ಇಸ್ಲಾಮಾಬಾದ್: ಸಾರ್ವಜನಿಕ ಸ್ಥಳದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಮೆರವಣಿಗೆಗಳು ಮತ್ತು ಪ್ರದರ್ಶನಗಳನ್ನು ಎರಡು ತಿಂಗಳ ಅವಧಿಗೆ ನಿಷೇಧಿಸಲಾಗಿದೆ ಎಂದು ಇಸ್ಲಾಮಾಬಾದ್ ಜಿಲ್ಲಾಧಿಕಾರಿ ಮೊಹಮ್ಮದ್ ಹಮ್ಜಾ ಶಫ್ಕಾತ್ ಆದೇಶ ಹೊರಡಿಸಿದ್ದಾರೆ.
ಪಾಕಿಸ್ತಾನದಲ್ಲಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ನಡೆಯುತ್ತಿರುವ ಸರಣಿ ವಿರೋಧಿ ರ‌್ಯಾಲಿಗಳ ನಡುವೆ, ಇಸ್ಲಾಮಾಬಾದ್ ಆಡಳಿತವು ನಿಷೇಧವನ್ನು ವಿಸ್ತರಿಸಿದೆ.
ಜೊತೆಗೆ ಪಟಾಕಿಗಳ ಮಾರಾಟ, ಖರೀದಿ ಮತ್ತು ಬಳಕೆ, ಹ್ಯಾಂಡ್‌ಬಿಲ್‌ಗಳ ವಿತರಣೆ, ಕರಪತ್ರಗಳು, ವಾಲ್ ಕ್ಯಾಲ್ಕಿಂಗ್, ಘೋಷಣೆಗಳನ್ನು ಬರೆಯುವುದು ಮತ್ತು ಗೋಡೆಗಳ ಮೇಲೆ ಪೋಸ್ಟರ್‌ಗಳನ್ನು ಜೋಡಿಸುವುದು ಸಹ ಎರಡು ತಿಂಗಳ ಅವಧಿಗೆ ನಿಷೇಧಿಸಲಾಗಿದೆ. ಹಾಗೂ ಬಂದೂಕುಗಳನ್ನು ಸಾಗಿಸುವುದು ಮತ್ತು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ.
ಇನ್ನು ಪ್ರತಿಪಕ್ಷಗಳ ರ‌್ಯಾಲಿಗಳನ್ನು ತಡೆಯಲು ಪ್ರಧಾನಿ ಇಮ್ರಾನ್ ಖಾನ್ ಪ್ರಯತ್ನ ನಡೆಸುತ್ತಿದ್ದು, ಇದರ ನಡುವೆ 11 ಪಕ್ಷಗಳ ಮೈತ್ರಿಯ ಪಾಕಿಸ್ತಾನ ಡೆಮಾಕ್ರಟಿಕ್ ಮೂವ್ಮೆಂಟ್ ತನ್ನ ಆರನೇ ಶಕ್ತಿ ಪ್ರದರ್ಶನವನ್ನು ಲಾಹೋರ್‌ನಲ್ಲಿ ಭಾನುವಾರ ನಡೆಸಲು ಸಜ್ಜಾಗಿದೆ.