ಟೋಕಿಯೊ: ಕೊರೊನಾ ವೈರಸ್ ವಿರುದ್ಧ ವ್ಯಾಕ್ಸಿನೇಷನ್ ಕಂಡುಹಿಡಿಯುವ ಅನೇಕ ಸಂಶೋಧನೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಕೆಲವು ಪ್ರಯೋಗಗಳು ಅಂತಿಮ ಹಂತದಲ್ಲಿವೆ. ಈ ಮಧ್ಯೆ ಜಪಾನ್ ಸರ್ಕಾರ ತನ್ನ ದೇಶವಾಸಿಗಳಿಗೆ ಉಚಿತವಾಗಿ ವ್ಯಾಕ್ಸಿನ್ ವಿತರಿಸುವ ಮಸೂದೆ ಜಾರಿಗೆ ತರುತ್ತಿದೆ. ಈ ಮಸೂದೆಯನ್ನು ಜಪಾನಿನ ಸಂಸತ್ತು ಅಂಗೀಕರಿಸಿದೆ.
ಜಪಾನಿನ ಸಂಸತ್ತಿನ ಮೇಲ್ಮನೆಯು ಸರ್ವಾನುಮತದಿಂದ ಈ ಮಸೂದೆಗೆ ಒಪ್ಪಿಗೆ ಸೂಚಿಸಿದೆ. ಕೋವಿಡ್ ವ್ಯಾಕ್ಸಿನ್ಗೆ ಸಂಬಂಧಿಸಿದ ಎಲ್ಲಾ ಖರ್ಚುಗಳನ್ನು ಸರ್ಕಾರವೇ ಭರಿಸಲಿದೆ. ಜಪಾನ್ ಸರ್ಕಾರವು ಈಗ ಕೊರೊನಾ ಲಸಿಕೆ ಸಂಗ್ರಹದತ್ತ ಗಮನ ಹರಿಸಲು ಸಜ್ಜಾಗಿದೆ.
ಓದಿ: 'ಪ್ರತಿಕೂಲ ಘಟನೆ' ಕೋವಿಡ್-19 ಲಸಿಕೆ ಪ್ರಯೋಗದ ಟೈಮ್ಲೈನ್ ಮೇಲೆ ಪರಿಣಾಮ ಬೀರಲ್ಲ: ಆರೋಗ್ಯ ಸಚಿವಾಲಯ
ಮುಂದಿನ ವರ್ಷದ ಮೊದಲಾರ್ಧದಲ್ಲಿ ಜಪಾನ್ ಕೋವಿಡ್-19 ವಿರುದ್ಧ ಲಸಿಕೆ ಹಂಚಿಕೆ ಪ್ರಕ್ರಿಯೆ ಪ್ರಾರಂಭಿಸುವ ನಿರೀಕ್ಷೆಯಿದೆ. ವೃದ್ಧರು, ವೈದ್ಯಕೀಯ ಕಾರ್ಯಕರ್ತರು ಮತ್ತು ಅನಾರೋಗ್ಯ ಪೀಡಿತರಿಗೆ ಆದ್ಯತೆಯ ಆಧಾರದ ಮೇಲೆ ಲಸಿಕೆ ನೀಡಲು ಸರ್ಕಾರ ಯೋಜಿಸಿದೆ.