ETV Bharat / international

ಟಿಬೆಟಿಯನ್​​ ಯುವಕರಿಗೆ ಚೀನಾ ಪ್ರೋತ್ಸಾಹ.. ಭಾರತದ ಮೇಲೆ ಡ್ರ್ಯಾಗನ್​ ರಾಷ್ಟ್ರದ ವಕ್ರದೃಷ್ಟಿ..

ಟಿಬೆಟಿಯನ್ ಯುವಕರನ್ನು ಪ್ರೋತ್ಸಾಹಿಸಲು ಚೀನಾ ಮಹತ್ವದ ಹೆಜ್ಜೆಯಿಟ್ಟಿದ್ದರೂ, ಇದು ಭಾರತಕ್ಕೆ ಮುಳುವಾಗಲಿದೆ ಎನ್ನಲಾಗಿದೆ. ಚೀನಾ ಭಾರತದ ಗಡಿಯು ಐದು ರಾಜ್ಯಗಳ ಪ್ರದೇಶಗಳನ್ನು ಆಕ್ರಿಮಿಸಿದೆ. ಅರುಣಾಚಲ ಪ್ರದೇಶ (1,126 ಕಿ.ಮೀ), ಉತ್ತರಾಖಂಡ (345 ಕಿ.ಮೀ), ಜಮ್ಮು ಮತ್ತು ಕಾಶ್ಮೀರ (1,597 ಕಿ.ಮೀ), ಹಿಮಾಚಲ ಪ್ರದೇಶ (260 ಕಿ.ಮೀ) ಮತ್ತು ಸಿಕ್ಕಿಂ (198 ಕಿ.ಮೀ) ವ್ಯಾಪಿಸಿದೆ..

author img

By

Published : Aug 13, 2021, 5:24 PM IST

ಚೀನಾ
ಚೀನಾ

ನವದೆಹಲಿ : ಟಿಬೆಟಿಯನ್ ಸ್ವಾಯತ್ತ ಪ್ರದೇಶದಲ್ಲಿ (TAR) 18-21 ವರ್ಷ ವಯಸ್ಸಿನ ಟಿಬೆಟಿಯನ್ ಯುವಕರಿಗೆ ಚೀನಾ ಸರ್ಕಾರ ಮೊಬೈಲ್ ಫೋನ್‌ಗಳಲ್ಲಿ ಪಠ್ಯಗಳನ್ನು ರವಾನೆ ಮಾಡುತ್ತಿದೆ. ಈ ಹಿನ್ನೆಲೆ ಎರಡು ವರ್ಷಗಳ ಶಾಲಾ-ಕಾಲೇಜು ಶುಲ್ಕ ಮರುಪಾವತಿಗೆ ಬದಲಾಗಿ ಎರಡು ವರ್ಷಗಳ ಮಿಲಿಟರಿ ತರಬೇತಿ ಪಡೆಯಲು ಅನುವು ಮಾಡಿಕೊಟ್ಟಿದೆ ಎಂದು ಟಿಬೆಟಿಯನ್ ಮಾಧ್ಯಮ ವರದಿ ಮಾಡಿದೆ.

ಮಿಲಿಟರಿ ತರಬೇತಿ ಪಡೆದ ಯುವಕರಿಗೆ ಪೀಪಲ್ಸ್​ ಲಿಬರೇಶನ್​ ಆರ್ಮಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಭಾರತ-ಚೀನಾ ಗಡಿಯಲ್ಲಿ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಸರ್ಕಾರಿ-ಅನುದಾನಿತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ದಾಖಲಾತಿ ಕಡ್ಡಾಯವಾಗಿದೆ. ಜತೆಗೆ ಎರಡು ವರ್ಷದ ಮಿಲಿಟರಿ ತರಬೇತಿ ಅವಧಿ ಮುಗಿದ ನಂತರ ಯುವಕರಿಗೆ ತಮ್ಮ ಅಧ್ಯಯನವನ್ನು ಮುಂದುವರಿಸಲು ಅವಕಾಶ ನೀಡಲಾಗುತ್ತದೆ.

ಮಿಲಿಟರಿ ತರಬೇತಿಯು ಪ್ರೌಢಶಾಲೆ ಮತ್ತು ಕಾಲೇಜು ಪಠ್ಯಕ್ರಮದ ಭಾಗವಾಗಿದ್ದರೂ, ಸರ್ಕಾರವು ದುಡ್ಡನ್ನು ಮರುಪಾವತಿಯ ರೂಪದಲ್ಲಿ ನೀಡುತ್ತಿರುವುದು ಇದೇ ಮೊದಲು. ಎರಡು ವರ್ಷಗಳ ಮಿಲಿಟರಿ ತರಬೇತಿ ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಆಗಸ್ಟ್ 15 ಕೊನೆಯ ದಿನವಾಗಿದೆ.

ಟಿಬೆಟಿಯನ್ ಯುವಕರನ್ನು ಪ್ರೋತ್ಸಾಹಿಸಲು ಚೀನಾ ಮಹತ್ವದ ಹೆಜ್ಜೆಯಿಟ್ಟಿದ್ದರೂ, ಇದು ಭಾರತಕ್ಕೆ ಮುಳುವಾಗಲಿದೆ ಎನ್ನಲಾಗಿದೆ. ಚೀನಾ ಭಾರತದ ಗಡಿಯು ಐದು ರಾಜ್ಯಗಳ ಪ್ರದೇಶಗಳನ್ನು ಆಕ್ರಿಮಿಸಿದೆ. ಅರುಣಾಚಲ ಪ್ರದೇಶ (1,126 ಕಿ.ಮೀ), ಉತ್ತರಾಖಂಡ (345 ಕಿ.ಮೀ), ಜಮ್ಮು ಮತ್ತು ಕಾಶ್ಮೀರ (1,597 ಕಿ.ಮೀ), ಹಿಮಾಚಲ ಪ್ರದೇಶ (260 ಕಿ.ಮೀ) ಮತ್ತು ಸಿಕ್ಕಿಂ (198 ಕಿ.ಮೀ) ವ್ಯಾಪಿಸಿದೆ.

ಇದನ್ನೂ ಓದಿ: ಮತ್ತೆ ತಾಲಿಬಾನ್​ ಹಿಡಿತಕ್ಕೆ ಹೋಗುತ್ತಾ ಅಫ್ಘಾನಿಸ್ತಾನ: 2ನೇ ಅತಿದೊಡ್ಡ ನಗರ ಕಂದಹಾರ್ ಉಗ್ರರ ವಶಕ್ಕೆ!

ಜೂನ್ 15, 2020ರಂದು ಗಾಲ್ವಾನ್​ ಕಣಿವೆಯಲ್ಲಿ ನಡೆದ ಭೀಕರ ಘರ್ಷಣೆಯಲ್ಲಿ 25 ಭಾರತೀಯ ಯೋಧರು ಮೃತಪಟ್ಟಿದ್ದರು. ಬಳಿಕ, ಸ್ಥಳದಲ್ಲಿ ಉಭಯ ಸೇನೆಗಳು ಬೀಡು ಬಿಟ್ಟಿದ್ದವು. ಹಲವು ಸುತ್ತಿನ ಮಾತುಕತೆ ಬಳಿಕ ಇತ್ತೀಚಿನ ದಿನಗಳಲ್ಲಿ ಸೇನೆಯು ಹಿಂದೆ ಸರಿಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.