāmati Coffey (@tamaticoffey) August 22, 2019
I hear we’ve got a date on @GMB this evening? Is that @piersmorgan? #nzpol pic.twitter.com/D9aCngPNIE👶🏻 At 6 weeks old, Tūtānekai Smith-Coffey had his 5 minutes of fame in the #NZParliament this week, and it all went a bit viral @TIME 😱 Thanks @SpeakerTrevor.
— Tāmati Coffey (@tamaticoffey) August 22, 2019
I hear we’ve got a date on @GMB this evening? Is that @piersmorgan? #nzpol pic.twitter.com/D9aCngPNIE
ಹೌದು, ನ್ಯೂಜಿಲೆಂಡ್ ಸಂಸತ್ ಭವನದಲ್ಲಿ ನಡೆಯುತ್ತಿದ್ದ ಅಧಿವೇಶನದಲ್ಲಿ ವಾದ-ವಿವಾದಗಳ ನಡುವೆ ಮಗುವಿನ ಅಳುತ್ತಿರುವ ಶಬ್ದವೂ ಕೇಳಿ ಬಂತು. ಸಂಸದ ತಮಟಿ ಕಾಫಿ ಅಧಿವೇಶನಕ್ಕೆ ತನ್ನ ಒಂದು ತಿಂಗಳ ಮಗುವಿನೊಂದಿಗೆ ಆಗಮಿಸಿದ್ದರು. ಚರ್ಚೆ ನಡೆಯುತ್ತಿದ್ದ ವೇಳೆ ಮಗು ಅಳುತ್ತಿದೆ. ಇದನ್ನು ಗಮನಿಸಿದ ಸ್ಪೀಕರ್ ಮಗುವನ್ನು ತನ್ನ ಬಳಿ ಎತ್ತಿಕೊಂಡು ಬಾಟಲಿ ಮೂಲಕ ಹಾಲು ಕುಡಿಸಿದರು. ಬಳಿಕ ಮಗುವಿನ ಜೊತೆ ಐದು ನಿಮಿಷಗಳ ಕಾಲ ಕಳೆದರು. ಮಗುವಿನ ತುಂಟ ನಗುವಿಗೆ ಸ್ಪೀಕರ್ ಟ್ರೆವರ್ ಮಲ್ಲಾರ್ಡ್ ಮನಸೋತರು.
-
What a powerful and soulful picture!!!
— Rema Rajeshwari IPS (@rama_rajeswari) August 21, 2019 " class="align-text-top noRightClick twitterSection" data="
A lawmaker @tamaticoffey in New Zealand brought his baby to the parliament after coming back from paternity leave. The House speaker @SpeakerTrevor babysat for him during a debate. pic.twitter.com/KaqMyIYhdv
">What a powerful and soulful picture!!!
— Rema Rajeshwari IPS (@rama_rajeswari) August 21, 2019
A lawmaker @tamaticoffey in New Zealand brought his baby to the parliament after coming back from paternity leave. The House speaker @SpeakerTrevor babysat for him during a debate. pic.twitter.com/KaqMyIYhdvWhat a powerful and soulful picture!!!
— Rema Rajeshwari IPS (@rama_rajeswari) August 21, 2019
A lawmaker @tamaticoffey in New Zealand brought his baby to the parliament after coming back from paternity leave. The House speaker @SpeakerTrevor babysat for him during a debate. pic.twitter.com/KaqMyIYhdv
ಇನ್ನು ಸ್ಪೀಕರ್ ಟ್ರೆವರ್ ಮಲ್ಲಾರ್ಡ್ ಬಾಟಲಿ ಮೂಲಕ ಮಗುವಿಗೆ ಹಾಲು ಕುಡಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಸ್ಪೀಕರ್ ಕಾರ್ಯಕ್ಕೆ ನೆಟ್ಟಿಗರು ಫಿದಾ ಆಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
2017ರಲ್ಲಿ ಆಸ್ಟ್ರೇಲಿಯಾ ಸಂಸತ್ನಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಆಸ್ಟ್ರೇಲಿಯಾ ಸಂಸತ್ ಸದಸ್ಯೆ ಲರಿಸ್ಸಾ ವಾಟರ್ಸ್ ತನ್ನ ಹಸುಗೂಸನ್ನು ಎತ್ತಿಕೊಂಡು ಅಧಿವೇಶನಕ್ಕೆ ಆಗಮಿಸಿ, ಸದನದಲ್ಲೇ ಮಗುವಿಗೆ ಹಾಲುಣಿಸಿ ಸುದ್ದಿ ಆಗಿದ್ದರು.