ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಕಂಡು ಕೇಳರಿಯದಷ್ಟು ಕಾಡ್ಗಿಚ್ಚು ಆವರಿಸಿದ್ದು ಬಲವಾದ ಗಾಳಿ ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ. ಮುಂದಾಗಬಹುದಾದ ಮತ್ತಷ್ಟು ವಿನಾಶವನ್ನ ತಪ್ಪಿಸುವ ನಿಟ್ಟಿನಲ್ಲಿ ಈಗಾಗಲೆ ಜನರನ್ನ ಸ್ಥಳಾಂತರ ಮಾಡಲಾಗುತ್ತಿದೆ.
![largest evacuations in Australia,ಆಸ್ಟ್ರೇಲಿಯಾದಲ್ಲಿ ಅಗ್ನಿ ದುರಂತ](https://etvbharatimages.akamaized.net/etvbharat/prod-images/5577156_storm.jpg)
ಭಾರಿ ಪ್ರಮಾಣದ ಕಾಳ್ಗಿಚ್ಚಿಗೆ ಇಡೀ ಆಸ್ಟ್ರೇಲಿಯಾವೇ ಕಂಗಾಲಾಗಿದೆ. ಕೋಟಿಗಟ್ಟಲೆ ಎಕರೆಯಷ್ಟು ಪ್ರದೇಶ ಬೆಂಕಿಗೆಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದ್ದು, ಅದೆಷ್ಟೋ ವನ್ಯಜೀವಿಗಳು ಬೂದಿಯಾಗಿವೆ. ಇಷ್ಟೆಲ್ಲ ಅನಾಹುತವಾಗಿದ್ದರೂ. ನಾಳೆ ಇನ್ನೂ ಹೆಚ್ಚಿ ಅನಾವುತ ಕಾದಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ವೇಗವಾಗಿ ಬೀಸುವ ಗಾಳಿ ಅಗ್ನಿಯ ರೌದ್ರ ನರ್ತನವನ್ನ ಮತ್ತಷ್ಟು ಹೆಚ್ಚಸಲಿದ್ದು, ಜನರು ಈಗಲೆ ತಮ್ಮ ಪ್ರದೇಶಗಳನ್ನ ತೊರೆಯಬೇಕು ಎಂದು ಸರ್ಕಾರ ಹೇಳಿದೆ. ಈಗಾಗಲೆ ನೌಕಾಪಡೆ ಜನರನ್ನ ಸ್ಥಳಾಂತರಿಸುವ ಕಾರ್ಯ ನಡೆಸುತಿದ್ದು, ಅಗ್ನಿಶಾಮಕ ದಳ ಸಾಥ್ ನೀಡಿದೆ. ಆಸ್ಟ್ರೇಲಿಯಾ ಇತಿಹಾದಲ್ಲೆ ಮೊದಲ ಬಾರಿಗೆ ಇಷ್ಟೋಂದು ಪ್ರಮಾಣದ ಜನರನ್ನ ಸ್ಥಳಾಂತ ಮಾಡುಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
![largest evacuations in Australia,ಆಸ್ಟ್ರೇಲಿಯಾದಲ್ಲಿ ಅಗ್ನಿ ದುರಂತ](https://etvbharatimages.akamaized.net/etvbharat/prod-images/5577156_minister.jpg)
ಡೇನಿಯಲ್ ಆಂಡ್ರ್ಯೂ, ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ಪೂರ್ವ ಭಾಗದಾದ್ಯಂತ ವಿಪತ್ತು ಘೋಷಿಸಿದ್ದಾರೆ. ಆ ಭಾಗದಿಂದ ಸುಮಾರು ಒಂದು ವರೆ ಲಕ್ಷಕ್ಕೂ ಅಧಿಕ ಮಂದಿಯನ್ನ ಸ್ಥಳಾಂತರಿಸಲಾಗುತ್ತಿದೆ.
ಹವಾಮಾನ ವೈಪರಿತ್ಯಗಳು ಕಳವಳಕ್ಕೆ ಕಾರಣವಾಗಿದ್ದು, ಹಲವೆಡೆ ಬೆಂಕಿ ಇನ್ನೂ ಉರಿಯುತ್ತಿದೆ ಎಂದು ದಕ್ಷಿಣ ಆಸ್ಟ್ರೇಲಿಯಾ ಫೈರ್ ಸರ್ವಿಸ್ ಮುಖ್ಯ ಅಧಿಕಾರಿ ಮಾರ್ಕ್ ಜೋನ್ಸ್ ತಿಳಿಸಿದ್ದಾರೆ.
![largest evacuations in Australia,ಆಸ್ಟ್ರೇಲಿಯಾದಲ್ಲಿ ಅಗ್ನಿ ದುರಂತ](https://etvbharatimages.akamaized.net/etvbharat/prod-images/5577156_fghghm.jpg)
ಇಲ್ಲಿಯವರೆಗೆ 12.35 ಮಿಲಿಯನ್ ಎಕರೆ ಭೂಮಿ ಸುಟ್ಟುಹೋಗಿದೆ. ಕನಿಷ್ಠ 19 ಜನರು ಸಾವನ್ನಪ್ಪಿದ್ದು, 1,400 ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ ಎಂದು ಹೇಳಲಾಗಿದೆ.
ವಿಕ್ಟೋರಿಯಾ ರಾಜ್ಯದಲ್ಲಿ ಸ್ಥಳಿಯ ನಿವಾಸಿಗಳು ಮತ್ತು ಪ್ರವಾಸಿಗರಿಗೆ ಕಡಲ ತೀರಗಳಿಗೆ ಬಂದು ನಿಲ್ಲುವಂತೆ ತಿಳಿಸಲಾಗಿತ್ತು. ಅದರಂತೆ ಸಾವಿರಾರು ಜನರು ಕರಾವಳಿ ಪ್ರದೇಶವನ್ನ ಆಶ್ರಯಿಸಿದ್ದು, ಇದೀಗ ಸ್ಥಳಾಂತರ ಕಾರ್ಯ ಭರದಿಂದ ಸಾಗುತ್ತಿದೆ.
![largest evacuations in Australia,ಆಸ್ಟ್ರೇಲಿಯಾದಲ್ಲಿ ಅಗ್ನಿ ದುರಂತ](https://etvbharatimages.akamaized.net/etvbharat/prod-images/5577156_cbncfjg.jpg)
ಕೆಲವೆಡೆ ಬೆಂಕಿ ನಂದಿಸಲು ಮತ್ತು ಜನರ ಸ್ಥಳಾಂತರಕ್ಕೆ ಸೂಕ್ತ ಉಪಕರಣ ಮತ್ತು ಸೌಲಭ್ಯದ ಕೊರತೆ ಕಂಡುಬಂದಿದ್ದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ವಿರುದ್ಧ ಜನ ಘೋಷಣೆ ಕೂಗಿದ್ದಾರೆ. ಹೀಗಾಗಿ ಕೋಬರ್ಗೊ ಪ್ರದೇಶದ ಭೇಟಿಯನ್ನ ಮಾರಿಸನ್ ಮೊಟಕುಗೊಳಿಸಿದ್ದಾರೆ.
![largest evacuations in Australia,ಆಸ್ಟ್ರೇಲಿಯಾದಲ್ಲಿ ಅಗ್ನಿ ದುರಂತ](https://etvbharatimages.akamaized.net/etvbharat/prod-images/5577156_fhjkghi.jpg)
ರೇಡಿಯೋ ಸಂದರ್ಶನದಲ್ಲಿ ಮಾತನಾಡಿರುವ ಮಾರಿಸನ್, ಜನರ ಕೋಪ ನನಗೆ ಅರ್ಥವಾಗುತ್ತದೆ. ಅವರ ಕೋಪ ನನ್ನ ಮೇಲೆ ಇರಲಿ ಅಥವಾ ಪರಿಸ್ಥಿತಿಯ ಮೇಲೆ ಇರಲಿ ಅವರ ನೆರವಿಗೆ ಬರುವುದು ನನ್ನ ಕರ್ತವ್ಯ, ನಾನು ಜನರ ಸಹಾಯಕ್ಕಿದ್ದೇನೆ ಎಂದು ಹೇಳಿದ್ದಾರೆ.