ಯಾಂಗೊನ್ (ಮ್ಯಾನ್ಮಾರ್): ಪ್ರತಿಭಟನೆ ಮಾಡುತ್ತಿರುವ ಪ್ರತಿಭಟನಾಕಾರರ ಮೇಲೆ ಒಂದು ತಿಂಗಳ ತನಕ ಯಾವುದೇ ರೀತಿಯ ದಾಳಿ ಮಾಡಬಾರದೆಂದು ಮ್ಯಾನ್ಮಾರ್‌ನ ಮಿಲಿಟರಿ ಜುಂಟಾ ಘೋಷಿಸಿದ್ದಾರೆ. ಸರ್ಕಾರದ ಭದ್ರತೆ ಮತ್ತು ಆಡಳಿತಾತ್ಮಕ ಕಾರ್ಯಾಚರಣೆಗಳಿಗೆ ತೊಡಕುಂಟಾದಾಗ ಮಾತ್ರ ದಾಳಿ ಮಾಡಬೇಕು ಎಂದು ಹೇಳಲಾಗಿದೆ.
ದೇಶದ ಗಡಿ ಉದ್ದಕ್ಕೂ ಆಯಾ ಪ್ರದೇಶಗಳಲ್ಲಿ ಪ್ರತಿಭಟನಾಕಾರರು ಗುಂಪಾಗಿ ಪ್ರತಿಭಟಿಸುತ್ತಿರುವ ಹಿನ್ನೆಲೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ ಈ ಪ್ರಕಟಣೆಯನ್ನು ಹೊರಡಿಸಲಾಗಿದೆ.
ಓದಿ:ಮ್ಯಾನ್ಮಾರ್ಗೆ ತೆರಳದಂತೆ ತನ್ನ ನಾಗರಿಕರಿಗೆ ಅಮೆರಿಕ ಸೂಚನೆ
ಸುಮಾರು ಡಜನ್‌ಗೂ ಹೆಚ್ಚು ಗುಂಪುಗಳು ಮ್ಯಾನ್ಮಾರ್ ಸೈನ್ಯದ ವಿರುದ್ಧ ಪ್ರತಿಭಟಿಸುತ್ತಿವೆ. ಆಂಗ್ ಸಾನ್ ಸೂಕಿ ಚುನಾಯಿತ ಸರ್ಕಾರವನ್ನು ಫೆ.1ರಂದು ಸೈನ್ಯವೂ ಉಚ್ಛಾಟಿಸಿತು. ಇದಾದ ಬಳಿಕ ಪ್ರತಿಭಟನೆಗಳು ಆರಂಭವಾದವು. ಸಾರ್ವಜನಿಕ ಮತ್ತು ಖಾಸಗಿ ವಲಯದ ನೌಕರರು ಕೆಲಸವನ್ನು ನಿಲ್ಲಿಸುವಂತೆ ಕರೆ ನೀಡಲಾಗಿದೆ.
ಪ್ರತಿಭಟನಾಕಾರರ ಮೇಲೆ ಯಾವುದೇ ರೀತಿಯ ದಾಳಿ ಮಾಡಬಾರದೆಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾದ ಹಿನ್ನೆಲೆ ಜುಂಟಾ ಈ ನಿರ್ಧಾರಕ್ಕೆ ಬಂದಿದ್ದಾರೆ. ಸೇನೆಯ ದಾಳಿಗೆ ಕನಿಷ್ಠ 536 ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ. 2700ಕ್ಕೂ ಹೆಚ್ಚು ಜನರನ್ನ ಬಂಧಿಸಲಾಗಿದೆ.