ETV Bharat / international

ಮಾನವ ಅಭಿವೃದ್ಧಿ ಸೂಚ್ಯಂಕ 2020 ವರದಿ : ಭಾರತಕ್ಕೆ 131ನೇ ಸ್ಥಾನ - ಮಾನವ ಅಭಿವೃದ್ಧಿ ಸೂಚ್ಯಂಕ ಸುದ್ದಿ

ಹೆಚ್‌ಡಿಐ ಒಂದು ದೇಶದ ಅಭಿವೃದ್ಧಿಯ ಮಟ್ಟವನ್ನು ಗಮನದಲ್ಲಿಟ್ಟುಕೊಳ್ಳುವ ಅತ್ಯುತ್ತಮ ಸಾಧನಗಳಲ್ಲಿ ಒಂದು. ಯಾಕೆಂದರೆ, ಇದು ಆರ್ಥಿಕ ಅಭಿವೃದ್ಧಿಗೆ ಕಾರಣವಾಗಿರುವ ಎಲ್ಲಾ ಪ್ರಮುಖ ಸಾಮಾಜಿಕ ಮತ್ತು ಆರ್ಥಿಕ ಸೂಚಕಗಳನ್ನು ಸಂಯೋಜಿಸುತ್ತದೆ..

ಮಾನವ ಅಭಿವೃದ್ಧಿ ಸೂಚ್ಯಂಕ 2020
ಮಾನವ ಅಭಿವೃದ್ಧಿ ಸೂಚ್ಯಂಕ 2020
author img

By

Published : Dec 18, 2020, 10:41 AM IST

ಮಾನವ ಅಭಿವೃದ್ಧಿ ಸೂಚ್ಯಂಕ (ಹೆಚ್‌ಡಿಐ) ಒಂದು ದೇಶದ ಒಟ್ಟಾರೆ ಸಾಧನೆಯನ್ನು ಅದರ ಸಾಮಾಜಿಕ ಮತ್ತು ಆರ್ಥಿಕ ಆಯಾಮಗಳಲ್ಲಿ ಅಳೆಯಲು ಬಳಸುವ ಸಂಖ್ಯಾಶಾಸ್ತ್ರೀಯ ಸಾಧನ. ಒಂದು ದೇಶದ ಸಾಮಾಜಿಕ ಮತ್ತು ಆರ್ಥಿಕ ಆಯಾಮಗಳು ಜನರ ಆರೋಗ್ಯ, ಶಿಕ್ಷಣ ಮತ್ತು ಅವರ ಜೀವನ ಮಟ್ಟವನ್ನು ಆಧರಿಸಿವೆ. ಪ್ರತಿ ವರ್ಷ ಯುಎನ್‌ಡಿಪಿ ತಮ್ಮ ವಾರ್ಷಿಕ ವರದಿಯಲ್ಲಿ ಬಿಡುಗಡೆಯಾದ ಹೆಚ್‌ಡಿಐ ವರದಿಯನ್ನು ಆಧರಿಸಿ ದೇಶಗಳಿಗೆ ಸ್ಥಾನ ನೀಡುತ್ತದೆ.

ಪಾಕಿಸ್ತಾನದ ಅರ್ಥಶಾಸ್ತ್ರಜ್ಞ ಮಹಬೂಬ್ ಉಲ್ ಹಕ್ 1990ರಲ್ಲಿ ಹೆಚ್‌ಡಿಐ ರಚಿಸಿದರು. ಇದನ್ನು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ)ವು ದೇಶದ ಅಭಿವೃದ್ಧಿಯನ್ನು ಅಳೆಯಲು ಬಳಸಲಾಯಿತು. ಸೂಚ್ಯಂಕದ ಲೆಕ್ಕಾಚಾರವು ನಾಲ್ಕು ಪ್ರಮುಖ ಸೂಚಕಗಳನ್ನು ಸಂಯೋಜಿಸುತ್ತದೆ.

ಅವುಗಳೆಂದ್ರೆ, ಆರೋಗ್ಯದ ಮಟ್ಟ, ಶಾಲಾ ಶಿಕ್ಷಣದ ನಿರೀಕ್ಷಿತ ವರ್ಷಗಳು, ಶಿಕ್ಷಣಕ್ಕಾಗಿ ಶಾಲಾ ಶಿಕ್ಷಣದ ಸರಾಸರಿ ವರ್ಷಗಳು ಮತ್ತು ಜೀವನಮಟ್ಟಕ್ಕಾಗಿ ತಲಾ ಒಟ್ಟು ರಾಷ್ಟ್ರೀಯ ಆದಾಯ.

ಹೆಚ್‌ಡಿಐ ಒಂದು ದೇಶದ ಅಭಿವೃದ್ಧಿಯ ಮಟ್ಟವನ್ನು ಗಮನದಲ್ಲಿಟ್ಟುಕೊಳ್ಳುವ ಅತ್ಯುತ್ತಮ ಸಾಧನಗಳಲ್ಲಿ ಒಂದು. ಯಾಕೆಂದರೆ, ಇದು ಆರ್ಥಿಕ ಅಭಿವೃದ್ಧಿಗೆ ಕಾರಣವಾಗಿರುವ ಎಲ್ಲಾ ಪ್ರಮುಖ ಸಾಮಾಜಿಕ ಮತ್ತು ಆರ್ಥಿಕ ಸೂಚಕಗಳನ್ನು ಸಂಯೋಜಿಸುತ್ತದೆ.

ಹೆಚ್‌ಡಿಐ ಸೂಚ್ಯಂಕದಲ್ಲಿ ಭಾರತದ ಸಾಧನೆ

ಬಿಡುಗಡೆಯ ವರ್ಷ ರ್ಯಾಂಕ್​
2020131
2019129
2018130
2017131
2016131
2015130
2014135

ಭಾರತಕ್ಕೆ ಸಂಬಂಧಿಸಿದ ಯುಎನ್‌ಡಿಪಿ ಹೆಚ್‌ಡಿಐ ವರದಿಯ 2020ರ ಕೆಲ ಅವಲೋಕನ :

  • ಮಾನವ ಅಭಿವೃದ್ಧಿಯನ್ನು ವಿಸ್ತರಿಸುವುದು : ಮಹಿಳೆಯರು ಮತ್ತು ಬಾಲಕಿಯರಿಗೆ ಹೆಚ್ಚಿನ ಶಿಕ್ಷಣ ನೀಡುವುದು. ಮಹಿಳೆಯರ ಹೆಚ್ಚು ಆರ್ಥಿಕ ಸಬಲೀಕರಣ, ಮನೆಗಳಲ್ಲಿ ಯುವತಿಯರ ಶಕ್ತಿ, ಬಡತನವನ್ನು ಮರು ಹೊಂದಿಸುವುದು ಇವೆಲ್ಲವೂ ಭಾರತದಲ್ಲಿ ಫರ್ಟಿಲಿಟಿ ರೇಟ್​ ಕಡಿಮೆ ಮಾಡಲು ಕಾರಣವಾಗಿದೆ (ವಿಶೇಷವಾಗಿ ಕೇರಳ ರಾಜ್ಯದಲ್ಲಿ).
  • ಆರ್ಥಿಕ ಭದ್ರತೆ ಮತ್ತು ಭೂಮಿಯ ಮಾಲೀಕತ್ವ ವಿಚಾರದಲ್ಲಿ ಮಹಿಳೆಯರ ಸುರಕ್ಷತೆ ತೋರಿಸುತ್ತದೆ. ಮುಖ್ಯವಾಗಿ ಲಿಂಗ ಆಧಾರಿತ ಹಿಂಸಾಚಾರದ ಅಪಾಯ ಕಡಿಮೆ ಮಾಡುತ್ತದೆ.
  • ಏಷ್ಯಾದಲ್ಲೂ ಇದು ಸಂಭವಿಸುತ್ತದೆ. ಕಾಂಬೋಡಿಯಾ, ಭಾರತ ಮತ್ತು ಥೈಲ್ಯಾಂಡ್‌ನ ಕೆಲ ಮಕ್ಕಳು ಅಪೌಷ್ಟಿಕತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುವುದು ಕಾಣಬಹುದು. ಸುರಕ್ಷಿತ ಕುಡಿಯುವ ನೀರು ಮತ್ತು ತ್ಯಾಜ್ಯ ನೀರಿನ ಸಂಸ್ಕರಣೆಯ ಪ್ರವೇಶದ ಕೊರತೆಗೆ ಈ ದುರ್ಬಲತೆಗಳು ವಿಸ್ತರಿಸುತ್ತವೆ.
  • ಭಾರತದಲ್ಲಿ ಪೋಷಕರ ನಡವಳಿಕೆಯಲ್ಲಿ ಭಿನ್ನವಾದ ಪ್ರತಿಕ್ರಿಯೆಗಳು, ಬಾಲಕಿಯರ ಆರೋಗ್ಯ ಮತ್ತು ಶಿಕ್ಷಣದಲ್ಲಿ ಕೆಲವು ಏರಿಳಿತ, ಕೆಲವು ಆಘಾತಗಳ ಪರಿಣಾಮವಾಗಿ ಹುಡುಗರಿಗಿಂತ ಬಾಲಕಿಯರು ಹೆಚ್ಚಿನ ಅಪೌಷ್ಟಿಕತೆಗೆ ಒಳಗಾಗುತ್ತಾರೆ.
  • 2008ರಲ್ಲಿ ಭಾರತವು ಹವಾಮಾನ ಬದಲಾವಣೆಯ ಕುರಿತಾದ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ಪ್ರಾರಂಭಿಸಿತು. ಯಾಕೆಂದರೆ, ಇದು ಹವಾಮಾನ ಬದಲಾವಣೆಯ ಅಪಾಯಗಳ ಬಗ್ಗೆ, ಅದರಿಂದಾಗುವ ಸಮಸ್ಯೆಗಳ ಬಗ್ಗೆ ಮನೆಯಲ್ಲಿಯೇ ಔಪಚಾರಿಕವಾಗಿ ಮಾತುಕತೆ ನಡೆಸುವ ಅಗತ್ಯವಿದೆ ಎಂದು ತಿಳಿಸಿತ್ತು.
  • ಪ್ಯಾರಿಸ್ ಒಪ್ಪಂದದ ಪ್ರಕಾರ, ಭಾರತವು ತನ್ನ ಜಿಡಿಪಿಯಿಂದಾಗುವ ತೀವ್ರತೆಯನ್ನು 2005ರ ಮಟ್ಟದಿಂದ 2030ರ ವೇಳೆಗೆ 33-35 ಪ್ರತಿಶತದಷ್ಟು ಕಡಿಮೆ ಮಾಡಲು ಮತ್ತು 2030ರ ವೇಳೆಗೆ ಪಳೆಯುಳಿಕೆ ರಹಿತ ಇಂಧನ ಮೂಲಗಳಿಂದ 40 ಪ್ರತಿಶತದಷ್ಟು ವಿದ್ಯುತ್ ಶಕ್ತಿಯ ಸಾಮರ್ಥ್ಯವನ್ನು ಪಡೆಯುವುದಾಗಿ ಪ್ರತಿಜ್ಞೆ ಮಾಡಿದೆ.
  • ಯೋಜನೆಯ ಭಾಗವಾಗಿ, ರಾಷ್ಟ್ರೀಯ ಸೌರ ಮಿಷನ್ ಪಳೆಯುಳಿಕೆ ಇಂಧನ ಆಧಾರಿತ ಆಯ್ಕೆಗಳೊಂದಿಗೆ ಸೌರಶಕ್ತಿಯ ಸ್ಪರ್ಧಾತ್ಮಕ ಟೈವ್ ಮಾಡಲು ಪವರ್ ಜೆನ್ ಎರೇಶನ್ ಮತ್ತು ಇತರ ಬಳಕೆಗಳಿಗೆ ಸೌರ ಶಕ್ತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಭಾರತದಲ್ಲಿ ಸೌರ ಸಾಮರ್ಥ್ಯವು 2014 ರ ಮಾರ್ಚ್‌ನಲ್ಲಿ 2.6 ಗಿಗಾವ್ಯಾಟ್‌ನಿಂದ 2019ರ ಜುಲೈನಲ್ಲಿ 30 ಗಿಗಾವ್ಯಾಟ್‌ಗಳಿಗೆ ಏರಿತು. ಇದು 20ಗಿಗಾವ್ಯಾಟ್‌ಗಳ ಗುರಿಯನ್ನು ನಿಗದಿತ ಸಮಯಕ್ಕಿಂತ ನಾಲ್ಕು ವರ್ಷಗಳ ಮುಂಚೆಯೇ ಸಾಧಿಸಿತು.
  • 10 ಮಿಲಿಯನ್​ ಜನರಿಗೆ ನೆಲೆಯಾಗಿರುವ ಭಾರತದ ಚೆನ್ನೈನಲ್ಲಿ ಮೂಲಸೌಕರ್ಯಗಳ ಕೊರತೆಯಿರುವ ನೀರಿನ ಕೊರತೆ ತೀವ್ರವಾಗಿ ಉಂಟುಮಾಡಿತು. ಬೀದಿ ಘರ್ಷಣೆಗಳು ಸಂಭವಿಸಿದವು. ಏತನ್ಮಧ್ಯೆ, 25 ವರ್ಷಗಳಲ್ಲಿ ಭಾರಿ ಮುಂಗಾರು ಕ್ಯಾಟಾ ಸ್ಟ್ರೋಫಿಕ್ ಪ್ರವಾಹವನ್ನು ಉಂಟುಮಾಡಿತು. ಈ ವೇಳೆ ಸುಮಾರು 13 ರಾಜ್ಯಗಳಲ್ಲಿ ಉಂಟಾದ ಈ ಪ್ರವಾಹದಿಂದ 1,600 ಜನರು ಸಾವನ್ನಪ್ಪಿದರು. ಮುಖ್ಯವಾಗಿ ಕೇರಳದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಬೇಕಾಯಿತು.
  • ಭಾರತ ಮತ್ತು ಮೆಕ್ಸಿಕೊದಲ್ಲಿ ಬೋಧನೆಯು ಹೆಚ್ಚಾಗಿ ಶಿಸ್ತುಬದ್ಧ ಮತ್ತು ಪಠ್ಯಪುಸ್ತಕ ಆಧಾರಿತವಾಗಿದೆ ಎಂದು ಗಮನಿಸಲಾಯಿತು. ಇದು ಕಾರಣಗಳು ಮತ್ತು ಪರಿಹಾರಗಳನ್ನು ಅಧ್ಯಯನ ಮಾಡಲು ಹೆಚ್ಚು ವ್ಯವಸ್ಥಿತ ವಿಧಾನವನ್ನು ನಿರ್ಲಕ್ಷಿಸಲು ಕಾರಣವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.