ETV Bharat / international

ಉತ್ತರ ಕೊರಿಯಾದಲ್ಲಿ ಆಹಾರ ಸಮಸ್ಯೆ ಎದುರಿಸಲು ಕಿಮ್ ಸಜ್ಜು: ಬೃಹತ್ ಗ್ರೀನ್​ಹೌಸ್ ನಿರ್ಮಾಣ

ತೀವ್ರ ಆಹಾರದ ಕೊರತೆ ಎದುರಿಸುತ್ತಿರುವ ಉತ್ತರ ಕೊರಿಯಾ ಅಧ್ಯಕ್ಷ ಕಳೆದ ತಿಂಗಳಷ್ಟೇ ಅಕ್ರಮವಾಗಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಬೇಕೆಂದು ಕೃಷಿ ಕಾರ್ಮಿಕರ ಒಕ್ಕೂಟಕ್ಕೆ ಮನವಿ ಮಾಡಿ ಪತ್ರ ಬರೆದಿದ್ದರು. ಈಗ ಬೃಹತ್ ಗ್ರೀನ್ ಹೌಸ್ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ.

kim-jong-un-in-groundbreaking-ceremony-for-greenhouse-farm
ಆಹಾರ ಸಮಸ್ಯೆ ಎದುರಿಸಲು ಕಿಮ್ ಸಜ್ಜು: ಬೃಹತ್ ಗ್ರೀನ್​ಹೌಸ್ ನಿರ್ಮಾಣ
author img

By

Published : Feb 20, 2022, 1:06 PM IST

ಪೆಂಗ್ಯಾಂಗ್(ಉತ್ತರ ಕೊರಿಯಾ): ಆಹಾರದ ಅಭಾವ ಉತ್ತರ ಕೊರಿಯಾವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈ ಸಮಸ್ಯೆಯಿಂದ ಹೊರಬರಲು ಸರ್ವಾಧಿಕಾರಿ ಕಿಮ್ ಸರ್ಕಾರ ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ. ಅದೇ ಪ್ರಯತ್ನದ ಭಾಗವಾಗಿ ಬೃಹತ್ ಗ್ರೀನ್ ಹೌಸ್ ಫಾರ್ಮ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಉತ್ತರ ಕೊರಿಯಾದ ಸೌತ್ ಹ್ಯಾಮ್ಗ್ಯಾಂಗ್ ಪ್ರಾಂತ್ಯದ ಹಮ್ಜು ಕೌಂಟಿಯಲ್ಲಿ ರಿಯಾನ್ಫೋ ಗ್ರೀನ್‌ಹೌಸ್ ಫಾರ್ಮ್ ನಿರ್ಮಾಣ ಮಾಡುವ ಕಾಮಗಾರಿಯನ್ನು ಕಿಮ್ ಜಾಂಗ್ ಉನ್ ಉದ್ಘಾಟಿಸಿದ್ದಾರೆ. ಈ ಉದ್ಘಾಟನಾ ಸಮಾರಂಭದಲ್ಲಿ ಭಾರಿ ಜನಸಮೂಹ ನೆರೆದಿತ್ತು.

ಈ ಫಾರ್ಮ್ 250 ಎಕರೆ ವಿಸ್ತೀರ್ಣ ಹೊಂದಿದ್ದು, ಕಾಮಗಾರಿ ಪೂರ್ಣಗೊಳ್ಳಲು ಎಂಟು ತಿಂಗಳು ಬೇಕಾಗುತ್ತದೆ. ಕೃಷಿಯ ಅಧುನೀಕರಣಕ್ಕೆ ಗ್ರೀನ್ ಹೌಸ್ ಅಗತ್ಯವಿದೆ ಎಂದು ಕಿಮ್ ಹೇಳಿದ್ದು, ಈ ಸಮಾರಂಭದಲ್ಲಿ ಪಟಾಕಿಗಳನ್ನು ಸಿಡಿಸಿ ಮತ್ತು ಟ್ರ್ಯಾಕ್ಟರ್ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಕಳೆದ ತಿಂಗಳಷ್ಟೇ ಅಕ್ರಮವಾಗಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಬೇಕೆಂದು ಕೃಷಿ ಕಾರ್ಮಿಕರ ಒಕ್ಕೂಟಕ್ಕೆ ಕಿಮ್ ಮನವಿ ಮಾಡಿ ಪತ್ರವೊಂದನ್ನು ಬರೆದಿದ್ದರು. ಕೃಷಿ ಸಚಿವಾಲಯವನ್ನು ಕೃಷಿ ಆಯೋಗವಾಗಿ ಪರಿವರ್ತಿಸಲಾಗುತ್ತದೆ ಎಂದು ಉತ್ತರ ಕೊರಿಯಾ ಸರ್ಕಾರ ದೃಢಪಡಿಸಿದೆ.

ಇದನ್ನೂ ಓದಿ: ರಷ್ಯಾ ದಾಳಿ ಬೆದರಿಕೆ: ಉಕ್ರೇನ್ ತೊರೆಯುವಂತೆ ತನ್ನ ನಾಗರಿಕರಿಗೆ ಜರ್ಮನಿ, ಫ್ರಾನ್ಸ್‌ ಮನವಿ

ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಯ ಮೇಲೆ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಉತ್ತರ ಕೊರಿಯಾ ಎದುರಿಸುತ್ತಿದ್ದು, ಆರ್ಥಿಕತೆ ಪಾತಾಳಕ್ಕೆ ಇಳಿದಿದೆ. ಈ ಬೆನ್ನಲ್ಲೇ ಆಹಾರದ ಆಭಾವ ಎದುರಾಗಿದ್ದು, ಆಹಾರಕ್ಕಾಗಿ ಚೀನಾವನ್ನು ಅವಲಂಬಿಸಿದೆ. ಕೊರೊನಾ ವೇಳೆ ಮತ್ತಷ್ಟು ಸಂಕಷ್ಟಕ್ಕೆ ಉತ್ತರ ಕೊರಿಯಾ ಒಳಗಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.