ಇಸ್ಲಾಮಾಬಾದ್: ಕಾಶ್ಮೀರ ವಿಚಾರದಲ್ಲಿ ಅನಗತ್ಯವಾಗಿ ಮೂಗು ತೂರಿಸುತ್ತಿರುವ ಪಾಕಿಸ್ತಾನ ಇದೀಗ ತಮ್ಮ ದೇಶದಲ್ಲಿ ಬಂಧಿತನಾಗಿದ್ದ ಜಾಗತಿಕ ಉಗ್ರ, ಜೈಶ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ನನ್ನು ಬಿಡುಗಡೆ ಮಾಡಿದೆ.
ಸದ್ಯ ಮಸೂದ್ ಅಜರ್ನನ್ನು ರಹಸ್ಯವಾಗಿ ಬಿಡುಗಡೆ ಮಾಡಿರುವ ಪಾಕಿಸ್ತಾನ ಕಾಶ್ಮೀರ ವಿಚಾರದಲ್ಲಿ ಭಾರತದ ಮೇಲೆ ಉಗ್ರಕೃತ್ಯ ನಡೆಸಲು ಹುನ್ನಾರ ನಡೆಸಿದೆ ಎಂಬ ಶಂಕೆ ವ್ಯಕ್ತವಾಗ್ತಿದೆ.
2019ರ ಮೇ ತಿಂಗಳಲ್ಲಿ ಭಾರತ ಸೇರಿದಂತೆ ಜಗತ್ತಿನ ಅಗ್ರ ರಾಷ್ಟ್ರಗಳ ತೀವ್ರ ಒತ್ತಡದ ಪರಿಣಾಮ ಮಸೂದ್ ಅಜರ್ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿತ್ತು.