ETV Bharat / international

ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಉಚ್ಚಾಟನೆ..!

author img

By

Published : Jan 24, 2021, 8:17 PM IST

ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರನ್ನು ಆಡಳಿತ ಪಕ್ಷ ನೇಪಾಳ ಕಮ್ಯುನಿಸ್ಟ್ ಪಾರ್ಟಿಯಿಂದ ಉಚ್ಚಾಟಿಸಲಾಗಿದೆ.

PM KP Sharma Oli
ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಓಲಿ

ಕಾಠ್ಮಂಡು: ಮಹತ್ವದ ಬೆಳವಣಿಗೆಯೊಂದರಲ್ಲಿ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರನ್ನು, ಆಡಳಿತ ಪಕ್ಷವಾದ ನೇಪಾಳ ಕಮ್ಯುನಿಸ್ಟ್ ಪಾರ್ಟಿಯಿಂದ ಉಚ್ಚಾಟಿಸಲಾಗಿದೆ. ಓಲಿ ಅವರ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ ಎಂದು ಪಕ್ಷದ ವಕ್ತಾರ ನಾರಾಯಣ್ ಕಾಜಿ ಶ್ರೇಷ್ಠಾ ದೃಢಪಡಿಸಿದ್ದಾರೆ.

ಕಳೆದ ತಿಂಗಳು ಏಕಾಏಕಿ ಸಂಸತ್ತನ್ನು ವಿಸರ್ಜಿಸಿದ್ದ ಓಲಿ ಅವರ ನಿರ್ಧಾರಕ್ಕೆ, ಕಮ್ಯುನಿಸ್ಟ್​‌ ಪಕ್ಷವು ವಿರೋಧ ವ್ಯಕ್ತಪಡಿಸಿತ್ತು. ಈ ಬಗ್ಗೆ ವಿವರಣೆ ನೀಡಬೇಕು ಎಂದು ಅವರಿಗೆ ನೋಟಿಸ್‌ ಕೂಡ ಜಾರಿ ಮಾಡಲಾಗಿತ್ತು. ಆದರೆ ಈ ವರೆಗೆ ಓಲಿ ಅವರಿಂದ ಯಾವುದೇ ಉತ್ತರ ಬರದ ಕಾರಣ, ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.