ETV Bharat / international

ಒಂದು ವರ್ಷದವರೆಗೆ ದೇಶ ಮಿಲಿಟರಿ ಹಿಡಿತದಲ್ಲಿರುತ್ತದೆ: ಮ್ಯಾನ್ಮಾರ್ ಸೇನೆ - ಮ್ಯಾನ್ಮಾರ್ ಸೇನೆ

ಮಿಲಿಟರಿ ರಚಿಸಿರುವ ಸಂವಿಧಾನದ ಒಂದು ಭಾಗವನ್ನು ಉಲ್ಲೇಖಿಸಿದ ಟಿ.ವಿ ನಿರೂಪಕರೊಬ್ಬರು, ತುರ್ತು ಸಂದರ್ಭದಲ್ಲಿ ದೇಶವನ್ನು ಮಿಲಿಟರಿ ಆಳ್ವಿಕೆ ಮಾಡುತ್ತದೆ. ಸೇನೆಯ ಹಕ್ಕುಗಳ ಬಗ್ಗೆ ಕಾರ್ಯ ನಿರ್ವಹಿಸಲು ಮತ್ತು ಕೊರೊನಾ ವೈರಸ್​​​ ಬಿಕ್ಕಟ್ಟಿನ ವೇಳೆ ಚುನಾವಣೆಯನ್ನು ಮುಂದೂಡುವಲ್ಲಿ ಸರ್ಕಾರ ವಿಫಲವಾದ ಕಾರಣ ದೇಶದಲ್ಲಿ ಮಿಲಿಟರಿ ಆಡಳಿತ ಶುರುವಾಗಿದೆ. ಅಲ್ಲದೆ, ಶೀಘ್ರದಲ್ಲೇ ಹೊಸ ಸಂಸತ್ತಿನ ಅಧಿವೇಶನ ಪ್ರಾರಂಭವಾಗಲಿದೆ ಎಂದು ತಿಳಿದು ಬಂದಿದೆ.

country
ಮ್ಯಾನ್ಮಾರ್ ಸೇನೆ
author img

By

Published : Feb 1, 2021, 2:55 PM IST

ನಾಯ್ಪಿಟಾವ್ (ಮ್ಯಾನ್ಮಾರ್) : ದೇಶದ ಮೇಲೆ ಮಿಲಿಟರಿ ಒಂದು ವರ್ಷದವರೆಗೆ ಹಿಡಿತ ಸಾಧಿಸುತ್ತದೆ ಎಂದು ಮಿಲಿಟರಿ ಟೆಲಿವಿಷನ್ ಹೇಳಿದೆ.

ಮಿಲಿಟರಿ ಒಡೆತನದ ಮೈವಾಡಿ ಟಿವಿಯಲ್ಲಿ ನಿರೂಪಕರೊಬ್ಬರು ಈ ಘೋಷಣೆ ಮಾಡಿದ್ದಾರೆ. ಮಿಲಿಟರಿ ರಚಿಸಿರುವ ಸಂವಿಧಾನದ ಒಂದು ಭಾಗವನ್ನು ಉಲ್ಲೇಖಿಸಿದ ಅವರು, ತುರ್ತು ಸಂದರ್ಭದಲ್ಲಿ ದೇಶವನ್ನು ಮಿಲಿಟರಿ ಆಳ್ವಿಕೆ ಮಾಡುತ್ತದೆ. ಸೇನೆಯ ಹಕ್ಕುಗಳ ಬಗ್ಗೆ ಕಾರ್ಯ ನಿರ್ವಹಿಸಲು ಮತ್ತು ಕೊರೊನಾ ವೈರಸ್​​​ ಬಿಕ್ಕಟ್ಟಿನ ವೇಳೆ ಚುನಾವಣೆಯನ್ನು ಮುಂದೂಡುವಲ್ಲಿ ಸರ್ಕಾರ ವಿಫಲವಾದ ಕಾರಣ ದೇಶದಲ್ಲಿ ಮಿಲಿಟರಿ ಆಡಳಿತ ಶುರುವಾಗಿದೆ. ಅಲ್ಲದೆ, ಶೀಘ್ರದಲ್ಲೇ ಹೊಸ ಸಂಸತ್ತಿನ ಅಧಿವೇಶನ ಪ್ರಾರಂಭವಾಗಲಿದೆ ಎಂದರು.

ಆಡಳಿತಾರೂಢ ಪಕ್ಷದ ಕೌನ್ಸಿಲರ್ ಆಂಗ್ ಸಾನ್ ಸೂಕಿ ಸೇರಿದಂತೆ ಹಲವು ನಾಯಕರನ್ನು ಅಲ್ಲಿನ ಸೇನೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ಗೃಹಬಂಧನದಲ್ಲಿರಿಸಿದ ಬೆನ್ನಲ್ಲೇ, ಇಂಟರ್ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ.

ಮ್ಯಾನ್ಮಾರ್​ನ ಈ ರಾಜಕೀಯ ಬೆಳವಣಿಗೆಗೆ ಆಸ್ಟ್ರೇಲಿಯಾ, ಭಾರತ, ಅಮೆರಿಕ ಸೇರಿ ಇತರೆ ರಾಷ್ಟ್ರಗಳ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.