ತೆಹ್ರಾನ್ : ಕೊರೊನಾ ವೈರಸ್ಗೆ ಇರಾನ್ನಲ್ಲಿ ಒಂದೇ ದಿನ 54 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 291ಕ್ಕೆ ಏರಿಕೆಯಾಗಿದೆ.
ಇಸ್ಲಾಮಿಕ್ ರಿಪಬ್ಲಿಕ್ನಲ್ಲಿ ಒಟ್ಟು 8,042 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಒಂದೇ ದಿನದಲ್ಲಿ ಸಾವಿನ ಪ್ರಮಾಣ ಶೇ.18 ರಷ್ಟು ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯದ ವಕ್ತಾರ ಕಿಯಾನೌಶ್ ಜಹಾನ್ಪೌರ್ ಮಾಹಿತಿ ನೀಡಿದ್ದಾರೆ.
ಪ್ರಾರಂಭಿಕ ಹಂತದಲ್ಲಿರುವ ಕೊರೊನಾ ಸೋಂಕಿತರು ಎರಡು ವಾರಗಳಲ್ಲಿ ಗುಣಮುಖರಾಗುತ್ತಾರೆ. ತೀವ್ರವಾಗಿ ಬಳಲುತ್ತಿರುವವರು ಚೇತರಿಸಿಕೊಳ್ಳಲು ಮೂರರಿಂದ ಆರು ವಾರಗಳು ಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಜಗತ್ತಿನ 100 ದೇಶಗಳಿಗೆ ಈಗಾಗಲೇ ಈ ಸೋಂಕು ಹರಡಿದ್ದು ಸುಮಾರು 110,000 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, 3,800ಕ್ಕೂ ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.