ಕಠ್ಮಂಡು : ಚೀನಾವು ಗಡಿಯಲ್ಲಿ ಯಾವುದೇ ಘೋಷಣೆ ನೀಡದೆ ವ್ಯಾಪಾರದ ಮೇಲೆ ಕಡಿವಾಣ ಹೇರಿದೆ ಎಂದು ನೇಪಾಳಿ ವ್ಯಾಪಾರಿಗಳು ಆರೋಪಿಸಿದ್ದಾರೆ.
ಕಳೆದ 16 ತಿಂಗಳುಗಳಿಂದ ಚೀನಾವು, ತಮ್ಮ ಸರಕು ತುಂಬಿದ ಕಂಟೇನರ್ ಟ್ರಕ್‌ಗಳಿಗೆ ಗಡಿ ದಾಟಲು ನೇಪಾಳಕ್ಕೆ ಅವಕಾಶ ನೀಡಿಲ್ಲ. ಅಧಿಕೃತವಾಗಿ ಯಾವುದೇ ಘೋಷನೆ ನೀಡದೆ ವ್ಯಾಪಾರದ ಮೇಲೆ ನಿಷೇಧ ಹೇರಿದೆ ಎಂದು ನೇಪಾಳಿ ವ್ಯಾಪಾರಿಗಳು ಆರೋಪಿಸಿದ್ದಾರೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.
ಸರಕುಗಳು ಇನ್ನೂ ಕೂಡ ಗಡಿಯಲ್ಲಿ ಸಿಲುಕಿವೆ. ನಾವು ಈ ವಿಷಯವನ್ನು ಚೀನಾದೊಂದಿಗೆ ಹಲವು ಬಾರಿ ಚರ್ಚಿಸಿದ್ದೇವೆ ಮತ್ತು ಸಂಬಂಧಪಟ್ಟ ಸಚಿವರು ಸೇರಿ ಎಲ್ಲಾ ಪ್ರಮುಖ ರಾಜಕೀಯ ಮುಖಂಡರನ್ನು ಕೇಳಿಕೊಂಡಿದ್ದೇವೆ.
ಈ ಸಮಸ್ಯೆಯನ್ನು ರಾಜತಾಂತ್ರಿಕವಾಗಿ ಪರಿಹರಿಸುವಂತೆ ನಾವು ವಿದೇಶಾಂಗ ಸಚಿವಾಲಯಕ್ಕೆ ಸಹ ವಿನಂತಿಸಿದ್ದೇವೆ. ಆದರೆ, ಏನೂ ಪ್ರಯೋಜನವಾಗಿಲ್ಲ, ಯಾವುದೇ ಫಲಿತಾಂಶ ಕೂಡ ಸಿಕ್ಕಿಲ್ಲ ಎಂದು ನೇಪಾಳ ರಾಷ್ಟ್ರೀಯ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ನರೇಶ್ ಕಟುವಾಲ್ ತಿಳಿಸಿದರು.
ಈ ಸುದ್ದಿಯನ್ನೂ ಓದಿ: ಮ್ಯಾನ್ಮಾರ್ನಲ್ಲಿ ಶಸ್ತ್ರಸಜ್ಜಿತರಿಂದ ದಾಳಿ: ಪೊಲೀಸರು, ನಾಗರಿಕರು ಸೇರಿ 12 ಮಂದಿ ಬಲಿ
ಚೀನಾದ ಈ ನಡೆಯನ್ನು ನಾವು ಅನಧಿಕೃತ ದಿಗ್ಬಂಧನವೆಂದು ಪರಿಗಣಿಸಿದ್ದೇವೆಂದು ತಿಳಿಸಿದರು. ಒಂದು ವೇಳೆ ಈ ಪರಿಸ್ಥಿತಿ ಮುಂದುವರಿದ್ರೆ ಚೀನಾದೊಂದಿಗೆ ವ್ಯಾಪಾರ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.