ETV Bharat / international

ಹಾಂಕಾಂಗ್​​ನಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ್ರೆ 3 ವರ್ಷ ಜೈಲು - ಹಾಂಕಾಂಗ್​​ ರಾಷ್ಟ್ರಗೀತೆ ಮಸೂದೆ ಲೇಟೆಸ್ಟ್​​ ನ್ಯೂಸ್​

ರಾಷ್ಟ್ರಗೀತೆಗೆ ಅಗೌರವ ತೋರಿದರೆ ಅಂತವರಿಗೆ 50,000 HK USD ದಂಡ ಮತ್ತು 3 ವರ್ಷಗಳ ಜೈಲು ವಿಧಿಸುವ ರಾಷ್ಟ್ರಗೀತೆ ಮಸೂದೆಗೆ ಹಾಂಗ್​​ಕಾಂಗ್​​ ಮುಖ್ಯ ಕಾರ್ಯನಿರ್ವಾಹಕರಾದ ಕ್ಯಾರಿ ಲ್ಯಾಮ್ ಸಹಿ ಹಾಕಿದ್ದಾರೆ.

hks-lam-signs-national-anthem-bill
ರಾಷ್ಟ್ರಗೀತೆ ಮಸೂದೆಗೆ ಕ್ಯಾರಿ ಲ್ಯಾಮ್​​ ಸಹಿ
author img

By

Published : Jun 12, 2020, 3:33 PM IST

ಹಾಂಗ್ ಕಾಂಗ್: ರಾಷ್ಟ್ರಗೀತೆಗೆ ಅಗೌರವ ತೋರಿದರೆ ಅಥವಾ ದುರುಪಯೋಗ ಪಡಿಸಿಕೊಂಡರೆ ಅಂತವರ ವಿರುದ್ಧ 50,000 HK USD ದಂಡ ಮತ್ತು 3 ವರ್ಷಗಳ ಜೈಲು ವಿಧಿಸುವ ಹೊಸ ಮಸೂದೆಗೆ ಹಾಂಗ್ ಕಾಂಗ್ ​​ಮುಖ್ಯ ಕಾರ್ಯನಿರ್ವಾಹಕರಾದ ಕ್ಯಾರಿ ಲ್ಯಾಮ್ ಸಹಿ ಹಾಕಿದ್ದಾರೆ.

ಇದು ಚೀನಾದ ರಾಷ್ಟ್ರಗೀತೆ "ಮಾರ್ಚ್ ಆಫ್ ದಿ ವಾಲಂಟಿಯರ್ಸ್" (March of the Volunteers) ಅನ್ನು ಅವಮಾನಿಸುವುದನ್ನು ನಿಷೇಧಿಸುತ್ತದೆ ಎಂದು ವರದಿಯಾಗಿದೆ. ಈ ಮಸೂದೆ ಗೆಜೆಟ್​​ನಲ್ಲಿ ಪ್ರಕಟವಾದ ಕೂಡಲೇ ಜಾರಿಗೆ ಬರಲಿದೆ.

ಈ ಮಸೂದೆಗೆ ಸಹಿ ಹಾಕಿದ ನಂತರ ಮಾತನಾಡಿದ ಕ್ಯಾರಿ ಲ್ಯಾಮ್, ಈ ಮಸೂದೆ ಜಾರಿಗೆ ಬರುತ್ತಿರುವುದರಿಂದ ನನಗೆ ಸಂತೋಷವಾಗಿದೆ. ಏಕೆಂದರೆ ಇದು HKSAR (Hong Kong Special Administrative Region)ನ ಸಾಂವಿಧಾನಿಕ ಜವಾಬ್ದಾರಿಯನ್ನು ಈಡೇರಿಸುವುದರ ಸೂಚಕವಾಗಿದೆ ಮತ್ತು 'ಒಂದು ದೇಶ, ಎರಡು ವ್ಯವಸ್ಥೆಗಳ' ಮನೋಭಾವವನ್ನು ಪ್ರತಿಬಿಂಬಿಸುತ್ತದೆ"ಎಂದಿದ್ದಾರೆ.

"ರಾಷ್ಟ್ರಧ್ವಜ ಮತ್ತು ರಾಷ್ಟ್ರ ಲಾಂಛನದಂತೆ ರಾಷ್ಟ್ರಗೀತೆಯೂ ರಾಷ್ಟ್ರದ ಸಂಕೇತವಾಗಿದೆ. ಚೀನಾದ ಅಜೇಯ ಭಾಗವಾಗಿ, ಶಾಸನದ ಮೂಲಕ ರಾಷ್ಟ್ರಗೀತೆಯ ಘನತೆಯನ್ನು ಕಾಪಾಡುವುದು ಹೆಚ್‌ಕೆಎಸ್‌ಎಆರ್​​​ನ ಕರ್ತವ್ಯವಾಗಿದೆ" ಎಂದು ಅವರು ಹೇಳಿದ್ದಾರೆ.

ಸಾರ್ವಜನಿಕರು ತಮ್ಮ ಸ್ವಇಚ್ಛೆಯಿಂದ ರಾಷ್ಟ್ರಗೀತೆಯನ್ನು ಗೌರವಿಸುತ್ತಾರೆ ಎಂಬ ಆಶಯದೊಂದಿಗೆ, ದೇಶದ ಇತಿಹಾಸ ಮತ್ತು ರಾಷ್ಟ್ರಗೀತೆಯ ಚೈತನ್ಯವನ್ನು ಯುವಪೀಳಿಗೆ ಅರ್ಥಮಾಡಿಕೊಳ್ಳಲು ರಾಷ್ಟ್ರಗೀತೆಯ ಪ್ರಚಾರವು ಅತ್ಯಂತ ಮಹತ್ವದ್ದಾಗಿದೆ ಎಂದು ಲ್ಯಾಮ್​​ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕೂಡ ತನ್ನ ಕಲಿಕೆ ಮತ್ತು ಬೋಧನಾ ಸಂಪನ್ಮೂಲಗಳನ್ನು ನವೀಕರಣಗೊಳಿಸಿ ಶಾಲೆಗಳನ್ನು ಬೆಂಬಲಿಸಲು ಸುತ್ತೋಲೆಗಳ ಮೂಲಕ ಶಾಲೆಗಳಿಗೆ ನಿರ್ದೇಶನಗಳನ್ನು ನೀಡುತ್ತದೆ" ಎಂದು ಲ್ಯಾಮ್ ತಿಳಿಸಿದರು.

ಹಾಂಗ್ ಕಾಂಗ್‌ನ ವಿಧಾನ ಪರಿಷತ್​ ಜೂನ್ 4 ರಂದು ಈ ರಾಷ್ಟ್ರಗೀತೆ ಮಸೂದೆಯನ್ನು ಬಹುಮತದೊಂದಿಗೆ ಅಂಗೀಕರಿಸಿತ್ತು. ಈ ಮಸೂದೆಯಡಿಯಲ್ಲಿ, ರಾಷ್ಟ್ರಗೀತೆಯನ್ನು ದುರುಪಯೋಗಪಡಿಸಿಕೊಂಡ ಅಥವಾ ಅವಮಾನಿಸಿದ ಯಾರಿಗಾದರೂ ದಂಡ ಮತ್ತು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.