ETV Bharat / international

ಆಫ್ಘನ್​ನಲ್ಲಿ​ ಸರ್ಕಾರ ರಚನೆಗೆ ಚುನಾವಣೆ ಅತ್ಯಗತ್ಯ: ಇರಾನ್ ಅಧ್ಯಕ್ಷ

ಅಫ್ಘಾನಿಸ್ತಾನದಲ್ಲಿ ಚುನಾವಣೆ ನಡೆದು ಸರ್ಕಾರ ರಚಿಸಿದರೆ ಅಲ್ಲಿ ಶಾಂತಿ, ಸುವ್ಯವಸ್ಥೆ ನಿರ್ಮಾಣವಾಗುತ್ತದೆ ಎಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಕರೆ ನೀಡಿದ್ದಾರೆ.

author img

By

Published : Sep 5, 2021, 8:58 AM IST

ಇಬ್ರಾಹಿಂ ರೈಸಿ
ಇಬ್ರಾಹಿಂ ರೈಸಿ

ಟೆಹ್ರಾನ್(ಇರಾನ್​): ಆಫ್ಘನ್​ನಲ್ಲಿ ಸರ್ಕಾರ ರಚಿಸಲು ತಾಲಿಬಾನ್​ ಪರದಾಡುತ್ತಿರುವ ಈ ಸಮಯದಲ್ಲಿ ಇರಾನ್​ ಅಧ್ಯಕ್ಷ ಇಬ್ರಾಹಿಂ ರೈಸಿ, ದೇಶದ ಭವಿಷ್ಯ ನಿರ್ಧರಿಸಲು ಆಫ್ಘನ್​ನಲ್ಲಿ ಚುನಾವಣೆ​ ನಡೆಸುವಂತೆ ಕರೆ ನೀಡಿದ್ದಾರೆ.

ಅಮೆರಿಕ ಸೇನೆ ವಾಪಸ್ ಆಗಿದ್ದು, ತಾಲಿಬಾನ್ ಅಧಿಪತ್ಯ ಸ್ಥಾಪಿಸಿದೆ. ಈ ಸಮಯದಲ್ಲಿ ಅಲ್ಲಿ ಚುನಾವಣೆ ನಡೆದರೆ ಶಾಂತಿ ನಿರ್ಮಾಣವಾಗುತ್ತದೆ ಎಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅಭಿಪ್ರಾಯಪಟ್ಟಿದ್ದಾರೆ.

ಆಫ್ಘನ್​ ಜನರು ತಮ್ಮ ದೇಶದಲ್ಲಿ ಸರ್ಕಾರವನ್ನು ರಚಿಸಲು ಆದಷ್ಟು ಬೇಗ ಮತ ಚಲಾಯಿಸಬೇಕು ಎಂದು ಅವರು ಹೇಳಿದ್ದಾರೆ. ಜನರಿಂದ ಚುನಾಯಿತವಾದ ಸರ್ಕಾರ ಅಲ್ಲಿ ಸ್ಥಾಪನೆಯಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಆಫ್ಘನ್​ನಲ್ಲಿ ಸರ್ಕಾರ ರಚಿಸಲು ತಾಲಿಬಾನ್​ ಹೆಣಗಾಟ.. ಮುಂದಿನ ವಾರಕ್ಕೆ ಮುಂದೂಡಿಕೆ

ಇಸ್ಲಾಮಿಕ್ ರಿಪಬ್ಲಿಕ್ ಯಾವಾಗಲೂ ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ನೆಲೆಸುವುದನ್ನು ಬಯಸುತ್ತಿದೆ. ಅಫ್ಘಾನಿಸ್ತಾನದಲ್ಲಿ ಜನರಿಂದ ಚುನಾಯಿತವಾದ ಸಾರ್ವಭೌಮತ್ವ ಸರ್ಕಾರವನ್ನು ನಾವು ಬೆಂಬಲಿಸುತ್ತೇವೆ ಎಂದು ಇಬ್ರಾಹಿಂ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.