ಟೋಕಿಯೊ(ಜಪಾನ್): ತಮ್ಮ ಆರೋಗ್ಯ ಸರಿ ಇಲ್ಲದ ಕಾರಣ ಜಪಾನ್‌ನ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಿ ಶಿಂಜೊ ಅಬೆ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಒಂದು ಕಾಲದಲ್ಲಿ ಅಲ್ಪಾವಧಿಯ ಪ್ರಧಾನಮಂತ್ರಿಗಳಿಗೆ ಹೆಸರುವಾಸಿಯಾದ ದೇಶದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಹೆಗ್ಗಳಿಕೆ ಶಿಂಜೊ ಅಬೆ ಅವರಿಗೆ ಸಲ್ಲುತ್ತದೆ.
ಅಬೆ, ಅವರ ಅಜ್ಜ ಮಾಜಿ ಪ್ರಧಾನಿ ನೊಬುಸುಕೆ ಕಿಶಿ ಅವರ ಹೆಜ್ಜೆಗಳನ್ನು ಅನುಸರಿಸಿದವರು. ಅವರ ರಾಜಕೀಯ ಕಾರ್ಯಗಳು ಜಪಾನನ್ನು ಅದ್ಭುತ ಮತ್ತು ಸುಂದರವಾದ ರಾಷ್ಟ್ರವನ್ನಾಗಿ ಮಾಡುವುದರ ಮೇಲೆ ಕೇಂದ್ರೀಕರಿಸಿತ್ತು.
ಅಬೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ ಎಂಬುದನ್ನು ಸಂಸತ್ತಿನ ಮೇಲ್ಮನೆಯ ಪಕ್ಷದ ಪ್ರಧಾನ ಕಾರ್ಯದರ್ಶಿ ಹಿರೋಷಿಜ್ ಸೆಕೊ ದೃಢಪಡಿಸಿದ್ದಾರೆ.
ನನ್ನ ಆರೋಗ್ಯ ಸಮಸ್ಯೆಯಿಂದ ದೇಶದ ಚಟುವಟಿಕೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ರಾಜೀನಾಮೆ ನೀಡುತ್ತಿರುವುದಾಗಿ ಅಬೆ ಹೇಳಿದ್ದಾರೆ.