ETV Bharat / international

ಬಂದೂಕುಧಾರಿಗಳಿಂದ ಪಾಕಿಸ್ತಾನಿ ಗಾಯಕ ಹನೀಫ್ ಚಾಮ್ರೋಕ್ ಹತ್ಯೆ - ಗಾಯಕ ಹನೀಫ್ ಚಾಮ್ರೋಕ್ ಹತ್ಯೆ

ಬಂದೂಕುಧಾರಿಗಳು ಜನಪ್ರಿಯ ಸ್ಥಳೀಯ ಗಾಯಕ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆಯ ತಂದೆ ಹನೀಫ್ ಚಾಮ್ರೋಕ್​ನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Gunmen kill Pakistani singer in Baluchistan
ಪಾಕಿಸ್ತಾನಿ ಗಾಯಕ ಹನೀಫ್ ಚಾಮ್ರೋಕ್ ಹತ್ಯೆ
author img

By

Published : Oct 10, 2020, 6:45 AM IST

ಕ್ವೆಟ್ಟಾ: ನೈಋತ್ಯ ಪಾಕಿಸ್ತಾನದಲ್ಲಿ ಬೈಕ್​ ಮೇಲೆ ತೆರಳುತ್ತಿದ್ದ ಬಂದೂಕುಧಾರಿಗಳು ಜನಪ್ರಿಯ ಸ್ಥಳೀಯ ಗಾಯಕ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆಯ ತಂದೆ ಹನೀಫ್ ಚಾಮ್ರೋಕ್​ನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇಶದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಟರ್ಬತ್ ಪಟ್ಟಣದಲ್ಲಿ ಈ ಘನಟೆ ನಡೆದಿದೆ. ಹತ್ಯೆಯ ಉದ್ದೇಶ ತಕ್ಷಣವೇ ತಿಳಿದು ಬಂದಿಲ್ಲ ಮತ್ತು ಇಲ್ಲಿಯವರೆಗೆ ಯಾರೂ ಕೂಡ ಹತ್ಯೆಯ ಜವಾಬ್ದಾರಿಯನ್ನು ಹೊತ್ತುಕೊಂಡಿಲ್ಲ. ಗುಂಡು ಹಾರಿಸಿದ ನಂತರ ಬಂದೂಕುಧಾರಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ರೋಶನ್ ಅಲಿ ಮಾಹಿತಿ ನೀಡಿದ್ದಾರೆ.

ಹತ್ಯೆಗೀಡಾದ ಗಾಯಕ ಹನೀಫ್ ಚಾಮ್ರೋಕ್ ಮಹಿಳಾ ಕಾರ್ಯಕರ್ತೆ ತಯಾಬಾ ಬಲೂಚ್ ಅವರ ತಂದೆ. ಅವರು ಪಾಕಿಸ್ತಾನದ ಭದ್ರತಾ ಪಡೆಗಳ ನಡೆಯನ್ನು ಕಟುವಾಗಿ ಟೀಕಿಸುತ್ತಿದ್ದರು.

ಪ್ರತ್ಯೇಕತಾವಾದಿಗಳು ಆಗಾಗ್ಗೆ ಬಲೂಚಿಸ್ತಾನದಲ್ಲಿ ಶಂಕಿತರನ್ನು ಬಂಧಿಸಲು ಭದ್ರತಾ ಪಡೆಯ ಅಧಿಕಾರಿಗಳನ್ನು ಪ್ರೇರೇಪಿಸುತ್ತಾರೆ. ಕಾನೂನು ಬಾಹಿರವಾಗಿ ಜನರನ್ನು ಹಿಡಿದಿಟ್ಟುಕೊಳ್ಳುವ ಭದ್ರತಾ ಪಡೆಗಳನ್ನು ಮಾನವ ಹಕ್ಕುಗಳ ಕಾರ್ಯಕರ್ತರು ಹೆಚ್ಚಾಗಿ ದೂಷಿಸುತ್ತಾರೆ. ಬಂಧಿತರ ಮೇಲೆ ಸಾಮಾನ್ಯವಾಗಿ ಆರೋಪ ಹೊರಿಸಲಾಗುವುದಿಲ್ಲ ಮತ್ತು ನ್ಯಾಯಾಲಯಕ್ಕೆ ಹಾಜರುಪಡಿಸುವುದಿಲ್ಲ. ಇದು ಅವರ ಕುಟುಂಬದ ಆಕ್ರೋಶಕ್ಕೆ ಕಾರಣವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.