ಟೆಹ್ರಾನ್ (ಇರಾನ್): ಪಾಕಿಸ್ತಾನದ ವಿರುದ್ಧ ಇರಾನ್ ನಡೆಸಿದ ಕಾರ್ಯಾಚರಣೆಯಲ್ಲಿ ತನ್ನ ಇಬ್ಬರು ಸೈನಿಕರನ್ನು ಬಂಧ ಮುಕ್ತಗೊಳಿಸಿಕೊಂಡಿದೆ ಎಂದು ವರದಿಯಾಗಿದೆ. 2018ರಲ್ಲಿ ಅಪಹರಣಕ್ಕೊಳಗಾಗಿ ಒತ್ತೆಯಾಳುಗಳಾಗಿದ್ದ 12 ಸೈನಿಕರ ಪೈಕಿ ಇಬ್ಬರನ್ನು ಮರಳಿ ಕರೆಸಿಕೊಳ್ಳುವಲ್ಲಿ ಇರಾನ್ ಯಶಸ್ವಿಯಾಗಿದೆ ಎಂದು ಅನಾಡೋಲು ಸಂಸ್ಥೆ ವರದಿ ಮಾಡಿದೆ.
ಗುರುವಾರ ರಾತ್ರಿ ಪಾಕ್ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಇಬ್ಬರು ಸೈನಿಕರ ರಕ್ಷಿಸಲಾಗಿದೆ ಎನ್ನಲಾಗಿದೆ. 2 ವರ್ಷದ ಹಿಂದೆ ಜೈಶ್ ಉಲ್-ಅದ್ ಸಂಘಟನೆ 12 ಇರಾನಿಯನ್ ಸೈನಿಕರನ್ನು ಅಪಹರಿಸಿ ಒತ್ತೆಯಾಳುಗಳಾಗಿ ಇಟ್ಟುಕೊಂಡಿತ್ತು ಅವರಲ್ಲಿ ಇಬ್ಬರನ್ನು ವಾಪಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಐಆರ್ಜಿಸಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ವರದಿಯಾಗಿದೆ.
ಅಕ್ಟೋಬರ್ 16, 2018 ರಂದು, ಎರಡು ದೇಶದ ನಡುವಿನ ಪಾಕಿಸ್ತಾನದ ಭೂಪ್ರದೇಶ ಸಿಸ್ತಾನದ ಮೆರ್ಕವಾ ಗಡಿಯಲ್ಲಿ 12 ಐಆರ್ಜಿಸಿ ಸೈನಿಕರನ್ನು ಜೈಶ್ ಉಲ್-ಆದ್ ಸಂಘಟನೆ ಉಗ್ರರು ಅಪಹರಿಸಿದ್ದರು.
ಇದರ ಬೆನ್ನಲ್ಲೇ ಸೈನಿಕರನ್ನು ಬಂಧನ ಮುಕ್ತಗೊಳಿಸಲು ಮಿಲಿಟರಿ ಅಧಿಕಾರಿಗಳು ಉಭಯ ದೇಶಗಳ ನಡುವೆ ಜಂಟಿ ಸಮಿತಿಯನ್ನು ರಚಿಸಿದ್ದರು. ಈ ಹಿನ್ನೆಲೆ 12 ಸೈನಿಕರಲ್ಲಿ ನಾಲ್ವರನ್ನು 2018ರ ನವೆಂಬರ್ನಲ್ಲಿ ಬಿಡುಗಡೆ ಮಾಡಲಾಗಿತ್ತು. ಅಲ್ಲದೆ ಮಾರ್ಚ್ 21, 2019ರಲ್ಲಿ ಪಾಕಿಸ್ತಾನ ಸೇನೆಯೂ ನಾಲ್ವರು ಸೈನಿಕರನ್ನು ರಕ್ಷಿಸಿತ್ತು.
ಇದನ್ನೂ ಓದಿ: ಉಗ್ರರು- ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ; 26 ಸಾವು