ETV Bharat / international

ನೇಪಾಳ-ಭೂತಾನ್​ ಪ್ರವಾಹಕ್ಕೆ 17 ಮಂದಿ ಬಲಿ... ಹಲವರು ನಾಪತ್ತೆ

ನೇಪಾಳ ಹಾಗೂ ಭೂತಾನ್​ನಲ್ಲಿ ಸಂಭವಿಸಿದ ಪ್ರವಾಹದಲ್ಲಿ ಒಟ್ಟು 17 ಮಂದಿ ಈವರೆಗೆ ಸಾವನ್ನಪ್ಪಿದ್ದು, ಅನೇಕರು ನಾಪತ್ತೆಯಾಗಿದ್ದಾರೆ.

Nepal flood
ನೇಪಾಳ ಪ್ರವಾಹ
author img

By

Published : Jun 17, 2021, 10:23 AM IST

ಕಠ್ಮಂಡು: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದುಂಟಾದ ಪ್ರವಾಹಕ್ಕೆ ನೇಪಾಳ ಹಾಗೂ ಭೂತಾನ್​ನ ಜನರು ತತ್ತರಿಸಿದ್ದಾರೆ.

ನೇಪಾಳದಲ್ಲಿ 7 ಮತ್ತು ಭೂತಾನ್​ನಲ್ಲಿ 10 ಸೇರಿ ಒಟ್ಟು 17 ಮಂದಿ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರು ಪ್ರವಾಹದ ಕೆಸರು ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಹೆಚ್ಚಿದೆ.

ನೇಪಾಳದ ಸಿಂಧುಪಾಲ್‌ಚೋಕ್‌ ಜಿಲ್ಲೆಯಲ್ಲಿನ ಪ್ರವಾಹ ಪರಿಸ್ಥಿತಿ

ನೇಪಾಳದ ಸಿಂಧುಪಾಲ್‌ಚೋಕ್‌ ಜಿಲ್ಲೆಯ ಮೆಲಮ್ಚಿ ಪಟ್ಟಣವು ನೀರು-ಕೆಸರಿನಿಂದ ಆವೃತವಾಗಿದ್ದು, ಸುಮಾರು 200 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ಅನೇಕರು ಗಾಯಗೊಂಡಿದ್ದು, ಹೆಲಿಕಾಪ್ಟರ್‌ಗಳ ಮೂಲಕ ಗಾಯಾಳುಗಳನ್ನು ಸ್ಥಳಾಂತರಿಸಲಾಗಿದೆ. ರಕ್ಷಣಾ ಪಡೆಗಳು ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಭೂತಾನ್ ರಾಜಧಾನಿ ತಿಮ್ಫುವಿನಿಂದ 60 ಕಿ.ಮೀ. ದೂರದಲ್ಲಿದ್ದ ಗ್ರಾಮವೊಂದು ಸಂಪೂರ್ಣವಾಗಿ ಜಲಾವೃತವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ನೇಪಾಳ ಹಾಗೂ ಭೂತಾನ್​ನ​ ಅನೇಕ ಪ್ರದೇಶಗಳು ಗುಡ್ಡ ಪ್ರದೇಶಗಳಿಂದ ಕೂಡಿರುವುದರಿಂದ ಮಳೆಗಾಲದಲ್ಲಿ ಪ್ರವಾಹ-ಭೂ ಕುಸಿತದಂತಹ ಸಮಸ್ಯೆಗಳು ಎದುರಾಗುತ್ತಿರುತ್ತವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.