ETV Bharat / international

ಕೊರೊನಾ ಭೀತಿ ನಡುವೆಯೂ ರಂಝಾನ್ ತಿಂಗಳಲ್ಲಿ ಮಸೀದಿಗಳನ್ನು ತೆರೆಯಲು ಪಾಕ್​ ಸರ್ಕಾರ ನಿರ್ಧಾರ

ಶನಿವಾರ ಧಾರ್ಮಿಕ ವಿದ್ವಾಂಸರೊಂದಿಗೆ ಸಭೆ ನಡೆಸಿದ ಪಾಕಿಸ್ತಾನ ಅಧ್ಯಕ್ಷ ಆರೀಪ್ ಅಲ್ವಿ, ರಂಝಾನ್ ತಿಂಗಳಲ್ಲಿ ದೇಶದ ಮಸೀದಿಗಳನ್ನು ತೆರೆಯುವ ನಿರ್ಧಾರ ಪ್ರಕಟಿಸಿದ್ದಾರೆ. ಆದರೆ, ಜನರು ಕೊರೊನಾ ಮುಂಜಾಗ್ರತ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದಾರೆ.

author img

By

Published : Apr 19, 2020, 9:04 AM IST

Mosques in Pakistan to remain open during Ramzan amid raging coronavirus pandemic

ಇಸ್ಲಾಮಾಬಾದ್(ಪಾಕಿಸ್ತಾನ): ಕೊರೊನಾ ವೈರಸ್​ ಭೀತಿ ನಡುವೆಯೂ ಪವಿತ್ರ ರಂಝಾನ್​ ತಿಂಗಳಲ್ಲಿ ಮಸೀದಿಗಳನ್ನು ತೆರೆಯಲು ಪಾಕಿಸ್ತಾನ ಸರ್ಕಾರ ತೀರ್ಮಾನಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಧ್ಯಕ್ಷ ಆರೀಫ್ ಅಲ್ವಿ, ರಂಝಾನ್ ತಿಂಗಳಲ್ಲಿ ದೇಶದಲ್ಲಿ ಮಸೀದಿಗಳು ತೆರೆದಿರುತ್ತವೆ. ಆದರೆ, ಜನರು ಕೊರೊನಾ ನಿಯಂತ್ರಿಸಲು ವಿಧಿಸಲಾಗಿರುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಸೀದಿಗಳಲ್ಲಿ ಪ್ರಾರ್ಥನೆಗೆ ಸಂಬಂಧಿಸಿದಂತೆ ಸರ್ಕಾರ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಲಿದೆ ಎಂದಿದ್ದಾರೆ.

ಶನಿವಾರ ಧಾರ್ಮಿಕ ವಿದ್ವಾಂಸರ ಸಭೆ ನಡೆಸಿದ ಅವರು, ಸರ್ಕಾರ ಮತ್ತು ಧಾರ್ಮಿಕ ವಿದ್ವಾಂಸರು ತೆಗೆದುಕೊಳ್ಳುತ್ತಿರುವ ಒಮ್ಮತದ ನಿರ್ಧಾರಗಳನ್ನು ಇಡೀ ರಾಷ್ಟ್ರ ಗಮನಿಸುತ್ತಿದೆ ಎಂದಿದ್ದಾರೆ.

ಶನಿವಾರದವರೆಗೆ ಪಾಕಿಸ್ತಾನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7,500 ದಾಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.