ಸಿಂಗಾಪುರ: ಆಗ್ನೇಯ ಏಷ್ಯಾದ ಥಾಯ್ಲೆಂಡ್ ಹಾಗೂ ಭಾರತದ ನಡುವೆ ಕೇವಲ 2 ವರ್ಷಗಳಲ್ಲಿ ಶೇ.60ರಷ್ಟು ವ್ಯಾಪಾರ ವಹಿವಾಟು ವೃದ್ಧಿಯಾಗಿದೆ. ಇದು ಎರಡು ರಾಷ್ಟ್ರಗಳ ನಡುವಣ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.
ಬ್ಯಾಂಕಾಕ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಬಿಡುಗಡೆ ಮಾಡಿರುವ ಅಂಕಿ- ಅಂಶಗಳು ಈ ವೃದ್ಧಿಯನ್ನ ಎತ್ತಿ ತೋರಿಸಿವೆ. 2016ರಿಂದ ಇಲ್ಲಿವರೆಗೂ ಈ ಬೆಳವಣಿಗೆ ಆಗಿದೆ. 2014ಕ್ಕಿಂತ ಐದು ವರ್ಷಗಳ ಮುಂಚೆ ಎರಡೂ ರಾಷ್ಟ್ರಗಳ ನಡುವಣ ವ್ಯಾಪಾರದಲ್ಲಿ ಶೇ 44 ರಷ್ಟು ಕುಸಿತ ಕಂಡಿತ್ತು. 2014ರಲ್ಲಿ ಥಾಯ್ಲೆಂಡ್ ಹಾಕಿದ್ದ ಮಿಲಿಟರಿ ಕಾನೂನು ವ್ಯಾಪಾರ ಕುಸಿತಕ್ಕೆ ಕಾರಣವಾಗಿತ್ತು.
ವಿಶ್ವಬ್ಯಾಂಕ್ನ ವರದಿ ಪ್ರಕಾರ ಥಾಯ್ಲೆಂಡ್ನ ಜಿಡಿಪಿ 2018ರಲ್ಲಿ 505 ಬಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು. ಇದರಲ್ಲಿ ಮೂರನೇ ಎರಡರಷ್ಟು ಭಾಗ ರಫ್ತಿನಿಂದಲೇ ಬಂದಿದ್ದು ಎಂದು ಆ ವರದಿಯಲ್ಲಿ ಹೇಳಲಾಗಿತ್ತು.