ETV Bharat / international

ಇಮ್ರಾನ್​​​ ಖಾನ್ ಪ್ರಧಾನಿಯಾದ ಬಳಿಕ ನೆರೆಯ ರಾಷ್ಟ್ರದಲ್ಲಿ ಅಸಹಿಷ್ಣುತೆ ಹೆಚ್ಚಳ: ವರದಿ - ಪಾಕಿಸ್ತಾನಿ ಪತ್ರಕರ್ತ ಸಾಜಿದ್ ಹುಸೇನ್ ಹತ್ಯೆ

ಇಮ್ರಾನ್ ಖಾನ್ ಪ್ರಧಾನಿಯಾದ ನಂತರ ಜುಲೈ 2018 ರಿಂದ ಪಾಕಿಸ್ತಾನದಲ್ಲಿ ಸ್ವತಂತ್ರ ಪತ್ರಿಕೋದ್ಯಮದ ಬಗ್ಗೆ ಅಸಹಿಷ್ಣುತೆಯ ಪ್ರಕರಣ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಇಯು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.

imran-khan
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್​
author img

By

Published : Oct 21, 2020, 7:26 PM IST

ಬ್ರಸೆಲ್ಸ್ (ಬೆಲ್ಜಿಯಂ​​)​​: ಪಾಕಿಸ್ತಾನದಲ್ಲಿ ಪತ್ರಕರ್ತರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂಬ ಆರೋಪದ ನಡುವೆಯೇ ಹೆಸರಾಂತ ಸುದ್ದಿ ಸಂಸ್ಥೆಯೊಂದು ಪಾಕಿಸ್ತಾನದ ನಿಜಬಣ್ಣ ಬಯಲು ಮಾಡಿದೆ.

ಇಮ್ರಾನ್ ಖಾನ್ ಪ್ರಧಾನಿಯಾಗಿ ಅಧಿಕಾರಿಕ್ಕೆ ಬಂದ ಬಳಿಕ ರಾಷ್ಟ್ರದಲ್ಲಿ ಮಿಲಿಟರಿ ಹಾಗೂ ಆಂತರಿಕ ಗುಪ್ತಚರ ಇಲಾಖೆಯ ಮೊದಲ ಟಾರ್ಗೆಟ್ ಮಾಧ್ಯಮವಾಗಿದ್ದು, ಅವರ ವಾಕ್ ಸ್ವಾತಂತ್ರ್ಯವನ್ನೇ ಹತ್ತಿಕ್ಕಲು ಮುಂದಾಗಲಾಗಿದೆ ಎಂದು ಇಯು ಕ್ರಾನಿಕಲ್ ಸಂಸ್ಥೆ ವರದಿ ಮಾಡಿದೆ.

ಪಾಕಿಸ್ತಾನಿ ಪತ್ರಕರ್ತ ಸಾಜಿದ್ ಹುಸೇನ್ ಹತ್ಯೆ ಪಾಕಿಸ್ತಾನದಲ್ಲಿನ ಹೆಚ್ಚುವರಿ ನ್ಯಾಯಾಲಯದ ಎಲ್ಲಾ ಮುಖ ಬಯಲಾಗಿಸಿತ್ತು. ಅಲ್ಲದೇ ಪಾಕಿಸ್ತಾನದ ಹೊರಗೆ ಹಾಗೂ ಒಳಗೆ ಪರ್ತಕರ್ತರ ಪರಿಸ್ಥಿತಿಗೆ ಈ ಪ್ರಕರಣ ಒಂದು ಉದಾಹರಣೆಯಾಗಿದೆ ಎಂದು ಖಾಸಗಿ ಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಿದೆ.

ಇದಲ್ಲದೇ ಬಲೂಚಿಸ್ತಾನ್ ಟೈಮ್ಸ್​ನ ಪ್ರಧಾನ ಸಂಪಾದಕ ಸಾಜಿದ್ (39) ಇತ್ತೀಚಿಗಷ್ಟೇ ನದಿ ದಡದಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರು ಕಳೆದ ಮಾರ್ಚ್​ 2ರಿಂದ ನಾಪತ್ತೆಯಾಗಿದ್ದರು. ಅವರು 2012ರಲ್ಲಿ ಪಾಕಿಸ್ತಾನವನ್ನು ತೊರೆದು 2017ರ ವರೆಗೂ ಸ್ವೀಡನ್​​​ನಲ್ಲಿ ನೆಲೆಸಿದ್ದರು.

2018ರ ಬಳಿಕ ಇಮ್ರಾನ್ ಖಾನ್ ಪ್ರಧಾನಿಯಾದಾಗಿನಿಂದ ಪತ್ರಿಕೋದ್ಯಮದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ. ಇಂತಹುದೇ ಪರಿಸ್ಥಿತಿ ಬೇರೆ ದೇಶಗಳಲ್ಲೂ ಖಂಡಿತವಾಗಿಯೂ ಇದೆ. ಆದರೆ ಪಾಕಿಸ್ತಾನದಲ್ಲಿ ಇದು ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಹಕ್ಕುಗಳ ಕುರಿತು ಪಾಕಿಸ್ತಾನ ಸಹಿ ಹಾಕಿದ್ದರೂ ಇಂತಹ ಪ್ರಕರಣಗಳ ತಡೆಯುವಲ್ಲಿ ವಿಫಲವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇನ್ನು ನಾಪತ್ತೆಯಾಗಿದ್ದ ಹುಸೇನ್​​ ಪ್ರಕರಣದ ಹಿಂದೆ ಪಾಕಿಸ್ತಾನದ ಗುಪ್ತಚರ ಇಲಾಖೆ ಕೈವಾಡವಿರುವ ಮಾಹಿತಿ ಇದೆ ಎಂದು ಸಂಸ್ಥೆ ವರದಿ ಮಾಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.