ETV Bharat / international

19 ಬಾಂಗ್ಲಾದೇಶಿಗರನ್ನು ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್

ಬಾಂಗ್ಲಾದೇಶದ 'ರಾಣಾ' ಎಂಬ ಮೀನುಗಾರಿಕಾ ಬೋಟ್​ ಮತ್ತು ಅದರಲ್ಲಿದ್ದ 19 ಸಿಬ್ಬಂದಿಯನ್ನು ಭಾರತೀಯ ಕೋಸ್ಟ್ ಗಾರ್ಡ್ ರಕ್ಷಿಸಿದ್ದು, ಬಾಂಗ್ಲಾದೇಶದ ಭಾರತೀಯ ರಾಯಭಾರ ಕಚೇರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ.

ಭಾರತೀಯ ಕೋಸ್ಟ್ ಗಾರ್ಡ್
ಭಾರತೀಯ ಕೋಸ್ಟ್ ಗಾರ್ಡ್
author img

By

Published : Dec 9, 2020, 7:35 AM IST

ಢಾಕಾ: ತಾಂತ್ರಿಕ ಸಮಸ್ಯೆಯಿಂದಾಗಿ ಒಡಿಶಾದ ಪ್ಯಾರಡಿಪ್‌ನ ಆಗ್ನೇಯ ದಿಕ್ಕಿನಲ್ಲಿ ತೊಂದರೆಗೊಳಗಾಗಿದ್ದ ಬಾಂಗ್ಲಾದೇಶದ ಮೀನುಗಾರಿಕಾ ಬೋಟ್​ವೊಂದನ್ನು ಭಾರತೀಯ ಕೋಸ್ಟ್ ಗಾರ್ಡ್ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಬಾಂಗ್ಲಾದೇಶದ 'ರಾಣಾ' ಎಂಬ ಮೀನುಗಾರಿಕಾ ಬೋಟ್​ವೊಂದು ಕಳೆದ 10 ದಿನಗಳಿಂದ​ ಒಡಿಶಾದ ಪ್ಯಾರಡಿಪ್‌ನ ಆಗ್ನೇಯ ಭಾಗದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ತೊಂದರೆಗೊಳಗಾಗಿದ್ದು, ಇದರಲ್ಲಿದ್ದ 19 ಸಿಬ್ಬಂದಿಯನ್ನು ರಕ್ಷಿಸಲಾಗಿದೆ.

ಈ ಕುರಿತು ಟ್ವೀಟ್​ ಮೂಲಕ ಮಾಹಿತಿ ನೀಡಿರುವ ಭಾರತೀಯ ಕೋಸ್ಟ್ ಗಾರ್ಡ್, ಬೋಟ್​ನಲ್ಲಿ ತೊಂದರೆಗೊಳಗಾಗಿದ್ದ 19 ಸಿಬ್ಬಂದಿಯನ್ನು ರಕ್ಷಿಸಿ, ಪ್ರಥಮ ಚಿಕಿತ್ಸೆ, ಆಹಾರ ಮತ್ತು ನೀರನ್ನು ಒದಗಿಸಿದ್ದು, ಬೋಟ್ ಅನ್ನು ಸಹ ರಕ್ಷಿಸಲಾಗಿದೆ ಎಂದು ಬಾಂಗ್ಲಾದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.