ಜಕಾರ್ತಾ: ಜಕಾರ್ತಾದಿಂದ ಪಶ್ಚಿಮ ಕಾಲಿಮಂತನ್ ಪ್ರಾಂತ್ಯದ ಪೊಂಟಿಯಾನಕ್ ಕಡೆಗೆ ಹೊರಟಿದ್ದ ಶ್ರೀವಿಜಯ ಏರ್ ವಿಮಾನ ಸಮುದ್ರಕ್ಕೆ ಅಪ್ಪಳಿಸಿದ್ದು, ಅದರ ಅವಶೇಷಗಳು ಲಭಿಸಿವೆ ಎಂದು ಇಂಡೋನೇಷ್ಯಾ ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಸಮುದ್ರದಲ್ಲಿ ಸಿಕ್ಕ ಅವಶೇಷಗಳನ್ನು ಜಕಾರ್ತಾದ ಬಂದರಿನಲ್ಲಿ ಪ್ರದರ್ಶಿಸಲಾಗಿದೆ. ಇಂಡೋನೇಷ್ಯಾದ ಅಧಿಕಾರಿಗಳು ಜಾವಾ ಸಮುದ್ರದಲ್ಲಿ 23 ಮೀಟರ್ (75 ಅಡಿ) ಆಳದಲ್ಲಿ ವಿಮಾನದ ಭಾಗಗಳನ್ನು ಪತ್ತೆ ಮಾಡಿದ್ದಾರೆ.
ಇದನ್ನು ಓದಿ: ಇಂಡೋನೇಷ್ಯಾ: ಜಕಾರ್ತಾದಿಂದ ಟೇಕ್ ಆಫ್ ಆಗಿದ್ದ ವಿಮಾನ ಪತನ
ಜಕಾರ್ತದಿಂದ ಟೇಕ್ ಆಫ್ ಆದ ಬಳಿಕ ಸಂಪರ್ಕ ಕಳೆದುಕೊಂಡ ವಿಮಾನ ಕ್ಷಣಾರ್ಧದಲ್ಲಿ ಪತನಗೊಂಡಿದೆ. 62 ಪ್ರಯಾಣಿಕರಿದ್ದ ವಿಮಾನವು ಅಪಘಾತಗೊಂಡು ಸಮುದ್ರಕ್ಕೆ ಅಪ್ಪಳಿಸಿದೆ. ಬಳಿಕ ನೌಕಾಪಡೆಯ ಹಡಗಿನಲ್ಲಿರುವ ಸೋನಾರ್ ಉಪಕರಣಗಳ ಮೂಲಕ ವಿಮಾನದ ಸಿಗ್ನಲ್ ಪತ್ತೆ ಮಾಡಿದ ನಂತರ ಶ್ರೀವಿಜಯ ಏರ್ ಫ್ಲೈಟ್ 182 ಗಾಗಿ ಹುಡುಕಾಟ ನಡೆಸಲಾಯಿತು.