ETV Bharat / international

ಗಡಿ ಸಮಸ್ಯೆಯನ್ನು ಸೂಕ್ತ ಸ್ಥಾನದಲ್ಲಿರಿಸಿ, ದೀರ್ಘಾವಧಿಯ ಸಂಬಂಧಗಳತ್ತ ಗಮನ ಹರಿಸಿ : ಭಾರತಕ್ಕೆ ಚೀನಾ ಸಲಹೆ - ಭಾರತಕ್ಕೆ ಚೀನಾ ದ್ವಿಪಕ್ಷೀಯ ಸಂಬಂಧ

ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಳ್ಳಲು ಚೀನಾ ಬದ್ಧವಾಗಿದೆ ಮತ್ತು ಪ್ರಾದೇಶಿಕ ಸಾರ್ವಭೌಮತ್ವ ಮತ್ತು ಸುರಕ್ಷತೆ ಕಾಪಾಡಲು ಚೀನಾ ದೃಢವಾಗಿ ನಿರ್ಧರಿಸಿದೆ ಎಂದು ಇದೇ ವೇಳೆ ಹೇಳಿದ್ರು. ಗಡಿಯಲ್ಲಿ ಶಾಂತಿ ಕಾಪಾಡಲು ಭಾರತ ಸಹ ಸಹಕರಿಸಲಿದೆ ಎಂದು ನಾವು ಭಾವಿಸುತ್ತೇವೆ..

Keep border issue at appropriate position
ವಾಂಗ್ ವೆನ್ಬಿನ್
author img

By

Published : Apr 21, 2021, 9:01 PM IST

ಬೀಜಿಂಗ್​ : ಗಡಿ ಸಮಸ್ಯೆಯನ್ನು 'ಸೂಕ್ತ ಸ್ಥಾನದಲ್ಲಿ' ಇರಿಸಲು ಮತ್ತು ಅದನ್ನು 'ಅರ್ಧದಾರಿಯಲ್ಲೇ' ಪರಿಹರಿಸಲು ಭಾರತವು ಒತ್ತಾಯಿಸಿದ್ದರಿಂದ ಚೀನಾ, ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸಲು ಎಲ್‌ಎಸಿ ಉದ್ದಕ್ಕೂ ಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಳ್ಳಲು ಬದ್ಧವಾಗಿದೆ ಎಂದರು.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ತಮ್ಮ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. ಗಡಿಯುದ್ದಕ್ಕೂ ಶಾಂತಿ ಕಾಪಾಡುವ ಬಗ್ಗೆ ಉಭಯ ನಾಯಕರು ಒಮ್ಮತದ ನಿರ್ಧಾರ ಮಾಡಿದ್ದಾರೆ ಎಂದು ತಿಳಿಸಿದರು.

ಭಾರತದಲ್ಲಿ ಚೀನಾ ರಾಯಭಾರಿ ವಿಕ್ರಮ್ ಮಿಸ್ರಿ ಅವರು ಭಾರತ-ಚೀನಾ ಸಂವಾದ ವೇದಿಕೆಯಲ್ಲಿ ಇತ್ತೀಚೆಗೆ ಮಾಡಿದ ಭಾಷಣದಲ್ಲಿ, ಎಲ್‌ಎಸಿಯ ಉದ್ದಕ್ಕೂ ಶಾಂತಿ ಕಾಪಾಡಲು ಉಭಯ ದೇಶಗಳ ನಾಯಕರ ನಡುವೆ ಒಮ್ಮತದ ಮಹತ್ವದ ಬಗ್ಗೆ ಹೇಳಿದ್ದರು.

ಎಲ್​ಎಸಿ ಬಳಿಯ ಕೆಲವು ಘಟನೆಗಳಿಂದ ಹಾಳಾದ ದ್ವಿಪಕ್ಷೀಯ ಸಂಬಂಧಗಳನ್ನು ಪುನರ್ನಿರ್ಮಿಸುವ ಬಗ್ಗೆ ಮಾತನಾಡಿದ್ದರು. ಈ ಬಗ್ಗೆ ಮಾತನಾಡಿದ ವಾಂಗ್, ಪಾಂಗೊಂಗ್ ತ್ಸೋ ಸರೋವರ ಪ್ರದೇಶದಿಂದ ಹಿಂದೆ ಸರಿದ ನಂತರ ಪೂರ್ವ ಲಡಾಖ್‌‌ನ ಉಳಿದ ಪ್ರದೇಶಗಳಿಂದ ಬೇರ್ಪಡಿಸುವಿಕೆ ಪರಿಹರಿಸುವ ಬಗ್ಗೆ ಎರಡೂ ಕಡೆಯವರು ಆಳ ಮತ್ತು ಪ್ರಾಮಾಣಿಕ ಮಾತುಕತೆ ನಡೆಸಿದ್ದಾರೆ ಎಂದು ವಾಂಗ್ ಹೇಳಿದರು.

"ಇತ್ತೀಚೆಗೆ, ಗಾಲ್ವಾನ್ ಕಣಿವೆ ಮತ್ತು ಪ್ಯಾಂಗೊಂಗ್ ತ್ಸೊ ಪ್ರದೇಶದಲ್ಲಿ ನಡೆದ ಘಟನೆಗಳ ನಂತರ ಎರಡೂ ಕಡೆಯವರು ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ಸಂವಹನಗಳನ್ನು ನಿರ್ವಹಿಸಿದ್ದಾರೆ ಎಂದು ವಾಂಗ್​ ತಿಳಿಸಿದ್ರು.

ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಳ್ಳಲು ಚೀನಾ ಬದ್ಧವಾಗಿದೆ ಮತ್ತು ಪ್ರಾದೇಶಿಕ ಸಾರ್ವಭೌಮತ್ವ ಮತ್ತು ಸುರಕ್ಷತೆ ಕಾಪಾಡಲು ಚೀನಾ ದೃಢವಾಗಿ ನಿರ್ಧರಿಸಿದೆ ಎಂದು ಇದೇ ವೇಳೆ ಹೇಳಿದ್ರು. ಗಡಿಯಲ್ಲಿ ಶಾಂತಿ ಕಾಪಾಡಲು ಭಾರತ ಸಹ ಸಹಕರಿಸಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದ್ರು.

ಘರ್ಷಣೆಯ ಪ್ರದೇಶಗಳಲ್ಲಿ ನಾವು ಸಂಪೂರ್ಣ ನಿಷ್ಕ್ರಿಯತೆ ಸಾಧಿಸಬೇಕು ಎಂಬ ನಿರ್ಧಾರಕ್ಕೆ ಎರಡೂ ಕಡೆಯ ಹಿರಿಯ ನಾಯಕರು ಬದ್ಧರಾಗಿದ್ದಾರೆ ಮತ್ತು ಒಪ್ಪಿಕೊಂಡಿದ್ದಾರೆ. ಇದು ಗಡಿಯಲ್ಲಿ ಶಾಂತಿ ಸ್ಥಾಪಿಸುವ ನಿಟ್ಟನಲ್ಲಿ ಪ್ರಮುಖ ಮೊದಲ ಹೆಜ್ಜೆಯಾಗಿದೆ ಮತ್ತು ಶಾಂತಿ ಪುನಾ ಸ್ಥಾಪಿಸಲು ಸಹಕಾರಿಯಾಗುತ್ತದೆ. ಇವು ದ್ವಿಪಕ್ಷೀಯ ಸಂಬಂಧದಲ್ಲಿ ಕ್ರಮೇಣ ಮತ್ತು ಹಂತ ಹಂತದ ಪ್ರಗತಿಗೆ ದಾರಿ ಮಾಡಿಕೊಡಲಿದೆ ಎಂದು ವಾಂಗ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.