ETV Bharat / international

ಪಾಕ್‌ನಲ್ಲಿ 2025ರ ಚಾಂಪಿಯನ್​ ಟ್ರೋಫಿ: ಭಾರತದ ಪಾಲ್ಗೊಳ್ಳುವಿಕೆ ಬಗ್ಗೆ ಐಸಿಸಿ ಹೇಳಿದ್ದೇನು? - ಪಾಕ್‌ನಲ್ಲಿ 2025ರ ಐಸಿಸಿ ಚಾಂಪಿಯನ್​​ ಟ್ರೋಫಿ

ಐಸಿಸಿ ಆಯೋಜಿತ 2025ರ ಚಾಂಪಿಯನ್​ ಟ್ರೋಫಿ ಪಾಕಿಸ್ತಾನದಲ್ಲಿ ಆಯೋಜನೆಗೊಂಡಿದ್ದು, ಭಾರತ ಭಾಗಿಯಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಐಸಿಸಿ ತನ್ನ ಅಭಿಪ್ರಾಯ ತಿಳಿಸಿದೆ.

India-pakistan
India-pakistan
author img

By

Published : Nov 22, 2021, 9:04 PM IST

ದುಬೈ: 2025ರ ಐಸಿಸಿ ಚಾಂಪಿಯನ್​ ಟ್ರೋಫಿ ನೆರೆಯ ಪಾಕಿಸ್ತಾನದಲ್ಲಿ ಆಯೋಜನೆಗೊಂಡಿದ್ದು, ಇದರಲ್ಲಿ ಭಾಗವಹಿಸುವುದಕ್ಕೆ ಸಂಬಂಧಿಸಿದಂತೆ ಸಮಯ ಬಂದಾಗ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಕೇಂದ್ರ ಸಚಿವರು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ವಿಚಾರವಾಗಿ ಇದೀಗ ಐಸಿಸಿ ಅಧ್ಯಕ್ಷ ಗ್ರೆಗ್​ ಬಾರ್ಕ್ಲೆ (ICC chief Greg Barclay) ಮಾತನಾಡಿದ್ದು, ಉಭಯ ದೇಶಗಳ ನಡುವಿನ ರಾಜಕೀಯ ಸಂಬಂಧ ಸುಧಾರಿಸಲು ಕ್ರಿಕೆಟ್​ ಸಹಾಯ ಮಾಡಲಿದೆ ಎಂದು ಹೇಳಿದರು.

2025ರ ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲಿ (2025 Champions Trophy) ವಿವಿಧ ದೇಶದ ಕ್ರಿಕೆಟ್​​ ತಂಡಗಳು ಭಾಗಿಯಾಗುವ ವಿಚಾರವಾಗಿ ಮಾತನಾಡುತ್ತಾ, ಈ ಕುರಿತು ನಮಗೆ ಯಾವುದೇ ರೀತಿಯ ಸಮಸ್ಯೆ ಅಥವಾ ಸಂದೇಹಗಳಿಲ್ಲ. ಈ ಟೂರ್ನಿಯಲ್ಲಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಯಾವುದೇ ತೊಂದರೆ ಇಲ್ಲ ಎಂದರು.

ಇದನ್ನೂ ಓದಿ: ಪಾಕ್‌ನಲ್ಲಿ 2025ರ ಐಸಿಸಿ ಚಾಂಪಿಯನ್​​ ಟ್ರೋಫಿ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದೇನು?

ಹಲವು ವರ್ಷಗಳ ನಂತರ ಪಾಕಿಸ್ತಾನದಲ್ಲಿ ಐಸಿಸಿ ಕ್ರಿಕೆಟ್ ಟೂರ್ನಿ​​​ ಆಯೋಜನೆಗೊಳ್ಳುತ್ತಿದೆ. ಕಳೆದ ಕೆಲವು ವಾರಗಳಲ್ಲಿ ಏನಾಯಿತು ಎಂಬುದನ್ನು ಹೊರತುಪಡಿಸಿದರೆ, ಅಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಸೆಪ್ಟೆಂಬರ್​ ತಿಂಗಳಲ್ಲಿ ನ್ಯೂಜಿಲ್ಯಾಂಡ್​​ ಮತ್ತು ಇಂಗ್ಲೆಂಡ್​ ಪಾಕ್​ ಪ್ರವಾಸದಿಂದ ಹಿಂದೆ ಸರಿದಿವೆ. ಆದರೆ ಈ ಟೂರ್ನಿ​​​ ಯಶಸ್ವಿಯಾಗಿ ಮುಂದುವರೆಯುವ ವಿಶ್ವಾಸವಿಲ್ಲದಿದ್ದರೆ ಐಸಿಸಿ ಆಡಳಿತ ಮಂಡಳಿ ಪಾಕ್​ಗೆ ಆಯೋಜನೆ ಮಾಡುವ ಹಕ್ಕು ನೀಡುವುದಿಲ್ಲ ಎಂದು ಬಾರ್ಕ್ಲೆ ತಿಳಿಸಿದ್ದಾರೆ.

ಪಾಕ್​ ಐಸಿಸಿ ಟೂರ್ನಮೆಂಟ್​ ಆಯೋಜನೆ ಮಾಡಲು ಸಮರ್ಥವಾಗಿದೆ. ಮೊದಲ ಬಾರಿಗೆ ವಿಶ್ವದ ಟೂರ್ನಮೆಂಟ್​​ ಆಯೋಜನೆ ಮಾಡುತ್ತಿದ್ದು, ಅದಕ್ಕಾಗಿ ಸಾಕಷ್ಟು ಕಾಲಾವಕಾಶವಿದೆ ಎಂದರು. 2025ರಲ್ಲಿ ಪಾಕಿಸ್ತಾನದಲ್ಲಿ ನಿಗದಿಯಾಗಿರುವ ಚಾಂಪಿಯನ್ಸ್​​ ಟ್ರೋಫಿ ಎರಡು ನೆರೆಹೊರೆಯ ದೇಶಗಳ ನಡುವಿನ ಸಂಬಂಧದಲ್ಲಿ ಸುಧಾರಣೆ ತರಬಹುದು ಎಂದಿರುವ ಅವರು, ಈ ಪಂದ್ಯಾಟಗಳು​​ ಯಶಸ್ವಿಯಾಗಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದಿದ್ದಾರೆ.

2009ರಲ್ಲಿ ಶ್ರೀಲಂಕಾ ತಂಡ ಪಾಕ್​ ಪ್ರವಾಸ ಕೈಗೊಂಡಿದ್ದ ವೇಳೆ ಲಾಹೋರ್​ನಲ್ಲಿ ಲಂಕಾ ತಂಡದ ಪ್ಲೇಯರ್ಸ್ ಪ್ರಯಾಣ ಮಾಡ್ತಿದ್ದ ಬಸ್​​ ಮೇಲೆ ಬಾಂಬ್ ದಾಳಿ ನಡೆಸಲಾಗಿತ್ತು. ಇದಾದ ಬಳಿಕ ಅನೇಕ ದೇಶಗಳು ಅಲ್ಲಿಗೆ ಪ್ರಯಾಣ ಬೆಳೆಸಲು ಹಿಂದೇಟು ಹಾಕಿವೆ. ಆದರೆ ಕಳೆದ ಎರಡು ವರ್ಷಗಳಿಂದ ಇತ್ತೀಚೆಗೆ ಬಾಂಗ್ಲಾ, ವೆಸ್ಟ್​ ಇಂಡೀಸ್​ನಂತಹ ದೇಶಗಳು ಅಲ್ಲಿಗೆ ತೆರಳಿ ಕ್ರಿಕೆಟ್ ಆಡಿ ಬಂದಿವೆ. ವಿಶ್ವಕಪ್​ ಆರಂಭಕ್ಕೂ ಮುಂಚಿತವಾಗಿ ಪಾಕ್​​ಗೆ ತೆರಳಿದ್ದ ನ್ಯೂಜಿಲ್ಯಾಂಡ್ ತಂಡ ಭದ್ರತೆ ಕಾರಣ ನೀಡಿ, ವಾಪಸ್​​ ಆಗಿತ್ತು. ಇನ್ನು ಭಾರತ-ಪಾಕ್​ 2012ರಿಂದಲೂ ದ್ವಿಪಕ್ಷೀಯ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಿಲ್ಲ. ಆದರೆ ಐಸಿಸಿ ಆಯೋಜನೆ ಮಾಡುವ ಟೂರ್ನಿಗಳಲ್ಲಿ ಮುಖಾಮುಖಿಯಾಗುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.