ನ್ಯೂಜಿಲ್ಯಾಂಡ್: ದೇಶಾದ್ಯಂತ ಜನರು ಹೊಸ ವರ್ಷದ ಸಂಭ್ರಮಾಚರಣೆ ತವಕದಲ್ಲಿದ್ದಾರೆ. ದೇಶದ ಮೂಲೆ ಮೂಲೆಗಳಲ್ಲಿ ನ್ಯೂ ಇಯರ್ ಆಚರಿಸಲು ಜನರು ಸಿದ್ಧರಾಗಿದ್ದಾರೆ. ಇನ್ನು ಕೆಲವೇ ಗಂಟೆಗಳಲ್ಲಿ ಅಂದ್ರೆ ಮಧ್ಯರಾತ್ರಿ 12 ಗಂಟೆಗೆ ಹೊಸ ವರ್ಷವನ್ನು ಸ್ವಾಗತ ಮಾಡುವ ತವಕದಲ್ಲಿ ನಮ್ಮದೇಶದ ಜನರಿದ್ದಾರೆ. ಆದರೆ, ನಮ್ಮ ದೇಶಕ್ಕಿಂತ ಮೊದಲು ಕೆಲ ದೇಶಗಳು ಈಗಾಗಲೇ ಹೊಸ ವರ್ಷದ ಸಡಗರದಲ್ಲಿ ತೇಲಾಡುತ್ತಿದೆ.
ಪ್ರಪಂಚದಲ್ಲೇ ಹೊಸ ವರ್ಷವನ್ನು ಮೊದಲು ಆಚರಿಸುವ ದೇಶ ಎಂದರೆ ಅದು ಓಷಿಯಾನಿಯಾ. ನಂತರದ ಸ್ಥಾನದಲ್ಲಿ ಸಣ್ಣ ಪೆಸಿಫಿಕ್ ದ್ವೀಪ ರಾಷ್ಟ್ರಗಳಾದ ಟೋಂಗಾ, ಸಮೋವಾ ಮತ್ತು ಕಿರಿಬಾಟಿ ಕ್ರಮವಾಗಿ ಹೊಸ ವರ್ಷವನ್ನು ಮೊದಲು ಆಚರಿಸಿದವು. ಭಾರತ ಮತ್ತು ಅವುಗಳ ಸಮಯಕ್ಕೆ ಭಾರಿ ವ್ಯತ್ಯಾಸ ಇದೆ. ಹಾಗಾಗಿ ಭಾರತಕ್ಕಿಂತ ಕೆಲ ದೇಶಗಳು ಹೊಸ ವರ್ಷವನ್ನು ನಮಗಿಂತ ಮೊದಲು ಆಚರಿಸುತ್ತವೆ.
ಎಲೆಲ್ಲಿ ಯಾವಾಗ ಹೊಸ ವರ್ಷಾರಂಭ :
ಮಧ್ಯ ಪೆಸಿಫಿಕ್ ಸಾಗರದಲ್ಲಿರುವ ಬೇಕರ್ಸ್ ದ್ವೀಪದ ಜನರು ಹೊಸ ವರ್ಷವನ್ನು ಕೊನೆಯದಾಗಿ ಆಚರಿಸುತ್ತಾರೆ. ಭಾರತದ ಕಾಲಮಾನ ಸಂಜೆ 3:45ರ ಅವಧಿಗೆ ಚಥಮ್ ಐಸ್ಲ್ಯಾಂಡ್ ಜನರು ಹೊಸ ವರ್ಷವನ್ನು ಬರಮಾಡಿಕೊಂಡರು. ಈ ರಾಷ್ಟ್ರಗಳ ಜನ ಈಗಾಗಲೇ ಹೊಸ ವರ್ಷದ ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ. ನ್ಯೂಜಿಲ್ಯಾಂಡ್ ಜನರು ಸಂಜೆ 4:30ಕ್ಕೆ ಸರಿಯಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ.
ಇನ್ನು ಭಾರತಕ್ಕೂ ರಷ್ಯಾಗೂ ಆರೂವರೆ ಗಂಟೆಯಷ್ಟು ವ್ಯತ್ಯಾಸವಿದೆ. ಹಾಗಾಗಿ ರಷ್ಯಾವು ಭಾರತದ ಕಾಲಮಾನ ಸಂಜೆ 5:30ರ ಸಮಯಕ್ಕೆ ಹೊಸ ವರ್ಷವನ್ನು ಬರಮಾಡಿಕೊಂಡಿತು. ಆಸ್ಟ್ರೇಲಿಯಾದ ಮೆಲ್ಬರ್ನ್, ಸಿಡ್ನಿ, ಕ್ಯಾನ್ಬೆರಾ, ಹೊನಿಯಾರಾ ದೇಶದ ಜನರು ಭಾರತದ ಕಾಲಮಾನದ ಪ್ರಕಾರ ಸಂಜೆ 6:30ಕ್ಕೆ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. ಭಾರತದ ಕಾಲಮಾನ ಸಂಜೆ 7 ಗಂಟೆಗೆ ಸರಿಯಾಗಿ ಅಡಿಲೇಡ್, ಬ್ರೋಕನ್ ಹಿಲ್, ಸೆಡುನಾದಲ್ಲಿ ಹೊಸ ವರ್ಷದ ಸಡಗರ ಜೋರಾಗಿರುತ್ತದೆ. ಹಾಗೆಯೇ ಭಾರತದ ಕಾಲಮಾನ ಸಂಜೆ 7: 30ಕ್ಕೆ ಬ್ರಿಸ್ಬೇನ್, ಪೋರ್ಟ್ ಮೊರೆಸ್ಬಿ, ಹಗಟ್ನಾ ಹೊಸ ವರ್ಷವನ್ನು ಆಚರಿಕೊಳ್ಳುತ್ತಿದೆ. ಭಾರತದಲ್ಲಿ ರಾತ್ರಿ 8 ಗಂಟೆಯಾದಾಗ ಡಾರ್ವಿನ್, ಆಲಿಸ್ ಸ್ಪ್ರಿಂಗ್ಸ್, ಟೆನೆಂಟ್ ಕ್ರೀಕ್ ದೇಶಗಳು ನ್ಯೂ ಇಯರ್ ಆಚರಿಸುತ್ತವೆ.
ಜಪಾನ್, ದಕ್ಷಿಣ ಕೊರಿಯಾ, ಟೋಕಿಯೊ, ಸಿಯೋಲ್, ಪ್ಯೊಂಗ್ಯಾಂಗ್, ಡಿಲಿ ದೇಶಗಳು ಭಾರತದ ಕಾಲಮಾನ ರಾತ್ರಿ 8: 30ಕ್ಕೆ ಹೊಸ ವರ್ಷವನ್ನು ಆಚರಿಸಿಕೊಳ್ಳುತ್ತವೆ. ಚೀನಾ ಮತ್ತು ಫಿಲಿಪಿನ್ಸ್ ಜನರು ಹೊಸ ವರ್ಷವನ್ನು ಭಾರತದ ಕಾಲಮಾನ ರಾತ್ರಿ 9: 30 ಕ್ಕೆ ಆಚರಿಸುತ್ತಾರೆ. ಹಾಗೆಯೇ ಭಾರತದ ಕಾಲಮಾನ ರಾತ್ರಿ 10: 30ಕ್ಕೆ ಇಂಡೋನೇಷ್ಯಾ ಮತ್ತು ಥಾಯ್ಲೆಂಡ್ನಲ್ಲಿ ಹೊಸ ವರ್ಷವನ್ನು ಆಚರಿಸಲಾಗುವುದು. ಇನ್ನು ಮ್ಯಾನ್ಮಾರ್ನಲ್ಲಿ ಭಾರತದ ಕಾಲಮಾನ ರಾತ್ರಿ 11 ಗಂಟೆಗೆ ಹೊಸ ವರ್ಷವನ್ನು ಆಚರಿಸುತ್ತಾರೆ. ಹಾಗೆಯೇ ಬಾಂಗ್ಲಾದೇಶದಲ್ಲಿ ರಾತ್ರಿ 11: 30 ಕ್ಕೆ ಹೊಸ ವರ್ಷ ಆಚರಿಸುತ್ತಾರೆ. ರಾತ್ರಿ 11: 45 ಕ್ಕೆ ನೇಪಾಳದ ಕಠ್ಮಂಡು, ಪೋಖರಾ, ಬಿರತ್ನಗರ, ಧರಣ್ನಲ್ಲಿ ಹೊಸ ವರ್ಷ ಆಚರಿಸುತ್ತಾರೆ. ನಸುಕಿನ ಜಾವ ಅಥವಾ ಮಧ್ಯರಾತ್ರಿ 12: 00 ಗಂಟೆಗೆ ಭಾರತೀಯರು ಮತ್ತು ಶ್ರೀಲಂಕನ್ನರು ಹೊಸ ವರ್ಷವನ್ನು ಆಚರಿಸುತ್ತಾರೆ. ನಮ್ಮ ಪಕ್ಕದ ರಾಷ್ಟ್ರ ಪಾಕಿಸ್ತಾನವು ನಸುಕಿನ ಜಾವ ಅಥವಾ ಮಧ್ಯರಾತ್ರಿ 12: 30 ಕ್ಕೆ ಹೊಸ ವರ್ಷವನ್ನು ಸಂಭ್ರಮಿಸಲಿದೆ.